ಚನ್ನೂರಕೆ ಗ್ರಾಮದ ದಲಿತ ರೈತರ ಮೇಲಿನ ಪ್ರಕರಣ ಹಿಂಪಡೆದು ಅಟ್ರಾಟಿಸಿ ದಾಖಲಿಸಲು ಆಗ್ರಹಿಸಿ ಮನವಿ

0
59

ಯಾದಗಿರಿ: ಶಹಾಪೂರ ತಾಲ್ಲೂಕಿನ ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನೂರ ಕೆ. ಗ್ರಾಮದಲ್ಲಿ ದಲಿತ ಹಿಂದುಳಿದ ಜನಾಂಗದ ಒಟ್ಟು ೩ ರೈತರ ಮೇಲೆ ದಾಖಲಿಸಿದ ಸುಳ್ಳು ಮೊಕದ್ದಮೆ ವಾಪಸ್ ಪಡೆದು ಮೇಲ್ವರ್ಗದ ೫ ಜನರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.

ದಸಂಸ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಹೊಲದಲ್ಲಿ ಅಕ್ರಮವಾಗಿ ನಾಲೆ ನೀರು ಹರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಕ್ಕೆ ಆಕ್ಷೇಪಿಸಿದ ಬಡ ದಲಿತ ರೈತರಿಗೆ ಅವಾಚ್ಯ ನಿಂದಿಸಿ ಜಾತಿ ನಿಂದನೆ ಮಾಡಿದ್ದಲ್ಲದೇ ತಿರುಗಾ ದಲಿತರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಯಲ್ಲಿ ಗೋಗಿ ಠಾಣೆ ಪೊಲೀಸರು ಸಹ ಶಾಮೀಲಾಗಿ ದಲಿತರ ಮೇಲೆ ಪ್ರಕರಣ ದಾಖಲಿಸಿದ್ದು ಇವುಗಳನ್ನು ವಾಪಸ್ ಪಡೆಯಬೇಕು ಮತ್ತು ಮೇಲ್ವರ್ಗದ ಐದು ಜನ ರೈತರ ಮೆಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಬೆಕೆಂದು ಆಗ್ರಹಿಸಿದರು.

Contact Your\'s Advertisement; 9902492681

ತಕ್ಷಣ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಶಹಪೂರ ಗ್ರಾಮೀಣ ಠಾಣೆ ಮುಮದೆ ಅಮರಣಾಂತ ಉಪವಾಸ ಸತ್ಯಾಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಲ್ಲಿಕಾರ್ಜುನ ಕ್ರಾಂತಿ ಮನವಿ ಸಲ್ಲಿಸಿದರು. ನಿಂಗಪ್ಪ ಕಟಗಿ ಶಹಾಪೂರ, ಅಜಿಜ್ ಸಾಬ ಐಕುರು, ಡಾ. ಮಲ್ಲಿಕಾರ್ಜುನ ಆಶನಾಳ, ತಿಪ್ಪಣ್ಣ ಶಳ್ಳಗಿ, ಮಾನಪ್ಪ ಶೆಳ್ಳಗಿ, ಶರಣಪ್ಪ ಬೋಳಾರಿ, ಚಂದ್ರಕಾಂತ ಹಂಪಿನ್, ದೇವಿಂದ್ರಪ್ಪ ಮೈಲಾಪುರ ಮಲ್ಲಪ್ಪ ಅರಿಕೇರಿ, ಭೀಮಣ್ಣ ಹುಣಸಗಿ, ಭೀಮಣ್ಣ ಕ್ಯಾತನಾಳ, ಶರಣಪ್ಪ ಉಳ್ಳೆಉಸಗೂರು ಗೌತಮ ಕ್ರಾಂತಿ, ಮರೆಪ್ಪ ಹಾಲಗೇರಾ, ಜಿಗ್ನಿಶಿ ಶೆಳ್ಳಗಿ, ದೇವಿಂದ್ರ ಪಟ್ಟೇದಾರ, ಬಸವರಾಜ ಶೆಳ್ಳಗಿ, ಬಸಪ್ಪ ಅಗತೀರ್ಥ, ಮಹೇಶ ಸುಂಗಲ್ಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here