ಕಲಬುರಗಿ: ವಿಚಾರವಾದಿಗಳ ಕೊಲೆಗೆ ಇನ್ನೂ ಸ್ಪಷ್ಟತೆ, ನ್ಯಾಯ ನೀಡಿಲ್ಲ. ಪಬ್ಲಿಕ್ ಫಂಡರ್ ವಿವಿ ವಿದ್ಯಾರ್ಥಿಗಳ ಜೀವನವನ್ನು ಬರಬಾದ್ ಮಾಡುತ್ತಿದ್ದೀರಿ? ಇದೆಲ್ಲ ಯಾಕೆ? ಎಂದು ನೇರವಾಗಿ ಮೋದಿಯವರನ್ನು ಪ್ರಶ್ನಿಸಿದವರು ಭಾರತದ ಬಹುತ್ವ ಚಿಂತಕ ಡಾ. ಕನ್ಹಯ್ಯ ಕುಮಾರ.
ಕಲಬುರಗಿ ಶ್ರೀನಿವಾಸಗುಡಿ ಮೆಮೋರಿಯಲ್ ಟ್ರಸ್ಟ್ ಹಾಗೂ ಸಂವಿಧಾನ ಪರ ಸಂಘಟನೆಗಳ ಒಕ್ಕೂಟ ಇಂದು ಸಂಜೆ ನಗರದ ಡಾ. ಅಂಬೇಡ್ಕರ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನದ ರಕ್ಷಣೆ ಮತ್ತು ಯುವ ಜನತೆಯ ಹೊಣೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಹಿಂದು ಮುಸ್ಲಿಂರು ಮಾತ್ರ ಇಂದು ಸಂಕಷ್ಟದಲ್ಲಿ ಇಲ್ಲ. ಇಡೀ ಹಿಂದುಸ್ತಾನ್ ಸಂಕಷ್ಟ ದಲ್ಲಿದೆ. ಚಾಪ್ಲೂಸಿ ಮಾಡಿದ್ದರಿಂದಲೇ ಈ ಹಿಂದೆ ಭಾರತ ಬ್ರಿಟಿಷ್ ರ ಆಡಳಿತಕ್ಕೆ ಒಳಪಟ್ಟಿತ್ತು. ಇದೀಗ ವಿವಿ ಕುಲಪತಿಗಳು ಸಹ ಅದೇರೀತಿ ಸರ್ಕಾರದ ಪರವಾಗಿ ಅದೇ ಕೆಲಸ ಮಾಡಿ ನಮ್ಮ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ ಎಂದರು.
ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ತಮ್ಮ ಭಾಷಣ ಶುರು ಮಾಡಿದ ಡಾ. ಕನ್ಹಯ್ಯ ಕುಮಾರ ಕನ್ನಡ ಬಾರದ್ದಕ್ಕೆ ಕ್ಷಮೆ ಕೇಳಿದರು. ಎಪಿಜೆ ಅಬ್ದುಲ್ ಕಲಾಂ ಜನುಮ ದಿನದಂದು ನಾನು ಮೋದಿಯವರನ್ನು ಪ್ರಶ್ನಿಸುತ್ತೇನೆ. ಮಾತಾಡುವವರರನ್ನು ಯಾಕೆ ತಡೆಯುತ್ತೀರಿ? ಬಸವಣ್ಣ, ಬುದ್ಧ ಮತ್ತು ಖ್ವಾಜಾ ಬಂದೇನವಾಜ್, ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗಬೇಕಿದೆ.
ಡಾ. ಕನ್ಹಯ್ಯ ಕುಮಾರ
2014ಕ್ಕಿಂತ ಮೊದಲು ರಿಲಾಯನ್ಸ್ ಪೆಟ್ರೋಲ್ ಬಂದ್ ಆಗುದ್ದವು. ಈಗ ಏನಾಗಿದೆ ನೀವೆ ಯೋಚಿಸಿ ಎಂದರು. ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ರೈತರ ಆತ್ಮಹತ್ಯೆ ನಡೆದಿವೆ. ಇದೆಲ್ಲದಕ್ಕೆ ನಿಮ್ಮಲ್ಲಿ ಉತ್ತರವೇನಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಚುಚ್ಚಿದರು. ಆಡಳಿತ ನಿಮ್ಮ ಕೈಯಲ್ಲಿ ಇದೆ ಎಂದು ನೀವು ಏನು ಮಾಡಿದರೂ ನಡೆಯುತ್ತದೆ.ಪರಂಪರೆ ಹೆಸರಿನಲ್ಲಿ ನೀವು ಮಾಡ ಹೊರಟಿರುವುದು ಏನು ಎಂದು ಆರ್.ಎಸ್.ಎಸ್. ನಿಲುವು ಖಂಡಿಸಿದರು ಮಾತ್ರವಲ್ಲ.ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸತ್ಯ ಮತ್ತು ಸತ್ಯದ ಮಾತುಗಳನ್ನು ಯಾರಿಂದಲೂ ಮುಚ್ಷಿಡಲು, ಬಚ್ಚಿಡಲು ಸಾಧ್ಯವಿಲ್ಲ. ಒಂದಿಲ್ಲ ಒಂದು ದಿನ ಅದು ಮತ್ತೆ ಚಿಗುರೊಡೆದು ಬೆಳೆದೇ ಬೆಳೆಯುತ್ತದೆ. ನಾವು ಇಡಿ, ಸುಳ್ಳು ಮೊಕದ್ದಮೆಗಳಿಗೆ ಹೆದರುವುದಿಲ್ಲ ಎಂದು ಹೇಳಿದರು. ಮೋದಿ ಗರೀಬ್ ಎಂದು ಕೋಟ್ಯಂತರ ರೂಪಾಯಿ ಜಾಹೀರಾತು ಖರ್ಚು ಮಾಡಲಾಗುತ್ತಿದೆ. ಆದರೆ ಗರೀಬ್ ರಿಗಾಗಿ ನೀವು ಏನು ಮಾಡಿದಿರಿ? ಎಂದು ಮೋದಿಯವರನ್ನು ನೇರವಾಗಿ ಪ್ರಶ್ನಿಸಿದರು.
ಅನ್ನ, ಆಹಾರ, ನೀರಿಗೆ ಬರ ಬಂದಿದ್ದರೆ ಏನಾದರೂ ಪರಿಹಾರ ನೀಡಬಹುದು. ಆದರೆ ಇದೀಗ ಮನುಷ್ಯತ್ವಕ್ಕೆ ಬರ ಬಂದಿದೆ. ಸಂವಿಧಾನದ ರಕ್ಷಣೆಯಿಂದ ಭಾರತದ ಬದುಕು ಬದಲಾಗಬಹುದು. ಸಂವಿಧಾನದ ಮೂಲಕ ಚುನಾಯಿತರಾದ ಜನರು ಸಂವಿಧಾನದ ಕೊಲೆ ನಡೆಸಿದ್ದಾರೆ. ಕಲಬುರಗಿಯಿಂದ ಶಾಂತಿ, ಸೌಹಾರ್ದತೆಯ ಸಂದೇಶ ನೀಡಬೇಕು. – ಪ್ರೊ. ಆರ್.ಕೆ. ಹುಡಗಿ
ದೇಶದ ಆರ್ಥಿಕ ಪರಿಸ್ಥಿತಿ ಕುಂಟಿತಕ್ಕೆ ಯಾರು ಕಾರಣರು? ದಿನ ಬೆಳಗಾದರೆ ಯುದ್ಧದ ಮಾತನಾಡುವ ನೀವು ಬುದ್ಧನ ಶಾಂತಿ ಸಂದೇಶ ಎಲ್ಲಿ ಪಾಲಿಸುತ್ತೀದ್ದೀರಿ? ಎಂದು ಮೋದಿಯವರ ಕಾರ್ಯವನ್ನು ಕುಟುಕಿದರು. ಮೋದಿ ಇಲ್ಲದಿದ್ದರೆ ಇನ್ಯಾರು? ಎಂದು ಹಣ ಖರ್ಚು ಮಾಡಿ ಈ ಕಾರ್ಯ ಮಾಡಿಸಿದ್ದಾರೆ. ಇದು ಜನರಿಗೆ ಗೊತ್ತಾಗಬೇಕಿದೆ. ಬಹು ಸಂಸ್ಕೃತಿ, ಬಹು ಭಾಷೆಯ ಈ ದೇಶವನ್ನು ದಿವಾಳಿ ಎಬ್ಬಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಹಣ್ಣಾ ಹಜಾರೆ ಹಿಂದೆ ಬಿದ್ದಿದ್ದ ಜನರನ್ನು ಮೋದಿಯ ಹಿಂದೆ ಬೀಳುವಂತೆ ಮಾಡಿದ್ದು, ಈ ಪ್ರಚಾರದಿಂದ. ಬಹು ಸಂಸ್ಕೃತಿಯನ್ನು ಕಾಪಾಡಿಕೊಂಡು ಬರಬೇಕು ಎಂದು ಹೇಳಿದರು. ಮಂಗಳ, ಚಂದ್ರನ ಅಂಗಳದಲ್ಲಿ ಕಾಲಿಡುವ ಈ ದೇಶದಲ್ಲಿ ಗಟಾರದಲ್ಲಿ ಇಳಿದು ಸ್ವಚ್ಛ ಮಾಡಿ ಬದುಕವ ಜನರಿದ್ದಾರೆ ಎಂಬುದನ್ನು ಆಡಳಿತ ನಡೆಸುವರು ನೆನಪಿಡಬೇಕು ಎಂದು ವಿವರಿಸಿದರು.
ಸ್ವಾಗತಬಸಮಿತಿ ಅಧ್ಯಕ್ಷ ಬಿ.ಬಿ. ರಾಂಪುರೆ ಸ್ವಾಗತಿಸಿದರು. ಪ್ರಗತಿಪರ ಚಿಂತಕರಾದ ಪ್ರೊ. ಆರ್.ಕೆ. ಹುಡಗಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ರಾಠೋಡ ನಿರೂಪಿಸಿದರು. ಚಿಂತಕಿ ಕೆ.ನೀಲಾ, ಬಸಣ್ಣ ಸಿಂಗೆ, ಮಾರುತಿ ಗೋಕಲೆ, ಪಿ. ವಿಲಾಸಕುಮಾರ, ಲಕ್ಷ್ಮೀಕಾಂತ ಹುಬ್ಬಳ್ಳಿ, ಮೆಹರಾಜ್ ಪಟೇಲ್, ಮೌಲಾ ಮುಲ್ಲಾ, ದತ್ತಾತ್ರೇಯ ಇಕ್ಕಳಕಿ, ಭೀಮಾಶಂಕರ ಮಾಡ್ಯಾಳ ಇತರರಿದ್ದರು.