ಕೊಪ್ಪಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಗಂಗಾವತಿ ವತಿಯಿಂದ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ರಾಷ್ಟೀಯ ಆರೋಗ್ಯ ಅಭಿಯಾನದ ಭಾಗವಾಗಿ ಮ್ಯಾರಥಾನ್ ರ್ಯಾಲಿ ಹಾಗೂ ಯೋಗ ಪ್ರಾತ್ಯಕ್ಷಿಕೆ ಮಂಗಳವಾರ ಬೆಳಗ್ಗೆ ನಡೆಯಿತು.
ಪಾಪ್ಯುಲರ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಜಹೀರ್ ಅಬ್ಬಾಸ್ ಧ್ವಜ ಹಸ್ತಾಂತರ ಮಾಡುವ ಮೂಲಕ ಮ್ಯಾರಥಾನ್ ರ್ಯಾಲಿಗೆ ಚಾಲನೆ ನೀಡಿದರು. ಖಾದ್ರಿಯ ಮಸ್ಜಿದ್ ನಿಂದ ಮ್ಯಾರಥನ್ ರ್ಯಾಲಿ ಪ್ರಾರಂಭವಾಗಿ ಕರ್ನುಲ್ ಸಾಹೇಬ್ ದರ್ಗಾ ಮುಂಭಾಗದ ಮೈದಾನದಲ್ಲಿ ಕೊನೆಗೊಂಡಿತು. ನಂತರ ಪಾಪ್ಯುಲರ್ ಫ್ರಂಟ್ ಕೊಪ್ಪಳ ತಂಡದಿಂದ ಆತ್ಮ ರಕ್ಷಣಾ ಕಲೆ ಹಾಗೂ ಯೋಗ ಪ್ರಾತ್ಯಕ್ಷಿಕೆ ಡೆಮೋ ತೋರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ SDPI ರಾಜ್ಯ ಮುಖಂಡರಾದ ಮೋಸಿನ್ ಗುಲ್ಬರ್ಗ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿಯು ಕ್ಷೀಣಿಸುತ್ತಿದ್ದು, ಉತ್ತಮ ಆರೋಗ್ಯಯುತ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಒಂದು ಸಮುದಾಯ ಅಥವಾ ಜನಾಂಗ ಅಭಿವೃಧ್ಧಿ ಹೊಂದಬೇಕಾದರೆ ಮುಖ್ಯವಾಗಿ ಆ ಸಮೂಹವು ಆರ್ಥಿಕ, ಶೈಕ್ಷಣಿಕ, ಮಾನಸಿಕ ಹಾಗೂ ದೈಹಿಕವಾಗಿ ಸಬಲೀಕರಣಗೊಂಡಾಗ ಮಾತ್ರ, ಈ ನಿಟ್ಟಿನಲ್ಲಿ ಫ್ಯಾಶಿಸಂ ಈ ದೇಶಕ್ಕೆ ಮಾರಕಾವಾಗಿದ್ದು ಇದನ್ನು ಎದುರಿಸಲು ಎಲ್ಲಾ ರೀತಿಯಲ್ಲಿ ನಮ್ಮನ್ನು ಸಜ್ಜುಗೊಳಿಸಬೇಕು ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ಕೊಪ್ಪಳ ಜಿಲ್ಲಾಧ್ಯಕ್ಷರಾದ ಜಹೀರ್ ಅಬ್ಬಾಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಪಾಪ್ಯುಲರ್ ಫ್ರಂಟ್ ಕೊಪ್ಪಳ ಜಿಲ್ಲಾ ಕಾರ್ಯದರ್ಶಿಯಾದ ಫಯಾಜ್, ಜಿಲ್ಲಾ ಸಮಿತಿ ಸದಸ್ಯರಾದ ಮಹೆಬೂಬು ರಝ, ಸಲೀಂ, ಮತ್ತು ಪ್ರಗತಿಪರ ಚಿಂತಕರಾದ ಭರದ್ವಜ್, ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಸೈಯದ್ ಸರ್ಫಾರಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅಬ್ಬುಜರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.