ಕಲಬುರ್ಗಿ: ಶಿಕ್ಷಣ ಇಲಾಖೆ ಒಂದು ಆಲದ ಮರವಿದ್ದಂತೆ, ಅನೇಕರು ಆಶ್ರಯ ಪಡೆದಿರುತ್ತಾರೆ ಶಾಲಾ ಶಿಕ್ಷಣ ಇಲಾಖೆಯ ವಿವಿಧ ವೃಂದಗಳಲ್ಲಿ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ವಸತಿ ಶಿಕ್ಷಣ ಸಂಸ್ಥೆಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಕಛೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಖಾಯಂ ನೌಕರರನ್ನು ಒಂದೇ ವೇದಿಕೆಯಲ್ಲಿ ತರುವುದರಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸೂಕ್ತವಾದ ಮಾರ್ಗವಾಗುತ್ತದೆ ಎಂಬ ಮಾಹಿತಿಯನ್ನು ಅನೇಕ ತಜ್ಞರು, ಹಿರಿಯರು, ಮತ್ತು ವೃತ್ತಿ ಬಾಂಧವರ ಅಭಿಪ್ರಾಯದ ಮೇರೆಗೆ ಸುಮಾರು ಒಂದು ವರ್ಷದಿಂದ ಅನೇಕ ಸಭೆಗಳು ಮಾಡಿ ಸಾಧಕ ಬಾಧಕಗಳನ್ನು ಚರ್ಚಿಸಿ ನಂತರ ಇತ್ತೀಚಿಗೆ ಬೆಂಗಳೂರಿನಲ್ಲಿ ರಾಜ್ಯಾದ್ಯಂತ ಸುಮಾರು 200 ಕ್ಕಿಂತ ಹೆಚ್ಚು ಸಮಾನ ಮನಸ್ಕ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಸೇರಿ ಸಭೆ ಮಾಡಿ ಸಭೆಯಲ್ಲಿ ಒಮ್ಮತದ ಅಭಿಪ್ರಾಯದ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಖಾಯಂ ನೌಕರರನ್ನು ಒಳಗೊಂಡಂತೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘವನ್ನು ರಚಿಸಿ ಸದರಿ ಸಂಘಕ್ಕೆ ಸವಿಸ್ತಾರವಾದ ಸೂಕ್ತವಾದ ಬೈಲಾವನ್ನು ರಚಿಸಿ ಬೈಲಾ ನಿಯಮದಂತೆ ರಾಜ್ಯಾಧ್ಯಕ್ಷರಾಗಿ ಕೋಲಾರ ಜಿಲ್ಲೆಯ ಚೌಡಪ್ಪ ಎಸ್, ಕಾರ್ಯಾಧ್ಯಕ್ಷರಾಗಿ ಮೈಸೂರು ಜಿಲ್ಲೆಯ ಕಿರಣ್ ರಘುಪತಿ, ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ರವಿ ಪ್ರಕಾಶ್ ಎಂ.ಎಸ್, ಖಜಾಂಚಿಯಾಗಿ ಬಾಗಲಕೋಟೆ ಜಿಲ್ಲೆಯ ಸಂತೋಷ್ ಎಸ್ ಪಟ್ಟಣಶೆಟ್ಟಿ ಹಿರಿಯ ಉಪಾಧ್ಯಕ್ಷರಾಗಿ ಕಲಬುರ್ಗಿ ಜಿಲ್ಲೆ ಈರನಗೌಡ ಕೆ ಪಾಟೀಲ್ ಮಹಿಳಾ ಹಿರಿಯ ಉಪಾಧ್ಯಕ್ಷರಾಗಿ ಕೋಲಾರ ಜಿಲ್ಲೆಯ ಕವಿತ ಬಿ.ಎ, ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲೆಯ ರಾಜಾರಾಮ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಬೆಂಗಳೂರು ಆಯುಕ್ತರ ಕಛೇರಿಯ ನವೀನ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ತ್ಯಾಗಮ್ ಹರೇಕಳ, ಜಂಟಿ ಕಾರ್ಯದರ್ಶಿಯಾಗಿ ದಾವಣಗೆರೆ ಜಿಲ್ಲೆಯ ಶೈಲಾ ಎಸ್, ಸಂಘಟನಾ ಕಾರ್ಯದರ್ಶಿಯಾಗಿ ಕೋಲಾರ ಜಿಲ್ಲೆ ಮನೋಹರ್ ಆರ್ ರವರನ್ನು ಪ್ರಾದೇಶಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯದಡಿಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿ ಉಳಿದ ಪದಾಧಿಕಾರಿಗಳನ್ನು ಬೈಲಾ ನಿಯಮಾನುಸಾರ ರಾಜ್ಯಾಧ್ಯಕ್ಷರು ನೇಮಕ ಮಾಡಲು ಸಭೆ ತೀರ್ಮಾನಿಸಿತು. ನಿಯಮಾನುಸಾರ ಸಂಘವನ್ನು ನೋಂದಾಯಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಈರನಗೌಡ ಕೆ ಪಾಟೀಲ ರವರು ಅಭಿಪ್ರಾಯಪಟ್ಟರು.
ಈಗಾಗಲೇ ರಾಜ್ಯ ಮಟ್ಟದಲ್ಲಿ ಕೇಂದ್ರ ಸಂಘ ನಿರ್ದಿಷ್ಟ ಬೈಲಾದೊಂದಿಗೆ ರಾಜ್ಯ ಸಮಿತಿ ರಚನೆಗೊಂಡಿದೆ ರಾಜ್ಯ ಸಮಿತಿಯ ನಿರ್ದೇಶನದಂತೆ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಶಾಖೆ ಹಾಗೂ ತಾಲೂಕುಗಳಲ್ಲಿ ತಾಲೂಕು ಶಾಖೆಗಳನ್ನು ರಚಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಈ ಸಂಘ ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಮಾಡುತ್ತಿರುವ ಪ್ರತಿಯೊಬ್ಬರಿಗೂ ಮಾಹಿತಿ ಕಣಜವಾಗಲಿದೆ
ಇಲಾಖಾ ಆದೇಶಗಳು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ವಿಚಾರಗಳನ್ನು ನೀಡಿ ಶಿಕ್ಷಣ ನೀಡುವವರ ಸರ್ವಾಂಗಿಣ ಅಭಿವೃದ್ಧಿಗೆ ವೇದಿಕೆಯಾಗಲಿದೆ. ಸಂಘದ ವತಿಯಿಂದ ಶಿಕ್ಷಕರಿಗೆ ಉಪಯುಕ್ತವಾಗುವ ಮಾಹಿತಿಯೊಂದಿಗೆ Website ಮತ್ತು app ಸಿದ್ದಪಡಿಸಿ ನೀಡಲಾಗಿದೆ.
ರಾಜ್ಯದ್ಯಂತಹ ಈಗಾಗಲೇ ಉತ್ತಮ ಸ್ಪಂದನೆ ಸಿಗುತ್ತಿದ್ದು ಬಹುತೇಕ ಜನರು ನಿರೀಕ್ಷೆಯ ಮೇರೆಗೆ ರಾಜ್ಯಾದ್ಯಂತ ಸಂಘಟನೆಯನ್ನು ಮಾಡಿ ಸರ್ಕಾರಿ ನೌಕರರ ಸಂಘ ಹಾಗೂ ಇಲಾಖೆಯ ವಿವಿಧ ವೃಂದ ಸಂಘಗಳೊಂದಿಗೆ ಸಮನ್ವಯತೆ ಕಾಪಾಡಿಕೊಂಡು ಶಿಕ್ಷಣ ಇಲಾಖೆಯ ನೌಕರರ ಒಗ್ಗಟ್ಟಿನಿಂದ
ಶಿಕ್ಷಣ ನೀಡುತ್ತಿರುವವರಲ್ಲಿ ಗೊಂದಲಗಳನ್ನು ನಿವಾರಿಸಿ ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಪ್ರಾರಂಭಗೊಂಡು ಆಯುಕ್ತರ ಕಚೇರಿ ತನಕ ಎಲ್ಲಾ ನೌಕರ, ಶಿಕ್ಷಕ ಉಪನ್ಯಾಸಕರನ್ನು ಒಂದಡೆ ಸೇರಿಸಲು ಹಲವು ಪ್ರಾಯೋಗಿಕ ವಿಚಾರಗಳನ್ನು ಕೈಗೊಳ್ಳಲಾಗಿದೆ ಹಲವು ಹಂತದ ಚರ್ಚೆಗಳು ವಿಮರ್ಶೆಗಳು ನಡೆದಿವೆ ರಾಜ್ಯಮಟ್ಟದ ವಿಚಾರವಂತರ ಜ್ಞಾನವಂತರ ಸಾಂಗಿತ್ಯ ಹಾಗೂ ಮಾರ್ಗದರ್ಶನ ನೈತಿಕ ಬೆಂಬಲ ಇರುವುದರಿಂದ ಸಂಘಟನೆಯನ್ನು ಸ್ಥಿರಸ್ಥಾಯಿಗೊಳಿಸಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ನೌಕರರು ಜೊತೆಯಿದ್ದರು