ಶಿವ, ವಿಷ್ಣುವಿನ ಅವತಾರವೆ ಶ್ರೀ ಶಿವಚಿದಂಬರ – ಮಲ್ಹಾರರಾವ ಗಾರಂಪಳ್ಳಿ

0
17

ಕಲಬುರಗಿ: ಭಕ್ತರ ಭಾಗ್ಯವನ್ನು ಬದಲಾಯಿಸುವ ಮಹಾ ಮಹಿಮರು ಶ್ರೀಶಿವಚಿದಂಬರ ಗುರುಗಳು, ಚಿದಂಬರರ ಅನೇಕ ಲೀಲೆಗಳಿಂದ ಭಕ್ತ ವೃಂದ ಉದ್ದಾರವಾಗಿದ್ದಾರೆ. ಶಿವ ಮತ್ತು ವಿಷ್ಣುವಿನ ಅವತಾರವೆ ಚಿದಂಬರ ಮಹಾಸ್ವಾಮಿಗಳ ಎಂದು ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಸಮಿತಿಯ ಅಧ್ಯಕ್ಷರಾದ ಮಲ್ಹಾರರಾವ ಗಾರಂಪಳ್ಳಿ ಮಾತನಾಡಿದರು.

ಕಲಬುರಗಿ ನಗರದ ಸಂಗಮೇಶ್ವರ ಬಡಾವಣೆಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯಾಜ್ಞವಲ್ಕ್ಯ ಭವನದಲ್ಲಿ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ವಿದ್ಯಾ ಕಣ್ವವಿರಾಜತೀರ್ಥ ಶ್ರೀಪಾದಂಗಳವರ ಕೃಪಾನುಗ್ರಹದೊಂದಿಗೆ ಆದೇಶದ ಮೇರೆಗೆ ಪ್ರತಿ ವರ್ಷದಂತೆ ಶ್ರೀ ಶಿವಚಿದಂಬರ ಮಹಾಸ್ವಾಮಿಯ ಜಯಂತ್ಯೋತ್ಸವದ ಅಂಗವಾಗಿ ಮಾತನಾಡಿದ ಅವರು ಚಿದಂಬರರು ಮೂಲ ಬೆಳಗಾವಿ ಜಿಲ್ಲೆಯ ಮುರಗೋಡದಲ್ಲಿ ಜನಿಸಿ ಅಲ್ಲಿಯೇ ತಮ್ಮ ಅವತಾರ ಸಮಾಪ್ತಿಗೊಳಿಸಿದರು. ಒಂದು ಕಿವಿಯಲ್ಲಿ ತುಳಸಿ ಇನ್ನೊಂದು ಕಿವಿಯಲ್ಲಿ ಬಿಲ್ವ ಪತ್ರೆ ಇದೆ, ಸಹಸ್ರಾರು ಭಕ್ತರಿಗೆ ಭಾಗ್ಯವನಿತ್ತವರು ಶ್ರೀ ಶಿವಚಿದಂಬರರು ಎಂದರು.

Contact Your\'s Advertisement; 9902492681

ಜಯಂತೋತ್ಸವದ ಅಂಗವಾಗಿ ಶ್ರೀರಾಮಾಚಾರ್ಯ, ಶ್ರೀ ಹರಿಶಾಚಾರ್ಯ ಮತ್ತು ಶ್ರೀ ಸಂಜಯ್ ಆಚಾರ ಸನ್ನತಿ ಅವರ ವೈದಿಕತ್ವದಲ್ಲಿ ಬೆಳಿಗ್ಗೆ ಕಾಕಡ ಆರತಿ, ಜನ್ಮೊತ್ಸವ, ಶ್ರೀಸತ್ಯ ಚಿದಂಬರಂ ಕಥೆ ಮತ್ತು ಭಜನೆ,ಮಹಾ ಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಜಯಂತೋತ್ಸವದ ಸಂಚಾಲಕರಾದ ಶ್ರೀ ದಾಯಾಘನ್ ಧಾರವಾಡಕರ್, ಚಂದ್ರಕಾಂತ ಗದಾರ್,ಶಾಮಾಚಾರ್ಯ ಬೈಚಬಾಳ್, ಅಶೋಕ್ ಮಳ್ಳಿ, ದತ್ತಾತ್ರೇಯ ಸಬ್ನವಿಸ್, ಭೀಮರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಶಾಮಾಚಾರ್ಯ ಜೋಶಿ ವನದುರ್ಗ, ವಿನುತ ಜೋಶಿ, ಸುಧೀರ್ ಕುಲಕರ್ಣಿ, ಮಂಜುನಾಥ್ ಕುಲಕರ್ಣಿ, ಹನುಮಂತರಾವ್ ತಂಗಡಗಿ, ಅನಿಲ್ ಚಿತ್ತಾಪುರ, ಪ್ರಸನ್ನ ದೇಶಪಾಂಡೆ, ಪಾಂಡುರಂಗ ಜೋಶಿ, ಅನಂತರಾವ್ ಕುಲಕರ್ಣಿ, ಅವಧೂತ ಕುಲಕರ್ಣಿ, ಮಂದರ್ ಸರಾಫ್, ಸಾಗರ್ ಅಳಂದಕರ್ ಹಾಗೂ ಮೈತ್ರಿ ಭಜನಾ ಮಂಡಳಿಯ ಮಾತೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here