ಕಲಬುರಗಿ : “ಅಶ್ವಗಜ” ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗಿದ್ದ ಕಥೆ ಕೌಶಿಕ್ ಕುಲಕರ್ಣಿ ಅವರದ್ದಾಗಿದೆ. ಚಿತ್ರಕಥೆ , ಸಂಭಾಷಣೆ , ನಿರ್ದೇಶನದ ಜವಾಬ್ದಾರಿ ಲಕ್ಷ್ಮೀಕಾಂತ ಜೋಶಿ ಅವರು ನಿರ್ವಹಿಸಿದ್ದಾರೆ.
ಉತ್ತರ ಕರ್ನಾಟಕದ ಕಲಬುರಗಿ ಹಾಗೂ ಕಲಬುರಗಿ ಗ್ರಾಮಾಂತರ ಪ್ರದೇಶದಲ್ಲಿ ಚಿತ್ರೀಕರಣಗೊಂಡು ನಂತರ ಚಿತ್ರರಂಗದ ತವರಾದ ಬೆಂಗಳೂರಿನಲ್ಲಿ ಪೋಸ್ಟ್ ಪ್ರೋಡಕ್ಷನ್ ಕೆಲಸ ಮುಗಿಸಿಕೊಂಡು ಈಗ ಬಿಡುಗಡೆಗೆ ಸಿದ್ಧವಾಗಿದೆ.
ಶೀಘ್ರದಲ್ಲೇ ಬಿಡುಗಡೆಯ ದಿನಾಂಕ ಘೋಷಿಸುತ್ತೇವೆಂದು ನಿರ್ದೇಶಕ ಲಕ್ಷ್ಮೀಕಾಂತ ಜೋಶಿ ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಈ ಚಿತ್ರವು ದುಡ್ಡು , ದೊಡ್ಡಸ್ತಿಕೆ , ಪ್ರತಿಷ್ಠೆಯ ದುರಾಸೆಗೆ ಬಿದ್ದ ಮನುಷ್ಯ ತನ್ನದಲ್ಲದ ಭೋಗಕ್ಕೆ ಕೈ ಹಾಕಿದಾಗ ಕಾಲವೆನ್ನುವ ಶಕ್ತಿ ಮನುಷ್ಯನನ್ನು ಯಾವ ರೀತಿ ಬುದ್ಧಿ ಕಲಿಸುತ್ತೆ ಅನ್ನೋದೆ ಈ “ಗಧಾಗ್ರಜ” ಕತೆಯ ಎಳೆ ಎಳೆಯಾಗಿ ತಿಳಿಸುತ್ತದೆ ಎಂದು ಚಿತ್ರದ ನಿರ್ದೇಶಕ ಲಕ್ಷ್ಮೀಕಾಂತ ಜೋಶಿ ಹೇಳಿದ್ದಾರೆ.
ಇದು ಜೋಶಿ ನಿರ್ದೇಶನದ ಎರಡನೇ ಕಿರುಚಿತ್ರ ಇದಾಗಿದೆ.
ನಾಯಕ ನಟನಾಗಿ ಕೌಶಿಕ್ ಕುಲಕರ್ಣಿ ಅಭಿನಯಿಸಿದ್ದಾರೆ. ಹೃಷಿಕೇಶ್ ಕುಲಕರ್ಣಿ , ರಮೇಶ್ , ಭಾಗ್ಯಶ್ರೀ ಪಾಳ , ಅರವಿಂದ್ ಜೋಗ , ಡಾ.ವಿಶ್ವರಾಜ್ ಪಾಟೀಲ್ , ಅಶೋಕ್ ಚಿತ್ತಕೋಟಿ , ಸೋಮಶಂಕರ್ ಬಿರಾದಾರ್ , ಗಿರೀಶ್ ಕುಲಕರ್ಣಿ , ಕಾರ್ತೀಕ್ ಕುಲಕರ್ಣಿ , ಚಿರಂಜೀವಿ, ಲಕ್ಷ್ಮೀ ಅಥಣಿ ತಾರಾಗಣದಲ್ಲಿದ್ದಾರೆ. ಬಾಲ ಕಲಾವಿದರಾಗಿ ಚೇತನ್ , ವಾಸು ಪಾಟೀಲ್ , ಅವಿನಾಶ್ , ಕಾವ್ಯ , ಆರ್ಯನ್ ಪಾಟೀಲ್ ಅಭಿಯಯಿಸಿದ್ದಾರೆ.
ರಾಘು ಮರೆನೂರ್ ಛಾಯಾಗ್ರಹಣ ಈ ಚಿತ್ರಕ್ಕಿದ್ದು ದೀಪಕ್ ಸಿ ಎಸ್ ಸಂಕಲನ ಮಾಡಿದ್ದಾರೆ , ಗಂಗಾ ಪ್ರಭ ಸ್ಟೂಡಿಯೋ ವೈಭವ್ ಡಬ್ಬಿಂಗ್ ನಿರ್ವಹಿಸಿದ್ದಾರೆ.
ಪ್ರವೀಣ ಕೆ ಬಿ ಅವರು ಸಂಗೀತ ಸಂಯೋಜಿಸಿದ್ದಾರೆ.
ಈಶಾನ್ ಸ್ಟೂಡಿಯೋಸ್ ರಾಹುಲ್ ಅವರ ಕೈಯಲ್ಲಿ ದೃಶ್ಯಗಳು ರಂಗೇರಿದೆ ಎಂದು ಹೇಳಿದ್ದಾರೆ.