ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಂಸದರಿಂದ ಚಾಲನೆ

0
92

ಕಲಬುರಗಿ: ಮಹಾನಗರಪಾಲಿಕೆ ಮತ್ತು ಜಿಮ್ಸ್ ಸಂಯುಕ್ತಾಶ್ರಯದಲ್ಲಿ ಶನಿವಾರ ಕಲಬುರಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಮತ್ತು ಶ್ರಮದಾನಕ್ಕೆ ಕಲಬುರಗಿ ಲೋಕಸಭಾ ಸಂಸದ ಡಾ.ಉಮೇಶ ಜಾದವ ಅವರು ಚಾಲನೆ ನಿಡಿದರು.

ತದನಂತರ ಸಂಸದರು, ಆಸ್ಪತ್ರೆ ಆವರಣದ ಎಲ್ಲೆಡೆ ಸುತ್ತಾಡಿ ಅಲ್ಲಲ್ಲಿ ಕಸ, ಪ್ಲಸ್ಟಿಕ್, ಸಿರಿಂಜ್, ನೀಡಲ್‌ಗಳನ್ನು ಬಿದ್ದಿರುವುದಕ್ಕೆ ತೀವ್ರ ಅಸಮನಾದಾನ ವ್ಯಕ್ತಪಡಿಸುತ್ತ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆಕೆ ಮೊದಲ ಆದ್ಯತೆ ಕೋಡಿ. ರೋಗಿಗಳು ಗುಣವಾಗಲೆಂದೆ ಆಸ್ಪತ್ರೆಗೆ ಬರುತ್ತಾರೆ ಆಸ್ಪತ್ರೆಯೆ ಸ್ವಚ್ಛತೆ ಇಲ್ಲದೆ ಹೋದಲ್ಲಿ ರೋಗಿಗಳು ಗುಣವಾಗುವುದಾದರೆ ಹೇಗೆ ಎಂದು ಪ್ರಶ್ನಿಸಿದರು. ಆರೋಗ್ಯ ಸಂಸ್ಥೆಗಳಿಂದ ಉತ್ಪತ್ತಿಯಾಗುವ ಜೀವಕ್ಕೆ ಹಾನಿಕಾರಿಕವಾಗಿರುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ವೈಜ್ಞಾನಿಕ ವಿಲೇವಾರಿ ಮಾಡಬೇಕು ಎಂದು ಜಿಮ್ಸ್ ನಿರ್ದೇಶಕ ಡಾ.ಉಮೇಶ ಅವರಿಗೆ ಸೂಚನೆ ನೀಡಿದರು.

Contact Your\'s Advertisement; 9902492681

ಸುಮಾರು ೧೦೦ ಜನ ಆಸ್ಪತ್ರೆಯ ಕಾರ್ಮಿಕರು ವಾಸಿಸುವ ಕಟ್ಟಡದ ಸುತ್ತಮುತ್ತ ಕಸಗಳಿಂದ ನಾರುತ್ತಿದ್ದು, ಕೂಡಲೆ ಸ್ವಚ್ಛಗೊಳಿಸಬೇಕು. ಆಸ್ಪತ್ರೆಯ ಮುಂಭಾಗದಲ್ಲಿ ಮಳೆಯಿಂದ ನೀರು ನಿಂತು ಸಂಪೂರ್ಣ ರಸ್ತೆ ಹದಗೆಟ್ಟಿರುವುದರಿಂದ ತಾತ್ಮಲಿಕವಾಗಿ ಮುರಮ್ ಹಾಕಬೇಕು ಎಂದು ಆರೋಗ್ಯ ಇಲಾಖೆಯ ಕಾರ್ಯನಿವಾಹಕ ಅಭಿಯಂತರರಿಗೆ ತಿಳಿಸಿದರು. ಆಸ್ಪತ್ರೆಯ ಆವರಣದಲ್ಲಿ ಈ ಹಿಂದೆ ನಿರ್ಮಿಸಲಾದ ಶೌಚಾಲಯ ಇದೀಗ ಬಳಕೆಯಲ್ಲಿಲ್ಲದೆ ಹಂದಿಗಳ ವಾಸ ತಾಣವಾಗಿ ಮಾರ್ಪಟಿದ್ದು, ಕೂಡಲೆ ಹಖೇ ಕಟ್ಟಡವಾದ ಇದನ್ನು ನೆಲಸಮಗೊಳಿಸಿ ಆಸ್ಪತ್ರೆಯ ಭದ್ರತೆಯ ದೃಷ್ಠಿಯಿಂದ ಪೊಲೀಸ್ ಹೊರ ಠಾಣೆ ಸ್ಥಾಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಸಿವಿಲ್ ಕಾಮಗಾರಿಗನ್ನು ವೀಕ್ಷಿಸಿದ ಸಂಸದರು ಕಾಮಗಾರಿ ಕೆಲಸಕ್ಕೆ ನಿಯೋಜನೆಗೊಂಡಿರುವ ಆಂಧ್ರ ಪ್ರದೇಶದ ಕೂಲಿ ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿಯೆ ವಾಸ ಮಾಡುತ್ತಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿ ಕೂಡಲೆ ಈ ಕಾರ್ಮಿಕರನ್ನು ಬೇರೆಡೆ ಸೂಕ್ತ ಸ್ಥಳಕ್ಕೆ ವಾಸಕ್ಕೆ ಕ್ರಮ ವಹಿಸಬೇಕು ಈ ಸಂಬಂಧ ಗುತ್ತಿಗೆದಾರ ನಾಗರಾಜ ಅವರಿಗೆ ನೋಟಿಸ್ ನೀಡುವಂತೆ ತಿಳಿಸಿದರು.

ಸಾರ್ವಜನಿಕರ ಅಹವಾಲು ಆಲಿಕೆ:- ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಆಲಿಸಿದ ನಂತರ ಮಾತನಾಡಿದ ಡಾ.ಉಮೇಶ ಜಾಧವ ಅವರು ಬಡ, ಕೂಲಿ ಕಾರ್ಮಿಕರೆ ಹೆಚ್ಚಿನ ಸಂಖ್ಯೆಯಲ್ಲಿ ಆಸತ್ರ್ರೆಗೆ ಬರುವರು. ಹೀಗಾಗಿ ಅವರನ್ನು ತುಂಬಾ ಕಾಳಜಿಯಿಂದ ಕಂಡು ಗುಣಮಟ್ಟದ ಚಿಕಿತ್ಸೆ ನೀಡಬೇಕು. ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಚಿಕಿತ್ಸೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಆರೋಗ್ಯ ಸೇವೆ ಇಲ್ಲಿ ಉತ್ತಮಗೊಳಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದರು.

ಟ್ರಾಮಾ ಸೆಂಟರ್ ಕಟ್ಟಡ ಪೂರ್ಣಗೊಂಡಿದೆಯಾದರು ಇನ್ನೂ ಆರಂಭವಾಗಿಲ್ಲ. ರಸ್ತೆ ಅಪಘಾತ ಪ್ರಕರಣಗಳು ಇಲ್ಲಿ ಹೆಚ್ಚಿದ್ದು, ಖಾಸಗಿ ಅಸ್ಪತ್ರೆಯಲ್ಲಿ ೧೫ ಲಕ್ಷ ರೂ. ವರೆಗೆ ಸಾರ್ವಜನಿಕರು ವೈದ್ಯಕೀಯ ವೆಚ್ಚ ಭರಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಕೂಡಲೆ ಟ್ರಾಮಾ ಸೆಂಟರ್ ಪ್ರಾರಂಭಿಸಬೇಕು. ಬೆಂಗಳೂರಿನಲ್ಲಿ ಡೈಲಾಸಿಸ್ ಕೇಂದ್ರ ಕೆಲಸ ಮಾಡುತ್ತಿಲ್ಲ ಆದರೆ ಕಲಬುರಗಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಡಾ.ಉಮೇಶ ಜಾಧವ ವೈದ್ಯ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ದತ್ತಾತ್ರೇಯ ಪಟೀಲ ಮಾತನಾಡಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ೧೫೦ ಕೋಟಿ ರೂ. ರಾಜ್ಯ ಸರ್ಕಾರ ಮಂಜೂರು ಮಾಡಿದ್ದು, ಶೀಘ್ರದಲ್ಲಿಯೆ ಅದರ ಭೂಮಿ ಪೂಜೆ ನಡೆಯಲಿದೆ. ೪೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಟ್ರಾಮಾ ಸೆಂಟರ್‌ನಲ್ಲಿ ಸಿಬ್ಬಂದಿ ನೇಮಕಾತಿ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಇನ್ನು ತನ್ನ ಸೇವೆ ಪ್ರಾರಂಭಿಸಿಲ್ಲವಾದರಿಂದ ರಸ್ತೆ ಅಪಘಾತಕ್ಕೆ ತುತ್ತಾದವರು ಅನಿವಾರ‍್ಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಹಣ ತೆತ್ತು ಚಿಕಿತ್ಸೆ ಪಡೆಯುವಂತಾಗಿದೆ. ಕೂಡಲೆ ಟ್ರಾಮಾ ಸೆಂಟರ್ ಅರಂಭವಾಗಲಿ. ಕಲಬುರಗಿ ನಗರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ಮಂಜೂರಾಗಿರುವುದರಿಂದ ಬಿಸಿಲೂರಿನ ಜನರಿಗೆ ಅದರ ಸೇವೆಯೂ ಆದಷ್ಟು ಬೇಗ ಲಭ್ಯವಾಗಲಿ ಎಂದ ಅವರು ಜಿಮ್ಸ್‌ನ್ನು ಮಾದರಿ ಅಸ್ಪತ್ರೆಯನ್ನಾಗಿ ಮಾಡುವಂತೆ ಆಸ್ಪತ್ರೆಯ ಆಡಳಿತ ವರ್ಗಕ್ಕೆ ಕರೆ ನೀಡಿದರು.

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ್ ಮಾತನಾಡಿ ಜಿಮ್ಸ್ ಹಾಗೂ ಸಾರ್ವಜನಿಕ ಆಸ್ಪತ್ರೆ ನಡುವೆ ಸಮನ್ವಯ ಕೊರತೆಯಿದೆ. ಸಮನ್ವಯತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನಿ ಅತುಲ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ನಮ್ಮ ಮೊದಲ ಆದ್ಯತೆಯಾಗಿದ್ದು, ಈಗಾಗಲೆ ಹಿಂದಿನ ಸಭೆಯಲ್ಲಿ ನಿರ್ಧರಿಸಿದಂತೆ ನವೆಂಬರ್ ೧ ರಿಂದ ಅಸ್ಪತ್ರೆ ಆವರಣದಲ್ಲಿ ತಂಬಾಕು, ಪಾನ್, ಗುಟಕಾ, ಸಿಗರೇಟ್, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪ್ರವೇಶ ದ್ವಾರದಲ್ಲಿಯೆ ತಪಾಸಣೆ ಮಾಡಿಯೆ ಒಳಗಡೆ ಬಿಡಬೇಕು. ಈ ಕುರಿತು ಸಾರ್ವಜನಿಕರಿಗೆ ಮುಂಚಿತವಾಗಿ ತಿಳುವಳಿಕೆ ನೀಡಿ ಎಮದ ಅವರು ಉಲ್ಲಂಘಿಸಿದಲ್ಲಿ ದಂಡ ಸಹ ಹಾಕಲು ಸನ್ನಧರಾಗಿ. ಮಂಡಳಿಯಿಂದ ವಿವಿಧ ಕಾಮಗಾರಿ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಜಿಮ್ಸ್‌ಗೆ ಸುಮಾರು ೮೦ ಕೋಟಿ ರೂ. ಅನುದಾನ ನೀಡಲಾಗಿದ್ದು. ಇದರ ಸದ್ಬಳಕೆ ಮಾಡಿಕೊಂಡು ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗಿ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಂ,ಎನ್.ನಾಗರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ., ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ, ಹೆಚ್.ಕೆ.ಸಿ.ಸಿ.ಐ. ಅಧ್ಯಕ್ಷ ಅಮರನಾಥ ಪಾಟೀಲ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ ಶಂಕರ, ಜಿಮ್ಸ್ ಅಧೀಕ್ಷಕ ಡಾ.ಶಿವಕುಮಾರ, ಜಿಲ್ಲಾ ಅಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಸುರಗಾಳಿ ಸೇರಿದಂತೆ ಇನ್ನಿತರನ ಅಧಿಕಾರಿಗಳು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೌರ ಕಾರ್ಮಿಕರು, ಎನ್.ವಿ.ಸಂಸ್ಥೆಯ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here