ಕಲಬುರಗಿ: “ಸ್ವಚ್ಚತೆಯೇ ಆರೋಗ್ಯದ ಮೂಲ ಮಂತ್ರ” ಎಂದು ಶಾಂತಾ ಆಸ್ಪತ್ರೆಯ ವೈದ್ಯೆ ಡಾ. ಅಂಬಿಕಾ ಪಾಟಿಲ್ ಹೇಳಿದರು.
ಇಂದು ಅವರು ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಶಾಂತಾ ಆಸ್ಪತ್ರೆಯ ಸಹಯೋಗದಲ್ಲಿ ಸ್ವಚ್ಚತಾ ಸಿಬ್ಬಂದಿಗಾಗಿ ಆಯೋಜಿಸಿದ್ದ ಸಫಾಯಿ ಮಿತ್ರ ಸುರಕ್ಷಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ “ಬಹುತೇಕ ರೋಗಗಳು ಸ್ವಚ್ಚತೆಯ ಕೊರತೆಯಿದಿಂದ ಬರುತ್ತವೆ. ನಾವೆಲ್ಲರೂ ನಮ್ಮ ಮನೆ ಮತ್ತು ದೇಹವನ್ನು ಸ್ವಚ್ಚವಾಗಿ ಇಟ್ಟು ಕೊಳ್ಳುವುದರಿಂದ ರೋಗಗಳನ್ನು ಬರದಂತೆ ತಡೆಯಬಹುದಾಗಿದೆ. ಅದರಲ್ಲೂ ವಿಶ್ವ ವಿದ್ಯಾಲಯದಲ್ಲಿ ಸ್ವಚ್ಚತೆಯನ್ನು ಕಾಪಾಡುವ ತಾವು ತಮ್ಮ ಸ್ವಚ್ಚತೆಯನ್ನೂ ಕಾಪಾಡಿಕೊಳ್ಳಬೇಕು. ಉಟದ ಮೊದಲು, ಬಹಿರ್ದೆಶೆಗೆ ಹೊದ ಮೇಲೆ, ಯಾವುದೆ ಕೆಲಸ ಮಾಡಿದ ನಂತರ ಕೈಗಳನ್ನು ಸ್ವಚ್ಚವಾಗಿ ತೋಳೆದುಕೊಳ್ಳಿ. ದಿನಾಲು ಸಾಬುನಿಂದ ಮೈತೋಳೆದುಕೊಳ್ಳಿ, ಹೊಲಸು ಕೈಗಳಿಂದ ಕಣ್ಣು, ಕಿವಿ, ಮೂಗುಗಳನ್ನು ಮುಟ್ಟಬೇಡಿ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದು ಬರದಂತೆ ನೋಡಿಕೊಳ್ಳಿ” ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕುಲಸಚಿವ ಪೆÇ್ರ. ಆರ್ ಆರ್ ಬಿರಾದಾರ ಮಾತನಾಡಿ “ಸ್ವಚ್ಚತೆಯ ಕೊರತೆಯಿಂದ 100 ರಲ್ಲಿ 7 ಜನ ಅನಾರೋಗ್ಯದ ಮೇಲಿನ ವೆಚ್ಚದಿಂದ ಬಡತನಕ್ಕೆ ದೂಡಲ್ಪಡುತ್ತಿದ್ದಾರೆ. ಸ್ವಚ್ಚತೆಯನ್ನು ಕಾಪಾಡುವ ಮೂಲಕ ಪ್ರತಿ ಕುಟುಂಬ ಒಂದು ವರ್ಷದಲ್ಲಿ ಆರೋಗ್ಯದ ಮೇಲೆ ಖರ್ಚು ಮಾಡುವ ಸುಮಾರು 50 ಸಾವಿರ ರೂಗಳ ಉಳಿತಾಯ ಮಾಡಬಹುದೆಂದು ಸರವೇಕ್ಷಣೆಗಳು ಹೇಳುತ್ತವೆ. ಅನಾರಗ್ಯಗವು ನಿಮ್ಮ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ ಅಲ್ಲದೆ ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ತ್ಳು ತ್ತದೆ. ಹಾಗಾಗಿ ತಾವು ಸ್ವಚ್ಚತೆಯನ್ನು ಕಾಪಾಡಿಕೊಂಡು ಆರೋಗ್ಯವಾಗಿರಿ. ಕೆಲಸ ಮಾಡುವಾಗ ಕೊಟ್ಟಂತ ಸುರಕ್ಷತಾ ಕಿಟ್ಗಳನ್ನು ಬಳಸಿ ಮತ್ತು ಸುರಕ್ಷಿತವಾಗಿರಿ” ಎಂದು ಹೇಳಿದರು.
ಇದಕ್ಕೂ ಮೊದಲು ಮಾನ್ಯ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮ ಉದ್ಘಾಟಿಸಿ ಸ್ವಚ್ಚತಾ ಸಿಬ್ಬಂದಿಗಳಿಗೆ ಉಚಿತ ಸುರಕ್ಷತಾ ಕಿಟ್ಗಳನ್ನು ವಿತರಿಸಿದರು. ನಂತರ ಶಾಂತಾ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರು ಸ್ವಚ್ಚತಾ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ನಡೆಸಿದರು. ಔಷದ ಸಹಿತ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಂತಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಂಜೀವ ಪಾಟಿಲ್, ಸಿಯುಕೆಯ ಕ್ಯಾಂಪಸ ಅಭಿವೃದ್ದಿ ವಿಭಾಗದ ಡಿನ್ ಪೆÇ್ರ. ಚನ್ನವೀರ ಆರ್ ಎಂ. ಸ್ವಚ್ಚತಾಹಿ ಸೇವಾ ಯೋಜನೆಯ ನೋಡಲ್ ಅಧಿಕಾರಿ ಡಾ. ಗಣಪತಿ ಬಿ ಸಿನ್ನೂರ, ವೈದ್ಯಾಧಿಕಾರಿ ಡಾ. ಜ್ಯೋತಿ ತೆಗನೂರ ಮತ್ತು ಸ್ವಚ್ಚತಾ ಸಿಬ್ಬಂದಿಗಳು ಹಾಜರಿದ್ದರು.ಲಬುರಗಿ