ಯಾದಗಿರಿ: ಅಸ್ಪೃಷ್ಯತೆ ಶಾಪವಾಗಿದ್ದು ತಿಳಿವಳಿಕೆ ಕೊರತೆಯಿಂದ ಕೆಲವರು ಅಂಧಾನುಕರಣೆ ಮಾಡಿ ಆಚರಿಸುತ್ತಿದ್ದಾರೆ. ಅವರಲ್ಲಿಯೂ ಜಾಗೃತಿ, ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಈಶಪ್ಪ ಸಾಹುಕಾರ್ ರ‍್ಯಾಕಾ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊನಿಗೇರಾ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಯಾದಗಿರಿಯ ಸ್ವರ ಸಾಮ್ರಾಟ ಸಂಗೀತ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ್ದ ಅಸ್ಪೃಶ್ಯತಾ ನಿವಾರಣೆ ವಿಚಾರಗೋಷ್ಠಿ ಮತ್ತು ಬೀದಿ ನಾಟಕ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಉದ್ಘಾಟಿಸಿ ಮಾತನಾಡಿ ಇಂದು ಎಲ್ಲರಲ್ಲಿ ಜಾಗೃತಿ ಮೂಡದೇ ಇರುವುದರಿಂದ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆಯದೇ ಇರುವ ಜನರು ಹೆಚ್ಚಿನ ಸಂಖ್ಯೆಲ್ಲಿರುವುದರಿಂದ ಕೆಲವರು ತಪ್ಪು ಗ್ರಹಿಕೆಯಿಂದ ಇಂತಹ ಅನಿಷ್ಟ ಪದ್ಧತಿಯನ್ನು ಅಂಧನುಕರಣೆ ಮಾಡುತ್ತಿರುತ್ತಾರೆ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬ ಜಾಗೃತರಾದವರು ಮಾಡಬೇಕೆಂದು ಹೇಳಿದರು.
ಜಾತಿ ಬಿಡಿ ಮಾನವತೆಗೆ ಬೆಲೆ ಕೊಡಿ ಎಂಬ ಶರಣರ ಹಿರಿಯರ ಮಾತಿಗೆ ಗೌರವಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು. ಬುದ್ಧ ಬಸವ ಅಂಬೇಡ್ಕರ್ ಅವರ ಸಂದೇಶ ಅರಿತು ನಡೆದರೆ ಸಮಸ್ಯೆ ಪರಿಹಾರವಾಗುತ್ತವೆ ಎಂದು ಹೇಳಿದರು.
ಗ್ರಾಮೀಣ ಠಾಣೆ ಪಿ.ಎಸ್.ಐ. ವೀರಣ್ಣ ಮಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಅನಕ್ಷರತೆ ಕಾರಣದಿಂದ ಅಜ್ಞಾನ, ತಿಳಿವಳಿಕೆಯ ಕೊರತೆಯಿಂದ ಇಂತಹ ಅನಕ್ಷರತೆಯ ಪಿಡುಗುಗಳು ಇನ್ನು ಬೇರು ಬಿಟ್ಟಿವೆ ಇವನ್ನು ಹೋಗಲಾಡಿಸಲು ಶಿಕ್ಷಣ ಮತ್ತು ಜಾಗೃತಿ ದಿಂದ ಮಾತ್ರ ಸಾಧ್ಯ, ಭೂಮಿಯ ಮೇಲೆ ಒಂದು ಗಂಡು ಒಂದು ಹೆಣ್ಣು ಎರಡೇ ಜಾತಿ ಉಳಿದವುಗಳೆಲ್ಲ ಮನುಷ್ಯರು ಸೃಷ್ಟಿಸಿದವುಗಳಾಗಿವೆ ಕಾಲಕಾಲಕ್ಕೆ ಬಸವಾದಿ ಶರಣರು ಮಹಾಂತರು ಈ ಬಗ್ಗೆ ತಿಳಿಸಿ ಹೇಳಿದರೂ ಜನರಲ್ಲಿರುವ ಅಜ್ಞಾನ ಮತ್ತು ತಿಳಿವಳಿಕೆ ಕೊರತೆಯಿಂದ ಜಾತಿಯತೆ ತಾಂಡವವಾಡುತ್ತಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ತೆ ಅಧ್ಯಕ್ಷ ಶರಣು ಎಸ್. ನಾಟೇಕರ್ ವಹಿಸಿದ್ದರು, ಗ್ರಾಪಂ ಪಿಡಿಓ ಶಿವಶರಣಪ್ಪ ಅಲಿಪುರ, ಉಪಾಧ್ಯಕ್ಷೆ ಮಮತಾ ಯಾದವ, ಸದಸ್ಯರಾದ ನಾಗಮ್ಮ ಯಂಕನಗೌಡ, ಬಸಮ್ಮ, ಶರಣಪ್ಪ ಮಲ್ಲಿಕಾರ್ಜುನ ಕರ್ಕೆನೋರ್, ಲಕ್ಷ್ಮಣ ಗೋಸಿ, ಹೊನ್ನಪ್ಪ ಕೊಳ್ಳಿ, ಹಣಮಂತ ಮೋಟ್ನಳ್ಳಿ, ಮಂಜುಳಾ ವರಕೂರ, ಬನ್ನಮ್ಮ ನಾಗಲಿಂಗಪ್ಪ, ಶಿಲ್ಪಾ ತಿಮ್ಮಣ್ಣ, ಸಾಬಮ್ಮ, ಗ್ರಾಮ ಲೆಕ್ಕಾಧಿಕಾರಿ ಮಹಮ್ಮದಲಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ನಂತರ ಜರುಗಿದ ಜಾನಪದ ಬೀದಿನಾಟಕ ದಲ್ಲಿ ಕಲಾವಿದರಾದ ಮಹಾಂತಯ್ಯ ಸ್ವಾಮಿ ಖಾನಾಪೂರ, ಬಸವರಾಜ ಕ್ಯಾತನಾಳ, ಸದಾಶಿವ ನಾಟೇಕರ್, ಆಶಪ್ಪ ಯರಗೋಳ, ಸುಭಾಸ ದೋರನಳ್ಳಿ, ಸಾಬಣ್ಣ ಗೊಬ್ಬೂರ, ಮಂಜುನಾಥ ಕೊಲ್ಲೂರು, ಶರಣಪ್ಪ ಯರಗೋಳ ಪಾಲ್ಗೊಂಡರು.