ಪಾರದರ್ಶಕತೆಯಿಂದ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ

0
83

ಶಹಾಬಾದ: ಯಾವುದೇ ಸಂಘಗಳು ಅಭಿವೃದ್ಧಿ ಹೊಂದಲು ಆ ಸಂಘದಲ್ಲಿನ ಪಾರದರ್ಶಕ ಆಡಳಿತವೇ ಮುಖ್ಯ ಕಾರಣವಾಗಿರುತ್ತದೆ ಎಂದು ಕಾಂಗ್ರೆಸ್ ಮುಖಂಡ ಶಿವಾನಂದ ಪಾಟೀಲ ಮರತೂರ ಹೇಳಿದರು.

ಅವರು ಸೋಮವಾರ ಮರತೂರ ಗ್ರಾಮದಲ್ಲಿ ಆಯೋಜಿಸಲಾದ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಹಕಾರಿ ದುರೀಣರ ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಎಷ್ಟೋ ಸಂಘಗಳು ಹುಟ್ಟುತ್ತವೆ.ಅಷ್ಟೇ ಬೇಗನೆ ಮುಚ್ಚಲ್ಪಡುತ್ತಿವೆ. ಕಾರಣ ಸಂಘದಲ್ಲಿ ಪಾರದರ್ಶಕತೆ ಇಲ್ಲದೇ ಇರುವುದು. ಆದ್ದರಿಂದ ಸಂಘದ ಪದಾಧಿಕಾರಿಗಳಲ್ಲಿ ಒಮ್ಮನಸ್ಸಿನಿಂದ ಕಾರ್ಯನಿರ್ವಹಿಸಿದರೇ ಉತ್ತಮ ಬೆಳವಣಿಗೆ ಕಾಣಬಹುದು ಎನ್ನುವುದಕ್ಕೆ ಮರತೂರ ಪತ್ತಿನ ಸಹಕಾರಿ ಸಂಘ ಉದಾಹರಣೆಯಾಗಿದೆ ಎಂದರು.

ಮರತೂರ ಗ್ರಾಪಂ ಸದಸ್ಯ ಅಜಿತ್‍ಕುಮಾರ ಪಾಟೀಲ ಮಾತನಾಡಿ, ಸಂಘದ ಪದಾಧಿಕಾರಿಗಳ ಒಗ್ಗಟ್ಟು ಮತ್ತು ಸಮರ್ಪಣಾ ಭಾವವೇ ಸಂಘದ ಬೆಳವಣಿಗೆಗೆ ದಾರಿದೀಪವಾಗುತ್ತದೆ.ಆದ್ದರಿಂದ ಎಲ್ಲರೂ ಒಮ್ಮನಸ್ಸಿನಿಂದ ಕೆಸ ಮಾಡುವ ಮೂಲಕ ಸಂಘಗಳ ಸವಲತ್ತುಗಳನ್ನು ಬಡ ರೈತರಿಗೆ ತಿಳಿಸುವಂತ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದರು.

ಮರತೂರ ವೀರಕ್ತ ಮಠದ ಶ್ರೀಶೈಲ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ಹೇರೂರ್ ಉದ್ಘಾಟಿಸಿದರು. ಸಹಕಾರ ಪಿತಾಮಹ ರಾಮಣ್ಣಗೌಡ ಸಿದ್ದನಗೌಡ ಭಾವಚಿತ್ರಕ್ಕೆ ಶಿವಾನಂದ ಪಾಟೀಲ, ಅಜಿತ್‍ಕುಮಾರ ಪಾಟೀಲ ಮಾಲಾರ್ಪಣೆ ಮಾಡಿದರು. ಸಂಘದ ಅಧ್ಯಕ್ಷರಾದ ಡಾ.ರವೀಂದ್ರ ಬಸವಣ್ಣಪ್ಪ ನರೋಣಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ಹೇರೂರ್, ಉಣ್ಣೆ ಮತ್ತು ಕುರಿ ನಿಗಮದ ಅಧ್ಯಕ್ಷರಾದ ದೇವೆಂದ್ರಪ್ಪ ಪೂಜಾರಿ, ಸಹಕಾರಿ ದುರೀಣರಾದ ಶಿವಾನಂದ ಪಾಟೀಲ,ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಅಜಿತ್‍ಕುಮಾರ ಪಾಟೀಲ, ಡಾ.ಬಸವರಾಜ ಪಾಟೀಲ, ಸಿದ್ರಾಮಪ್ಪ ಜೇವರ್ಗಿ, ಶರಣಬಸಪ್ಪ ಪಟ್ಟೇದ್, ಜಯಶೀಲ್ ರೆಡ್ಡಿ, ಸೋಮಶೇಖರ ದಾಶೆಟ್ಟಿ,ಗುರುನಾಥ ಕಂಬಾ, ಶರಣಗೌಡ ಪಾಟೀಲ,ಈರಣ್ಣ ಬುಕ್ಕನ್ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ,ಭೀಮಾಶಂಕರ ಖೇಣಿ, ಅಪ್ಪುಗೌಡ ಪಾಟೀಲ ತರನಳ್ಳಿ, ಶೌಕತ್ ಅಲಿ, ಕರಬಸಪ್ಪ ರಾಯನಾಡ್ ವೇದಿಕೆಯ ಮೇಲಿದ್ದರು. ನೀಲಕಂಠ ಕಂಡಗೂಳ ನಿರೂಪಿಸಿದರು, ಶ್ಯಾಮರಾಯಗೌಡ ಪಾಟೀಲ ವರದಿ ವಾಚನ ಮಾಡಿದರು, ಈರಣ್ಣ ಬುಕ್ಕನ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here