ಆರೋಗ್ಯಕ್ಕೆ ರೋಗ ನಿರೋಧಕ ಶಕ್ತಿ ಅವಶ್ಯ: ಡಾ.ಮತೀನ್

0
54

ಶಹಾಬಾದ: ನಾವು ಆರೋಗ್ಯವಾಗಿರಲು ರೋಗನಿರೋಧಕ ಶಕ್ತಿ ಅಗತ್ಯವಾಗಿದ್ದು, ಅದಕ್ಕಾಗಿ ಮಕ್ಕಳು ಹಸಿರು ತರಕಾರಿ, ಹಣ್ಣುಗಳನ್ನು ತಿನ್ನುವ ರೂಢಿಯನ್ನು ಹಾಕಿಕೊಳ್ಳಬೇಕೆಂದು ಆರ್‍ಬಿಎಸ್‍ಕೆ ವೈದ್ಯ ಡಾ. ಮಹ್ಮದ್ ಮತೀನ್ ಅಲಿ ಹೇಳಿದರು.

ಅವರು ನಗರದ ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದರು.

Contact Your\'s Advertisement; 9902492681

ಮಕ್ಕಳು ಆದಷ್ಟು ಹೊರಗಿನ ತಿಂಡಿಗಳಾದ ಎಣ್ಣೆಯಲ್ಲಿ ಕರಿದ ಪದಾರ್ಥ, ಪಾಕೆಟ್ ಪದಾರ್ಥಗಳನ್ನು ಹಾಗೂ ಲಘು ತಿಂಡಿಗಳಿಗೆ ಮೊರೆ ಹೋಗದೇ ಮನೆಯಲ್ಲಿ ತಯ್ಯಾರು ಮಾಡಿದ ಆಹಾರವನ್ನು ಸೇವಿಸಿ.ಅದರಲ್ಲೂ ಮೊಳಕೆ ಬಂದ ಬೇಳೆ ಕಾಳುಗಳು, ಬಾಳೆ ಹಣ್ಣು, ಬೆಳ್ಳುಳ್ಳಿ, ಈರುಳ್ಳಿ ಮೊದಲಾದವುಗಳನ್ನು ಸೇವಿಸುವುದರಿಂದ ಅದರಲ್ಲಿರುವ ಜೀವ ಸತ್ವಗಳು ದೇಹದಲ್ಲಿ ಸೇರ್ಪಡೆಯಾಗಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು.

ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ವ್ಯಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವುದಲ್ಲದೇ,ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

ಆಗಾಗ ಕೈ ತೊಳೆದುಕೊಳ್ಳಬೇಕುÁ್ಸಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು.ಬಿಸಿ ನೀರು ಕುಡಿಯುತ್ತಿರಬೇಕು.ನೆಗಡಿ,ಜ್ವರ, ಕೆಮ್ಮು ಕಂಡು ಬಂದರೆ ಕೂಡಲೇ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕೆಂದು ಹೇಳಿದರು.

ಡಾ.ಶ್ವೇತಾ ನಿಂಬಾಳಕರ್ ಮಾತನಾಡಿ, ಮಕ್ಕಳು ಯೋಗ, ಧ್ಯಾನ, ಪೌಸ್ಟಿಕ ಆಹಾರ, ಸ್ವಚ್ಛತೆ ಬಗ್ಗೆ ಗಮನ ಹರಿಸಿದರೆ ಯಾವುದೆ ರೋಗಗಳಿಗೆ ತುತ್ತಾಗದೆ ಆರೋಗ್ಯದಿಂದ ಇರಬಹುದು. ಆರೋಗ್ಯ ಮತ್ತು ಶಿಕ್ಷಣ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಮಕ್ಕಳು ಆರೋಗ್ಯವನ್ನು ಪ್ರೀತಿಸಬೇಕು. ಪರಿಸರ ಸ್ವಚ್ಛವಾಗಿಡಬೇಕು ಹಾಗೂ ಸುದ್ಧವಾದ ನೀರು, ಆಹಾರ, ಗಾಳಿಯನ್ನು ಸೇವಿಸುತ್ತಾ ಬಂದರೆ ಸಧೃಡ ಆರೋಗ್ಯವಂತರಾಗಿರಲು ಸಾದ್ಯ ಎಂದು ಹೇಳಿದರು.

ಮುಖ್ಯಗುರುಳಾದ ಮಲ್ಲಿನಾಥ ಪಾಟೀಲ, ಶಿಕ್ಷಕರಾದ ಚನ್ನಬಸಪ್ಪ ಕೊಲ್ಲೂರ್, ಬಾಬಾಸಾಹೇಬ ಸಾಳುಂಕೆ, ಆರ್‍ಬಿಎಸ್‍ಕೆ ತಂಡದ ಶಿವಲೀಲಾ ಇತರರು ಇದ್ದರು.

ಮಕ್ಕಳಲ್ಲಿ ಆರೋಗ್ಯದಲ್ಲಿ ನ್ಯೂನತೆ ಕಂಡು ಬಂದವರಿಗೆ ನಗರದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಗಾಗಬೇಕೆಂದು ಲಿಖಿತ ಪತ್ರ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here