ಶಹಾಬಾದ: ಪಾಚೀನಕಾಲದಿಂದಲೂ ತನ್ನದೆಯಾದ ಪರಂಪರೆ, ಸಂಸ್ಕøತಿಯನ್ನು ಬೆಳೆಸಿಕೊಂಡು ಬಂದಿರುವ ಸುಂದರ, ಸ್ವಾರಸ್ಯಕರ ಹಾಗೂ ಕೇಳುವುದಕ್ಕೂ ಹಿತವಾಗಿರುವ ಸಂಪರ್ಕ ಭಾಷೆಯೇ ಹಿಂದಿ ಭಾಷೆಯಾಗಿದೆ ಎಂದು ಕಲಬುರಗಿ ವಿ.ಜಿ.ಮಹಿಳಾ ಪದವಿ ಮಹಾವಿದ್ಯಾಲಯದ ಹಿಂದಿ ಪ್ರಾಧ್ಯಾಪಕ ಪ್ರೇಮಚಂದ ಚವ್ಹಾಣ ಹೇಳಿದರು.
ಅವರು ಸೋಮವಾರ ನಗರದ ರಾಷ್ಟ್ರ ಭಾಷಾ ಶಿಕ್ಷಣ ಸಮಿತಿಯ ಸೇಠ ಗೋವರ್ಧನಲಾಲ ಹಿಂದಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಹಿಂದಿ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಪಡೆದ ನಂತರ ರಾಷ್ಟ್ರ ಭಾಷೆಯಾಗಿ ಯಾವ ಮಟ್ಟದಲ್ಲಿ ಬೆಳೆಯಬೇಕಾಗಿತ್ತೋ, ಆ ಮಟ್ಟದಲ್ಲಿ ಹಿಂದಿ ಭಾಷೆಯು ಬೆಳೆಯದೇ ಇರುವದು ವಿಷಾದನೀಯವಾಗಿದೆ. ಪ್ರಸ್ತುತ ಭಾμÁ ಸರ್ವೇ ನಡೆದರೆ ಹಿಂದಿ ದೇಶದ ಏಕೈಕ ಭಾμÉಯಾಗಿ ಹೊರಹೊಮ್ಮಲಿದೆ. ಆದರೆ ಇದಕ್ಕೆ ಆಡಳಿತ ವರ್ಗ ಮನಸ್ಸು ಮಾಡಬೇಕು ಎಂದರು.
ಪ್ರತಿಯೊಬ್ಬರಿಗೂ ಅವರದೇ ಆದ ಮಾತೃಭಾಷೆ ಬಗ್ಗೆ ಹೆಚ್ಚಿನ ಪ್ರೀತಿ ಇರುವುದು ಸಹಜ ಗುಣ. ಆದರೆ ರಾಷ್ಟ್ರದ ಪ್ರಶ್ನೆ ಬಂದಾಗ ಹಿಂದಿಯನ್ನು ನಾವು ಅನಿವಾರ್ಯವಾಗಿ ನಮ್ಮದಾಗಿಸಿಕೊಳ್ಳಬೇಕಾಗಿದೆ.ಸರಕಾರ ಹಿಂದಿ ಭಾಷೆಯ ಬೆಳವಣಿಗೆಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ಕಾರ್ಯಪ್ರವೃತ್ತವಾಗಿದೆ.ಹಿಂದಿ ಭಾμÉ ಭಾರತದ ಅಧಿಕೃತ ಭಾμÉ ಆಗಿದ್ದು ಅದು ರಾಷ್ಟ್ರ ಭಾμÉ ಆಗಬೇಕೆಂದು ಕರೆಕೊಟ್ಟರು. ದೇಶದ ಹಲವೆಡೆ ಹಿಂದಿ ಮಾತನಾಡುವ ಜನರಿದ್ದಾರೆ.ಹಿಂದಿ ಯಾರಿಗೂ ಹೇರಿಕೆಯಲ್ಲ, ಅದನ್ನು ಅಭಿಮಾನದಿಂದ ಎಲ್ಲರೂ ಸ್ವೀಕರಿಸಬೇಕು.ಪರ್ವತ ಸಾಲು ದೇಶವನ್ನುರಕ್ಷಿಸುವಂತೆ, ಹಿಂದಿ ಭಾμÉ ಕಲಿತರೆ ಅದು ವ್ಯಕ್ತಿಯನ್ನು ಎಲ್ಲಾ ಸಂದರ್ಭದಲ್ಲಿಯೂ ರಕ್ಷಿಸುತ್ತದೆ.ಹಿಂದಿ ಬಗ್ಗೆ ಅಭಿಮಾನ ಹಾಗೂ ಅಭಿರುಚಿ ಅತ್ಯಗತ್ಯ ಎಂದು ತಿಳಿಸಿದರು.
ಸೇಠ ಗೋವರ್ಧನಲಾಲ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿ ಬಹಳ ಸರಳವಾದ, ಮಧುರವಾದ ಭಾμÉಯಾಗಿದೆ. ಹಿಂದಿ ವಿಶ್ವದ ನಾಲ್ಕನೇ ಭಾμÉಯಾಗಿ ಗುರುತಿಸಿಕೊಂಡಿದೆ. ಇದು ಹೃದಯದ ಭಾμÉಯಾಗಿದ್ದು, ದೇಶದ ಜನತೆಯನ್ನು ಸಂಪರ್ಕ ಬೆಸೆಯುವ ಹಾಗೂ ಒಗ್ಗೂಡಿಸುವ ಶಕ್ತಿ ಹಿಂದಿ ಭಾμÉಗೆ ಇದೆ ಎಂದು ಹೇಳಿದರು.
ಅತಿಥಿಗಳಾಗಿ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ದಿಲೀಪ ಯಲಶೆಟ್ಟಿ, ಸದಸ್ಯರಾದ ಅನೀಲಬೋರಗಾಂವಕರ್, ಸಿ.ಎ.ಇಂಗಿನಶೆಟ್ಟಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ರಾಜಕುಮಾರ ಬಾಸೂತ್‍ಕರ್, ಹಿಂದಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಅನೀತಾ ಶರ್ಮಾ, ಎಸ್.ಎಸ್.ನಂದಿ ಪ್ರೌಢಶಾಲೆಯ ಮುಖ್ಯಗುರು ಸುಧೀರ ಕುಲಕರ್ಣಿ ವೇದಿಕೆಯ ಮೇಲಿದ್ದರು.
ಶಿಕ್ಷಕ ಬಾಬಾ ಸಾಹೇಬ ಸಾಳುಂಕೆ ನಿರೂಪಿಸಿ,ಪ್ರಾಸ್ತಾವಿಕ ನುಡಿದರು. ಶಿಕ್ಷಕಿ ಲತಾ ಸಾಳುಂಕೆ ಪ್ರಾರ್ಥಿಸಿದರು, ಶಿಕ್ಷಕಿ ಮಹೇಶ್ವರಿ ಗುಳಿಗಿ ಸ್ವಾಗತಿಸಿದರು,ಶಿಕ್ಷಕಿ ಭಾರತಿ.ಎಸ್.ಚವ್ಹಾಣ ವಂದಿಸಿದರು.