ಸ್ಲಂ ಜನಾಂದೋಲನ ಕಲಬುರಗಿ ಘಟಕದಿಂದ ಮಕ್ಕಳಿಗೆ ನೋಟ ಬುಕ್ ವಿತರಣೆ

0
26

ಕಲಬುರಗಿ : ನಗರದ ಜೇವರ್ಗಿ ಕಾಲೋನಿಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ 207 ಭೀಮ್ ಕೊರೆಗಾಂವ ವಿಜಯೋತ್ಸವದ ದಿನ ಮತ್ತು ದೇಶದ ಮೊದಲ ಮಹಿಳಾ ಶಿಕ್ಷಕಿ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ರವರ 194 ಜನ್ಮದಿನದ ಅಂಗವಾಗಿ ಮಕ್ಕಳಿಗೆ ನೋಟ ಬುಕ್ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮ ಬಿ. ಬಿ. ರಜ ಕಾಲೇಜನ ಉಪನ್ಯಾಸಕರಾದ ಕನಿಜ ಫಾತಿಮಾ ಅವರು ಉದ್ಘಾಟಿಸಿದರು. ಮುಖ್ಯ ಭಾಷಣಕಾರ ಅನಿಲ ಟೆಂಗಳಿ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಜಾತ ಎಂ, ಕಾಲೇಜಿನ ಉಪನ್ಯಾಸಕಿ ಸವಿತಾ ನಾಶಿ, ಸ್ಲಂ ಜನಾಂದೋಲನ ಅಧ್ಯಕ್ಷೆ ಗೌರಮ್ಮ ಮಾಕಾ, ಸಂಚಾಲಕಿ ರೇಣುಕಾ ಸರಡಗಿ, ಶರಣು ಹಂಗರಗಿ, ಭಾಗ್ಯವಂತ ಕಾಂಬ್ಳೆ, ಸುನೀತಾ ಕೊಲ್ಲೂರ, ಹೀನಾ ಶೇಕ್, ಶ್ರೀಧರ್ ಹೊಸಮನಿ ಸೇರಿದಂತೆ ಕಾಲೇಜಿನ ಮಕ್ಕಳು ಭಾಗವಹಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here