ಯಾದಗಿರಿ: ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ; ಇಒ ಬಸವರಾಜ ಸಜ್ಜನ್

0
17

ಸುರಪುರ: ಎಲ್ಲಾ ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ,ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣುವ ಮೂಲಕ ಶುಚಿಯಾದ ಮತ್ತು ರುಚಿಯಾದ ಆಹಾರವನ್ನು ತಯಾರಿಸುವಂತೆ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ತಿಳಿಸಿದರು.

ನಗರದ ಡಿ.ದೇವರಾಜು ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ನಗರದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿನ ವಸತಿ ನಿಲಯಗಳ  ನಿಲಯ ಮೇಲ್ವಿಚಾರಕು ಮತ್ತು ಸಿಬ್ಬಂದಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ನಿಯಮಾವಳಿಗಳು ಮತ್ತು ಅವುಗಳ ಪಾಲನೆ ಕುರಿತು ಜಾಗೃತಿ ಮೂಡಿಸುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿಗೆ ಆಹಾರ ಎಂದರೆ ಔಷಧಿ ಇದ್ದಂತೆ ಶುದ್ಧವಾದ ಆಹಾರ ಸೇವೆನೆಯಿಂದ ಉತ್ತಮವಾದ ಆರೋಗ್ಯ ಹೊಂದಲು ಸಾಧ್ಯವಿದೆ,ಆದ್ದರಿಂದ ನಿಮ್ಮ ನಿಮ್ಮ ವಸತಿ ನಿಲಯಗಳಲ್ಲಿ ರುಚಿಯಾದ ಅಡುಗೆ ತಯಾರಿಸುವಂತೆ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ತರಬೇತುದಾರರಾಗಿ ಆಗಮಿಸಿದ್ದ ಆಹಾರ ಸುರಕ್ಷಾಧಿಕಾರಿ ಚಂದ್ರಶೇಖರ ಮಾತನಾಡಿ,ಪರ್ಸನಲ್ ಹೈಜಿನ್,ಸ್ವಚ್ಛತೆ,ಆರೋಗ್ಯ ಮತ್ತು ಕರಿದ ಎಣ್ಣೆ ಮರು ಬಳಕೆಯ ಅಪಾಯದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾಲಿ ಪಾಟೀಲ್ ಮಾತನಾಡಿ,ಸ್ವಚ್ಛತೆ ಇದ್ದರೆ ಮಾತ್ರ ಆರೋಗ್ಯದಿಂದಿರಲು ಸಾಧ್ಯವಿದೆ.ಆಹಾರ ತಯಾರಿಸುವ ಮುನ್ನ ಸರಬರಾಜು ಮಾಡಲಾದ ಆಹಾರ ಸಾಮಗ್ರಿಗಳು ಉತ್ತಮ ಗುಣ ಮಟ್ಟದವು ಎನ್ನುವ ಕುರಿತು ಪರಿಶೀಲಿಸಿ,ಉತ್ತಮ ಗುಣ ಮಟ್ಟದ ಸಾಮಾಗ್ರಿಗಳನ್ನು ಮಾತ್ರ ಪಡುಗೆ ತಯಾರಿಸಲು ಉಪಯೋಗಿಸಬೇಕು,ಸಿಬ್ಬಂದಿಗಳು ನಿತ್ಯವು ಶುಭ್ರವಾದ ಬಟ್ಟೆ ಧರಿಸುವುದು,ಏಪ್ರಾನ್ ಹಾಗೂ ತಲೆಗವಸು ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಿಲಯ ಪಾಲಕರಾದ ಶಾಂತಾಬಾಯಿ ಉಪಸ್ಥಿತರಿದ್ದರು.ಹಿಂದುಳಿದ ವರ್ಗಗಳ ಇಲಾಖೆ ನಿಲಯ ಮೇಲ್ವಿಚಾರಕರಾದ ಯಂಕಪ್ಪ ಟಣಕೆದಾರ, ನಾಗೆಶ್, ಬಸವರಾಜ, ವೆಂಕಟೇಶ, ರಾಜೇಂದ್ರ, ನೀಲಮ್ಮ,ರೂಪವತಿ,ಮಹಾದೇವಿ,ಅನಾರಕಲಿ,ಶೀಲಾ,ವಿರೇಶ ಸಾಹುಕಾರ ಹಾಗೂ ಅಡುಗೆ ಸಿಬ್ಬಂದಿಗಳು ಭಾಗವಹಿಸಿದ್ದರು.ಶರಣಪ್ಪ ಸಜ್ಜನ್ ನಿರೂಪಿಸಿದರು,ಹಣಮೇಗೌಡ ಮರಕಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here