ಯಾದಗಿರಿ: ಪೊಲೀಸ್ ಇಲಾಖೆ ಜನಸ್ನೇಹಿಯಾಗಲು ಮಹಿಳಾ ಮಕ್ಕಳ ಸುರಕ್ಷಾ ಪಡೆ; ಡಿವೈಎಸ್ಪಿ ಜಾವಿದ್

0
25

ಸುರಪುರ: ಜಿಲ್ಲೆಯಲ್ಲಿನ ಮಹಿಳಾ ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಸಂಗೀತಾ ಮೇಡಂ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆ ಜನಸ್ನೇಹಿಯಾಗಲು ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆಯನ್ನು ರಚಿಸಲಾಗಿದೆ ಎಂದು ಡಿವೈಎಸ್ಪಿ ಜಾವಿದ್ ಇನಾಂದಾರ್ ತಿಳಿಸಿದರು.

ನಗರದ ಪೊಲೀಸ್ ಠಾಣೆಯಲ್ಲಿನ ತಮ್ಮ ಕಚೇರಿ ಆವರಣದಲ್ಲಿ ಸುರಪುರ ಪೊಲೀಸ್ ಉಪ ವಿಭಾಗದ ವತಿಯಿಂದ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆ ರಚಿಸಿ ಮಾತನಾಡಿ,ಸುರಪುರ ಉಪ ವಿಭಾಗದ ಎಲ್ಲಾ 8 ಪೊಲೀಸ್ ಠಾಣೆಗಳಲ್ಲಿ ಈ ಪಡೆ ಇರಲಿದೆ,ಪ್ರತಿ ಠಾಣೆಯಲ್ಲಿ ಕನಿಷ್ಠ ಇಬ್ಬರು ಗರಿಷ್ಠ ಮೂರು ಅಥವಾ ನಾಲ್ಕು ಜನ ಮಹಿಳಾ ಪೊಲೀಸ್ ಪೇದೆಗಳ ತಂಡ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಹಾಗೂ ಶಾಲೆಗಳಲ್ಲಿನ ಹದಿ ಹರೆಯದ ವಿದ್ಯಾರ್ಥಿನಿಯರಿಗೆ ಮಕ್ಕಳ ಹಕ್ಕುಗಳ ಬಗ್ಗೆ,ಬಾಲ್ಯ ವಿವಾಹ,ಬೇರೆ ಯಾರಾದರು ತೊಂದರೆ ಕೊಡುತ್ತಿದ್ದರೆ ಅದರಿಂದ ಬಚಾವಾಗುವುದು ಹೇಗೆ ಎನ್ನುವ ಹಲವು ವಿಷಯಗಳ ಕುರಿತು ಈ ತಂಡ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆಯ ಸುರಪುರ ಠಾಣೆಯ ತಂಡದ ಸದಸ್ಯೆ ಕಾವ್ಯ ಮಹಿಳಾ ಪೊಲೀಸ್ ಪೇದೆ ಮಾತನಾಡಿ,ಇತ್ತೀಚೆಗೆ ಫೋಕ್ಸೊ ಪ್ರಕರಣಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ ಇದರ ಕುರಿತು ಹದಿ ಹರೆಯದ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಯಾರಾದರು ಬಾಲಕಿಯರನ್ನು ಅಥವಾ ವಿದ್ಯಾರ್ಥಿನಿಯರನ್ನು ಹಿಂಬಾಲಿಸುವುದು,ಚುಡಾಯಿಸುವುದು,ಯಾರಿದಂಲಾದರು ಕಿರಕುಳ ಅನುಭವಿಸುತ್ತಿದ್ದರೆ ಅಂತವರಿಗೆ ನೆರವಾಗಿ ಜಾಗೃತಿ ಮೂಡಿಸುವುದು ಹಾಗೂ ವಿದ್ಯಾರ್ಥಿನಿಯರು ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳ ಬೇಕು ಎನ್ನುವುದರ ಕುರಿತು ಜಾಗೃತಿ ಮೂಡಿಸಲಾಗುತ್ತದೆ.ಬಾಲ್ಯ ವಿವಾಹ ತಡೆಗಟ್ಟುವುದು,ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಸೇರಿದಂತೆ ಅನೇಕ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ನಮ್ಮ ಕರ್ತವ್ಯ ಮುಗಿಸಿ ಉಳಿದ ಸಮಯದಲ್ಲಿ ನಮ್ಮ ಠಾಣಾ ವ್ಯಾಪ್ತಿಯ ಶಾಲೆ,ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು ಅಲ್ಲದೆ ಎಲ್ಲಾ ಹದಿ ಹರೆಯದ ಬಾಲಕಿಯರು ಮತ್ತು ಮಹಿಳೆಯರ ಸುರಕ್ಷತೆಗಾಗಿ ನಮ್ಮ ತಂಡ ಸದಾಕಾಲ ಕಾರ್ಯನಿರ್ವಹಿಸಲಿದೆ,ಉಪವಿಭಾಗದಲ್ಲಿ ನಮ್ಮ ಪಡೆ ಡಿವೈಎಸ್ಪಿ ಸರ್ ಅವರ ಮಾರ್ಗದರ್ಶನದಲ್ಲಿ ತಂಡ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಾರಾಯಣಪುರ ಠಾಣೆ ಪಿಎಸ್‍ಐ ರಾಜಶೇಖರ ರಾಠೋಡ ಉಪಸ್ಥಿತರಿದ್ದು ಮಾತನಾಡಿದರು.ಎಲ್ಲಾ 8 ಠಾಣೆಗಳ ಮಹಿಳಾ ಪೊಲೀಸ್ ಪೇದೆಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here