ಕಲಬುರಗಿ: ನಿನ್ನೆ ಕಲಬುರಗಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಎಂಪಿ ಜಾಧವ ಮತ್ತು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ನಡುವಿನ ಮಾತುಕತೆಗಳು ಕಲಬುರಗಿ ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿಕೊಡುವಂತಿದೆ.
ಇಬ್ಬರ ಈ ಸಂಭಾಷಣೆ ಪಕ್ಷದೊಳಗಿನ ಅಸಮಧಾನ, ಭಿನ್ನಾಭಿಪ್ರಾಯ ಇದೆ ಎಂಬುದನ್ನು ತೋರಿಸಿಕೊಡುತ್ತದೆ.
ನಿನ್ನೆ ಎಂಪಿ ಜಾಧವ್ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಆಡಿದರೆನ್ನಲಾದ ಮಾತುಗಳ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆ ಸಂಭಾಷಣೆ ಹೀಗಿದೆ, “ನೀವು ಬರೆ ವಿಜಿಟ್ ಮಾಡಿ ಹೋದ್ರ ಹೆಂಗಾಗ್ತದ, ನೀವು ಸಿರಿಯಸ್ ಆಗಿ ಚಾರ್ಜ್ ಮಾಡಬೇಕು ನೀವು. ನೀವು ಕೂತಂತೆ ಅಂದ್ರೆ ಆಗಲ್ಲ ಸರ್. ನೀವು ಒಂದಿಬ್ಬರನ್ನು ಸಸ್ಪೆಂಡ್ ಮಾಡಬೇಕು ಇಲ್ಲಾಂದ್ರೆ ನಾವು ವಿಜಿಟ್ ಮಾಡಿದು ಏನೂ ಉಳಿಯುದಿಲ್ಲ ನೋಡ್ರಿ. ನೀವು ಸಿರಿಯಸ್ ಆಗಿ ಒಂದಿಬ್ಬರನ್ನು ಸಸ್ಪೆಂಡ್ ಮಾಡಿದ್ರೆ ಆಜ್ ಎ ಎಂಪಿ ವಿಜಿಟ್ ಸಾರ್ಥಕ ಆಗುತ್ತದೆ, ಇಲ್ಲಾಂದ್ರ ಸುಮ್ನೆ ಬಂದು, ಸುಮ್ನೆ ಹೋಗಿದ್ದಾರೆ ಎಂದು ಜನರು ಅಂತು ಏನ್ ತಿಳಿಕೊತಾರ ನೋಡಿ ಸರ್. ನಿಮ್ಗೆ ಸಿರಿಯಸ್ಲಿ ಹೇಳಿಕತ್ತಿನಿ ನೋಡಿ ಸರ್. ನಮಗಂತೂ ಬೇಜಾರ ಆಗಿದೆ ಇವ್ರ ಕಾಲಗ್.
ಸಂಸದ ಡಾ. ಉಮೇಶ ಜಾಧವ್ ಅವರು ಎಲ್ಲಾ ಕಡೆಗೆ ವಿಜಿಟ್ ಮಾಡುತ್ತಿದ್ದಾರೆ ಜನರ ಸಮಸ್ಯೆ ಆಲಿಸುತ್ತಿದ್ದಾರೆ ಎಂದು ಒಂದು ಕಡೆ ಆದರೆ ಇನ್ನೊಂದೆಡೆ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಕಾರಣ ಕೇವಲ ವಿಜಿಟ್ ಮಾಡಿಕೊಂಡು ಹೈಲೈಟ್ ಆಗುವುದು ಬೇಡ. ಕ್ರಮಕೈಗೊಂಡು ಪರಿಹಾರ ನೀಡಬೇಕೆಂದು ಪಕ್ಷದ ಶಾಸಕರ ಮತ್ತು ಮುಖಂಡರ ವಾದಗಳು ಕೇಳಿಬರುತ್ತಿದೆ.