ಕಲಬುರಗಿಗೆ ಹೆಚ್ಚಿನ ಸಗರನಾಡು ಬಸ್ಗಳ ಓಡಿಸಲು ದಲಿತ ಸಂಘರ್ಷ ಸಮಿತಿಯಿಂದ ಆಗ್ರಹ

0
97

ಸುರಪುರ: ನಗರ ದಿಂದ ಕಲಬುರ್ಗಿ ಮತ್ತು ಯಾದಗಿರಿಗೆ ಓಡಾಡುವ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಇದರಿಂದ ಸರ್ಕಾರಿ ಕೆಲಸಕ್ಕೆ ಹೋಗಲು ಸಾರ್ವಜನಿಕರಿಗೆ, ಜಿಲ್ಲಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಆಕ್ರೋಶ ವ್ಯಕ್ತಪಡಿಸಿದರು.

ಸುರಪುರ ದಿಂದ ಕಲಬುರಗಿಗೆ ಸಗರನಾಡು ಬಸ್‌ಗಳು ಹಾಗು ಯಾದಗಿರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ಓಡಿಸಲು ಆಗ್ರಹಿಸಿ ಸಮಿತಿಯಿಂದ ನಗರದ ಬಸ್ ಡಿಪೋ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಸುರಪುರ ಬಸ್ ಘಟಕದಲ್ಲಿ ೧೦೦ ಕ್ಕೂ ಹೆಚ್ಚು ಬಸ್‌ಗಳು ತಾಂತ್ರಿಕ ದೋಷದಿಂದ ಕೂಡಿವೆ. ಓಡುವ ಬಸ್‌ಗಳು ಮಧ್ಯದಲ್ಲೆ ನಿಂತು ಬಿಡುತ್ತವೆ. ಇದರಿಂದ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ನಿಯಮದ ಪ್ರಕಾರ ೩ ಲಕ್ಷ ಕಿ.ಮೀ ಓಡಿದ ಬಸ್‌ಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಸಮಿತಿ ಸಂಚಾಲಕ ವೀರಭದ್ರಪ್ಪ ದೊಡ್ಡಮನಿ ಮಾತನಾಡಿ, ನಗರ ಬಸ್‌ನಿಲ್ದಾಣದಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಬೇಕು. ಜಾನುವಾರುಗಳನ್ನು ಒಳಗೆ ಬಿಡಬಾರದು. ಶೌಚಾಲಯ ಸೇರಿದಂತೆ ಬಸ್‌ನಿಲ್ದಾಣದಲ್ಲಿ ನೈರ್ಮಲ್ಯ ಕಾಪಾಡಬೇಕು. ನಿಲ್ದಾಣದ ದ್ವಾರದಲ್ಲಿ ಅಕ್ರಮ ವ್ಯಾಪಾರವನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ವಿಭಾಗೀಯ ಸಂಚಾಲಕ ಹಣಮಂತಪ್ಪ ರೋಜಾ, ಅಂಬ್ರೇಶ ದೊಡ್ಡಮನಿ, ಶೇಖರ ಬಡಿಗೇರ, ಗೌತಮ ಬಡಿಗೇರ, ಆಕಾಶ ಕಟ್ಟಿಮನಿ, ವೆಂಕಟೇಶ ದೇವಪುರ, ಖಾಜಾ ಅಜ್ಮೀರ್, ಅಂಬೇಡ್ಕರ್ ದೊಡ್ಡಮನಿ, ರಮೇಶ ಬಡಿಗೇರ, ಎಂ. ಪಟೇಲ, ಅಶೋಕ ಕೋರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here