ಕಲಬುರಗಿ: 69ನೇ ಕರ್ನಾಟಕ ರಾಜ್ಯೋತ್ಸವವನ್ನು ಇತ್ತೀಚೆಗೆ ಛತ್ರಪತಿ ಸಂಭಾಜಿನಗರದ ಗೋವಿಂದಭಾಯಿ ಶ್ರಾಫ್ ಲಲಿತಕಲಾ ಅಕಾಡೆಮಿ ಸಭಾಂಗಣದಲ್ಲಿ ಅದ್ದೂರಿಯಾಗಿ ಕರ್ನಾಟಕ ಸಂಘ, ಛತ್ರಪತಿ ಸಂಭಾಜಿನಗರದ ವತಿಯಿಂದ ಆಚರಿಸಲಾಯಿತು.
ಈ ಕನ್ನಡಿಗರ ಹಬ್ಬದಲ್ಲಿ ಮುಖ್ಯ ಅತಿಥಿಗಳಾಗಿಅಜಿಂಕ್ಯ್ ಅತುಲ ಸಾವೆ, ಬಸವರಾಜ ಮಂಗರುಳೆ ಆಗಮಿಸಿ ಕನ್ನಡ ಭಾಷೆ ಮಾತನಾಡುವುದರೊಂದಿಗೆ ಕನ್ನಡ ಭಾಷೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಶರಣಮ್ಮಾ ಇನಾಮದಾರಅವರಿಗೆ (ಜನಪದ ಸಾಹಿತ್ಯ) ಮತ್ತು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಶಾಮರಾವ ಕುಲಕರ್ಣಿಅವರಿಗೆ (ದಾಸ ಸಾಹಿತ್ಯ)ಸೇವೆಯನ್ನು ಪರಿಗಣಿಸಿರಾಜ್ಯೋತ್ಸವ ಪ್ರಶಸ್ತಿ ಮತ್ತು ಪ್ರಮಾಣಪತ್ರನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಅಜಿಂಕ್ಯ್ ಸಾವೆ,ಸಂಘದ ಉಪಾಧ್ಯಕ್ಷರಾದಸುಭಾಷ ಜಿ.ಅಮಾಣೆ, ಸಹಕಾರ್ಯದರ್ಶಿಗಳಾದವಿಮಲಾ ಹಬ್ಬು ಅವರಿಂದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಹ್ಲಾದ ಕುಲಕರ್ಣಿ ಅವರಿಂದ ಸ್ವಾಗತ ಗೀತೆಮತ್ತು ಹಲವಾರು ಕನ್ನಡ ಗೀತೆಗಳು ಹಾಡುವ ಮೂಲಕ ನೆರೆದವರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಪ್ರಹ್ಲಾದ ಕುಲಕರ್ಣಿ, ಶಿವಾ ಉಗಲತ್, ರತನ ನಗರಕರ, ಶಶಿಕಾಂತ ಮರ್ಪಲ್ಲಿಕರ್, ಸಂಧ್ಯಾ ಅಡಸುಳೆ, ಡಾ. ಶಶಿಕಲಾ ಬುಯಿತೇ,ಸವಿತಾ ಸ್ವಾಮಿ, ಗೌರಿ ದೇಸಾಯಿ, ಜ್ಯೋತಿ ಕುರ್ಮುಡೆ, ವೇದಾ ಆಯ್ಲಿ, ಮಹಿ ಕುರುಮೂಡೆ,ಮರ್ಪಲ್ಲಿಕರ್ ಸೇರಿದಂತೆ ಅನೇಕ ಕಲಾವಿದರಿಂದ ಕನ್ನಡ ಗೀತೆಗಳು ಹಾಡುವುದರೊಂದಿಗೆನೃತ್ಯಗೈದು ಪ್ರೇಕ್ಷಕರನ್ನು ರಂಜಿಸಿದರು.ತನುಜಾ ಅಡಗಾವಕರ ನಿರೂಪಿಸಿದರು.
ಸುಭಾಷಅಮಾಣೆ, ವಿಮಲಾ ಹಬ್ಬು, ಪ್ರಶಾಂತ ಕುಲಕರ್ಣಿ,ಶಿವಾ ಉಗಲತ್,ಶ್ರೀದೇವ ಆಯ್ಲಿ, ಪ್ರಹ್ಲಾದ ಕುಲಕರ್ಣಿ, ಸವಿತಾ ಸ್ವಾಮಿ, ಬನಶಂಕರಿ ಹಿರೇಮಠ ಸೇರಿದಂತೆ ಅನೇಕ ಜನ ಶ್ರಮವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.