ಡಾ.‌ಪಿ.ಎಸ್. ಶಂಕರ ಪ್ರತಿಷ್ಠಾನ ರಜತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಜ.1ರಂದು

0
76

ಕಲಬುರಗಿ: ಇಲ್ಲಿನ ಡಾ. ಪಿ.ಎಸ್. ಶಂಕರ್ ಪ್ರತಿಷ್ಠಾನದ ರಜತ ಮಹೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ, ವೈದ್ಯ ವಿದ್ಯಾರ್ಥಿವೇತನ ವಿತರಣೆ ಹಾಗೂ ವಿಜ್ಞಾನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಜನವರಿ 1, 2025 ರಂದು ಸಂಜೆ 5 ಗಂಟೆಗೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ. ಎಚ್. ವೀರಭದ್ರಪ್ಪ, ಕಾರ್ಯದರ್ಶಿ ನರೇಂದ್ರ ಬಡಶೇಷಿ ತಿಳಿಸಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿವಿ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ವಿಜ್ಞಾನ ಕ್ಯಾಲೆಂಡರ್ ನ್ನು ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಸ್. ಮುಧೋಳ್ ಬಿಡುಗಡೆಗೊಳಿಸಲಿದ್ದಾರೆ. ಡಾ. ಪಿ.ಎಸ್. ಶಂಕರ ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಬಿ.ಎನ್. ಅಜೈಕುಮಾರ, ಡಾ. ಪಿ.ಎಸ್. ಶಂಕರ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಡಾ.‌ಎಸ್.ಪಿ. ಯೋಗಣ್ಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.‌ ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ ವಹಿಸಲಿದ್ದಾರೆ ಎಂದರು.

ವಿದ್ಯಾರ್ಥಿ ವೇತನ ಫಲಾನುಭವಿಗಳು: ಸುಜನ ಶಿವಾನಂದ ಮುಲ್ಲತ್ತಿ, ಬಾಗಲಕೋಟೆ ( ಡಾ. ಪಿ.ಎಸ್. ಶಂಕರ ವೈದ್ಯ ವಿದ್ಯಾರ್ಥಿ ವೇತನ), ಮೊಹ್ಮದ್ ಸುಹೇಲ್, ದಾವಣಗೆರೆ (ಡಾ. ಎನ್. ಗಂಗಾಧರಪ್ಪ ವೈದ್ಯ ವಿದ್ಯಾರ್ಥಿ ವೇತನ), ಕೊಟ್ರೇಶ ಶಿವಮೂರ್ತಿ ಬಸಾಪುರ, ಶಿರಬಡಗಿ ( ಡಾ. ಜಿ.ಎಸ್. ವಿಜಯಕುಮಾರ ವೈದ್ಯ ವಿದ್ಯಾರ್ಥಿ ವೇತನ), ಪ್ರಸನ್ನ ನಾಗರಾಜ ಸರ್ವದೆ, ಚಿಕ್ಕೇರೂರ, (ಜಿ.ಎಸ್. ಪ್ರಕಾಶ ವೈದ್ಯ ವಿದ್ಯಾರ್ಥಿ ವೇತನ), ಪೂಜಾ ವಿಶ್ವನಾಥ ಉಚಾಟ್ಟೆ, ಭಾತಂಬ್ರಾ, (ಡಾ. ರಾಜೇಶ್ವರಿ ರೆಡ್ಡಿ ವೈದ್ಯ ವಿದ್ಯಾರ್ಥಿ ವೇತನ), ಬನಶಂಕರಿ ಶಿವರುದ್ರ ನಿಬೆಣ್ಣಿ, ಕಲಬುರಗಿ (ಡಾ. ಇಂದಿರಾ ವೀರಭದ್ರಪ್ಪ ವೈದ್ಯ ವಿದ್ಯಾರ್ಥಿ ವೇತನ), ಸಿದ್ದನಗೌಡ ರಾಮನಗೌಡ ಪಾಟೀಲ, ಅರ್ಜುಣಗಿ ( ಡಾ.‌ಜಿ.ಡಿ. ಹುನಕಂಟಿ ವೈದ್ಯ ವಿದ್ಯಾರ್ಥಿ ವೇತನ), ಪಂಚಾಕ್ಷರಿ ಲೋಣಿಮಠ, ಕಲಬುರಗಿ (ಡಾ.‌ ವಿಕ್ರಮ ಸಿದ್ದಾರೆಡ್ಡಿ ವೈದ್ಯ ವಿದ್ಯಾರ್ಥಿ ವೇತನ), ತೇಜಸ್ ಮಲ್ಲಿಕಾರ್ಜುನ ಗೋವಿಂದಪುರಮಠ, ಮುಧೋಳ (ಡಾ.‌ಅಮರೇಂದ್ರ ಸಂಗಪ್ಪ ವೈದ್ಯ ವಿದ್ಯಾರ್ಥಿ ವೇತನ), ಅವಿನಾಶ ರಾಠೋಡ, ಕಲಬುರಗಿ, (ಸೋಮಮ್ಮ ಭೀಮರಾಯಪ್ಪ ಕುರಾಳ ಸ್ಮರಣಾರ್ಥ ವೈದ್ಯ ವಿದ್ಯಾರ್ಥಿ ವೇತನ) ಫಲಾನುಭವಿಗಳಾಗಿದ್ದಾರೆ ಎಂದರು.

ಇಂಜಿನಿಯರಿಂಗ್ ನಲ್ಲಿ ಮಾನಸ ಎಂ.ವಿ. (ಜೆ.ಎಸ್.‌ಪ್ರಕಾಶ ವಿದ್ಯಾರ್ಥಿ ವೇತನ) ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈವರೆಗೆ ಪ್ರತಿಷ್ಠಾನದಿಂದ 107 ವಿದ್ಯಾರ್ಥಿಗಳು ವೈದ್ಯ ವಿದ್ಯಾರ್ಥಿ ವೇತನ ಪಡೆದಿದ್ದಾರೆ.‌ 4 ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದಿದ್ದಾರೆ ಎಂದು ವಿವರಿಸಿದರು.

ಡಾ. ಮಲ್ಲಿಕಾರ್ಜುನ ಬಿರಾಳ, ಡಾ. ರಾಜೇಶ್ವರಿ ರೆಡ್ಡಿ, ಡಾ. ವಿಜಯಾನಂದ, ಸದಾನಂದ ಪಾಟೀಲ, ರಾಮಕೃಷ್ಣ ರೆಡ್ಡಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here