ಕಲಬುರಗಿ: ಅನಾಥ ಶವವನ್ನು ಪೋಲಿಸರು ಸೇರಿ ಅಂತ್ಯಸಂಸ್ಕಾರ ನಡೆಸಿದ ಘಟನೆ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ನೆಲೋಗಿಯಲ್ಲಿ ವರದಿಯಾಗಿದೆ.
ಕಲ್ಲೂರ್ (ಕೆ) ಬಳಿ ಇರುವ ಬ್ಯಾರೇಜ್ ಕಂ ಬ್ರಿಜ್‌ನಲ್ಲಿ ಅನಾಥ ಮಹಿಳೆಯ ಶವವೊಂದು ಭೀಮಾ ನದಿಯಲ್ಲಿ ತೇಲಿ ಬಂದಿದ್ದು, ಆ ಶವದ ಗುರುತು ತನಿಖೆಯ ವೇಳೆ ಪತ್ತೆಯಾಗಲಿಲ್ಲ.
ನೆಲೋಗಿ ಪೋಲಿಸ್ ಠಾಣೆಯ ಪಿಎಸ್‌ಐ ಸಿದ್ಧರಾಯ್ ಬಳೂರಗಿ ಹಾಗೂ ಜೈ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಶರಣು ಬಿ. ಕಲ್ಯಾಣಿ ಹಾಗೂ ಪೋಲಿಸರು ಮತ್ತು ಕಾರ್ಯಕರ್ತರು ಸೇರಿ ಅನಾಥ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದರು.