ಕಲಬುರಗಿ: ಬಿತ್ತನೆ ಬೀಜದ ಕೊರತೆ ಸೇರಿದಂತೆ ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಕುರಿತು ರಾಜ್ಯ ಸರಕಾರ ಅಸಡ್ಡೆತನ ತೋರಿಸುತ್ತಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಇಬ್ಬರು ಉಪ ಮುಖ್ಯಮಂತ್ರಿಗಳಿಗೆ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರೂ ಸರ್ಕಾರಕ್ಕೆ ಈ ಕುರಿತು ಅಸಡ್ಡೆತನ ಹಾಗೂ ನಿರ್ಲಕ್ಷತೆ ಏಕೆ?
ಕಲ್ಯಾಣ ಕರ್ನಾಟಕದ ಕುರಿತು ಇದೇ ನಿಮ್ಮ ಬದ್ಧತೆ ನಾ?
ರೈತರಿಗೆ ಬಿತ್ತನೆ ಬೀಜಗಳೂ ಕೊಡಲು ಆಗದಿದ್ದರೆ ಈ ಸರ್ಕಾರ ಯಾಕೆ ಇರಬೇಕು ?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 18, 2019
ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರು ಇಬ್ಬರೂ ಕೂಡಾ ಉಪಮುಖ್ಯಮಂತ್ರಿ ಗಳಾಗಿದ್ದರು ಜಿಲ್ಲೆಯ ರೈತರ ಗೋಳು ಮುಂದುವರೆದಿದ್ದು ಜಿಲ್ಲೆಯಿಂದ ಒಬ್ಬರೂ ಸಚಿವರು ಇಲ್ಲದಿರುವುದರಿಂದ ಮತ್ತೆ ಯಾರ ಬಳಿ ಸಂಕಷ್ಟ ಹೇಳಿಕೊಳ್ಳಬೇಕೆಂದು ಅವರು ಪ್ರಶ್ನಿಸಿದ್ದಾರೆ.
ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ ಎಂದು ಕರೆಯಲಾಗಿದೆ ಆದರೆ ಅಸಡ್ಡೆತನ ಮುಂದುವರೆದಿದೆ ಎಂದು ಶಾಸಕರು ತಮ್ಮ ಅಸಮಧಾನ ಹೊರ ಹಾಕಿದ್ದಾರೆ.