ಸುರಪುರ: ಇಂದು ಸರಕಾರ ಪ್ರತಿಯೊಬ್ಬ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಮಹಿಳೆಯರ ಆರೋಗ್ಯ ಮತ್ತು ಪರಂಪರೆಯನ್ನು ಕಾಪಾಡುವ ಕಾರ್ಯ ಮಾಡುತ್ತಿದೆ ಎಂದು ಸಹಾಯಕ ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ ಮಾತನಾಡಿದರು.
ತಾಲ್ಲೂಕಿನ ಬಾದ್ಯಾಪುರ ಗ್ರಾಮದ ಅಂಗನವಾಡಿ ಕೇಂದ್ರ ಎರಡರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃಧ್ಧಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸ್ತ್ರೀಯರಲ್ಲಿ ಅಪೌಷ್ಟಿಕತೆ ಕಾಡದಂತೆ ಸರಕಾರ ಕ್ರಮವಹಿಸಲು ಪೌಷ್ಟಕತೆಯುಳ್ಳ ಆಹಾರ ಪದಾರ್ಥ ಮತ್ತು ಹಾಲು ಮೊಟ್ಟೆ ನೀಡಲಾಗುತ್ತದೆ. ಜೊತೆಗೆ ಶೆಂಗಾ ಬೆಲ್ಲ ಸೇರಿದಂತೆ ಇತರೆ ಪದಾರ್ಥಗಳನ್ನು ನೀಡಲಾಗುತ್ತದೆ.ಇಂದು ನಡೆಯುವ ಸೀಮಂತ ಕಾರ್ಯದಲ್ಲಿ ಎಲ್ಲ ಗರ್ಭಿಣಿಯರಿಗೆ ಕುಪ್ಪಸ ಬಳೆ ಜೊತೆಗೆ ಎಲೆ ಅಡಿಕೆ ನೀಡಿ ಉಡಿ ತುಂಬಲಾಗುವುದು, ಮತ್ತು ದಿನಾಲು ಕೇಂದ್ರದಲ್ಲಿ ಹಾಲು ಅನ್ನ ಇತರೆ ಆಹಾರವನ್ನು ನೀಡಲಾಗುವುದು.ಗರ್ಭಿಣಿ ಮಹಿಳೆಯರು ಅಂಗನವಾಡಿ ಕೇಂದ್ರಕ್ಕೆ ಬಂದು ಪಡೆದುಕೊಳ್ಳುವಂತೆ ತಿಳಿಸಿದರು.
ನಂತರ ಗರ್ಭಿಣಿ ಸ್ತ್ರೀಯರಾದ ಮೇಘ ಕೂಚಬಾಳ,ಹಣಮಂತಿ ಬಡಿಗೇರ,ತಾಯಮ್ಮ ಹಾವಿನ್,ಶರಣಮ್ಮ ಹೊಸಕೇರಾ,ಲಕ್ಷ್ಮೀ ಬಡಿಗೇರ ಸೇರಿದಂತೆ ಸುಮಾರ ಹನ್ನೊಂದು ಜನ ಮಹಿಳೆಯರಿಗೆ ಸೀಮಂತ ಕಾರ್ಯ ನಡೆಸಲಾಯಿತು.ಈ ಸಂದರ್ಭದಲ್ಲಿ ಇಲಾಖೆಯ ಮಾಳಮ್ಮ ಮಗ್ಗದ,ಚಂದ್ರಲೀಲಾ ಬಿಲ್ಲವ್,ಅಂಗನವಾಡಿ ಕಾರ್ಯಕರ್ತೆ ಬಸವರಾಜೇಶ್ವರಿ ಬಡಿಗೇರ,ಮುಖಂಡರಾದ ಧರ್ಮರಾಜ ಬಡಿಗೇರ,ಕೃಷ್ಣ ಹಾವಿನ್,ಮರೆಮ್ಮ ಹಾವಿನ್,ಸಹಾಯಕಿ ಬೀಮಬಾಯಿ ಮಾನಸಗಲ್ಲ ಇತರರಿದ್ದರು.