೪ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಜನವರಿ ೩ ಮತ್ತು ೪ಕ್ಕೆ ಮುಂದೂಡಿಕೆ

0
64

ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಡಿ. 28 ಮತ್ತು 29 ರಂದು ಆಯೋಜಿಸಲಾಗಿದ್ದು 4ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರ ನಿಧನದ ಕಾರಣದಿಂದಾಗಿ 2025ರ ಜನವರಿ 3 ಮತ್ತು 4 ನೇ ತಾರೀಕಿಗೆ ಮುಂದೂಡಲಾಗಿದೆ ಎಂದು ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ರವೀಂದ್ರ ಶಾಬಾದಿ, ಕಾರ್ಯದರ್ಶಿ ಡಾ. ಶಿವರಂಜನ್ ಸತ್ಯಂಪೇಟೆ ತಿಳಿಸಿದ್ದಾರೆ.

ಸಮ್ಮೇಳನದ ದಿನಾಂಕ ಮಾತ್ರ ಬದಲಾವಣೆಯಾಗಿದ್ದು ಉಳಿದಂತೆ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲರೂ ಸಹಕರಿಸುವಂತೆ ಕೋರಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here