ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

0
30

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್ ಮಾಡುವ ಮೂಲಕ ಒತ್ತಾಯಿಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಬಪ್ಪರಗಿ ಗ್ರಾಮದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಹಾಗೂ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿರುವವರಲ್ಲಿ ಕೆಲವರನ್ನು ಬಂಧಿಸಿದ್ದಾರೆ.

Contact Your\'s Advertisement; 9902492681

ಪೊಲೀಸರ ಈ ಕ್ರಮಕ್ಕೆ ಸ್ವಾಗತಿಸುತ್ತೇವೆ,ಆದರೆ ಕೊಡೇಕಲ್ ಗ್ರಾಮದಲ್ಲಿ ನಡೆದ ಅತ್ಯಾಚಾರ ಯತ್ನ ಘಟನೆಯ ಆರೋಪಿಗಳನ್ನು ಇದುವರೆಗೆ ಬಂಧಿಸಿಲ್ಲ,ಸಂತ್ರಸ್ತೆಯ ಕುಟುಂಬಸ್ಥರ ಮೇಲೆಯೇ ಹಲ್ಲೆ ನಡೆಸಲಾಗಿದೆ.ಆದರೂ ಪೊಲೀಸರು ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ,ಇದಕ್ಕಾಗಿ ಈಗಾಗಲೇ ಹುಣಸಗಿಯಲ್ಲಿ ರಸ್ತೆ ತಡೆ ನಡೆಸಿ ಬಂಧನಕ್ಕೆ ಒತ್ತಾಯಿಸಿದಾಗ ಡಿವೈಎಸ್ಪಿ ಲಿಖಿತ ಪತ್ರ ನೀಡಿ ಬಂಧಿಸುವುದಾಗಿ ತಿಳಿಸಿದ್ದರು.

ಇದುವರೆಗೂ ಬಂಧಿಸಿಲ್ಲ,ಆದ್ದರಿಂದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಆಗ್ರಹಿಸುತ್ತೇವೆ.ಮತ್ತು ಚೆನ್ನೂರ ಗ್ರಾಮದಲ್ಲಿ ದಲಿತ ಮೇಲೆ ದೌರ್ಜನ್ಯ ಮಾಡಿದವರ ಬಂಧಿಸಬೇಕು,ಕೋನಾಳ ಗ್ರಾಮದಲ್ಲಿ ಹೋರಾಟಗಾರ ಶೇಖಪ್ಪ ಭಂಡಾರಿ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸುವಂತೆ,ಬಪ್ಪರಗಿ ಗ್ರಾಮದ 10 ದಲಿತ ಕುಟುಂಬಗಳಿಗೆ,ಕೊಡೇಕಲ್ ಗ್ರಾಮದ ಸಂತ್ರಸ್ತ ಕುಟುಂಬಕ್ಕೆ ತಲಾ 4 ಎಕರೆ ನೀಡುವಂತೆ ಆಗ್ರಹಿಸಿ ಅಕ್ಟೋಬರ್ 8 ರಂದು ಸುರಪುರ ಬಂದ್ ಮಾಡಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಸ್ಥಾಪಿತ ಬಣದ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಮಾತನಾಡಿ,ಜಿಲ್ಲೆಯ ಅನೇಕ ಕಡೆಗಳಲ್ಲಿ ದಲಿತರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆಗಳು ನಡೆಯುತ್ತಿವೆ.ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸದೆ ವಿಳಂಬ ಮಾಡುವುದು ಬೇಸರದ ಸಂಗತಿಯಾಗಿದೆ. ಕೂಡಲೇ ಕೊಡೇಕಲ್ ಗ್ರಾಮದ ಘಟನೆಯ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸುತ್ತೇವೆ.ಇಲ್ಲವಾದಲ್ಲಿ 8 ರಂದು ಸುರಪುರ ಬಂದ್ ಮಾಡಲಾಗುವುದು,ಇದಕ್ಕೂ ಸ್ಪಂಧಿಸದಿದ್ದಲ್ಲಿ ಮುಂದೆ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮೂರ್ತೆಪ್ಪ ಬೊಮ್ಮನಹಳ್ಳಿ ನಿರೂಪಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ದೇವಿಂದ್ರಪ್ಪ ಬಾದ್ಯಾಪುರ,ರಾಮಣ್ಣ ಶೆಳ್ಳಗಿ,ಬಸವರಾಜ ಶೆಳ್ಳಗಿ,ನಾಗರಾಜ ಓಕಳಿ,ಹುಲಗಪ್ಪ ಬೈಲಕುಂಟಿ,ದೇವು ಹೊರಟ್ಟಿ,ರಮೇಶ ಪೂಜಾರಿ,ಮಾನಯ್ಯ ಶೆಳ್ಳಿಗಿ,ರಾಯಪ್ಪ ಕೊರೆ,ಖಾಜಾಹುಸೇನ್ ಗುಡಗುಂಟಿ,ವೀರಭದ್ರ ತಳವಾರಗೇರ,ಮಲ್ಲಿಕಾರ್ಜುನ ವಾಗಣಗೇರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here