ಸುರಪುರ: ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿನ ವೈದ್ಯರು ಸರಿಯಾದ ಚಿಕಿತ್ಸೆ ನೀಡದೆ ಅಮಾಯಕ ಇಪ್ಪತ್ತೆರಡು ಜನರ ಕಣ್ಣು ಕಳೆದಿರುವುದು ಗಂಭೀರ ಪ್ರಕರಣವಾಗಿದ್ದು ಸರಕಾರ ಕೂಡಲೆ ಈ ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಸರಕಾರಕ್ಕೆ ಒತ್ತಾಯಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಮಿಂಟೋ ಆಸ್ಪತ್ರೆಯ ವೈದ್ಯರು ಉಡಾಫೆ ತೋರಿಸುತ್ತ ಅಮಾಯಕ ಜನರ ಕಣ್ಣು ಕಳೆದಿರುವುದನ್ನು ಕೇಳಲು ಹೋದ ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ವಿನಾಕಾರಣ ದಬ್ಬಾಳಿಕೆ ರೀತಿ ವರ್ತಿಸಿದ್ದಾರೆ.ಅಲ್ಲದೆ ಕನ್ನಡ ಮಾತನಾಡಿ ಎಂದರೆ ಕನ್ನಡ ಬರುತ್ತೆ ಆದರೆ ಮಾತನಾಡುವುದಿಲ್ಲ ಎಂದು ಅಹಂಕಾರ ತೋರಿಸಿದ್ದಾರೆ.ಇದನ್ನು ಪ್ರಶ್ನಿಸಿದ ಕರವೇ ಕಾರ್ಯಕರ್ತರ ಮೇಲೆಯೆ ದೂರು ನೀಡುವ ಮೂಲಕ ಕಣ್ಣು ಕಳೆದುಕೊಂಡವರ ನಿರ್ಲಕ್ಷ್ಯಕ್ಕೆ ಮುಂದಾಗಿದ್ದಾರೆ.
ಆದ್ದರಿಂದ ಸರಕಾರ ಕೂಡಲರ ಈ ಮಿಂಟೋ ಆಸ್ಪತ್ರೆಯ ವೈದ್ಯರ ಮೇಲೆ ಮತ್ತು ಅಲ್ಲಿಗೆ ಔಷಧಿ ಸರಬರಾಜು ಮಾಡಿದ ಕಂಪನಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ದಾಖಲಾದ ದೂರನ್ನು ರದ್ದುಪಡಿಸಬೇಕು.ಕಣ್ಣು ಕಳೆದುಕೊಂಡ ಎಲ್ಲರಿಗೂ ತಲಾ ಹತ್ತು ಲಕ್ಷ ಪರಿಹಾರ ನೀಡಬೇಕು. ಇಲ್ಲವಾದರೆ ಸಂಘಟನೆಯು ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ನಿಂಗಣ್ಣ ಬಿರಾದಾರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ವೆಂಕಟೇಶ ಪ್ಯಾಪ್ಲಿ,ಜಿಲ್ಲಾ ಸಂ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ,ತಾಲ್ಲೂಕು ಉಪಾಧ್ಯಕ್ಷ ಶಿವಮೋನಯ್ಯ ನಾಯಕ,ಹಣುಮಗೌಡ ಶಖಾಪುರ,ಅಂಬ್ಲಯ್ಯ ಬೇಟೆಗಾರ,ಮಾಳಪ್ಪ ಕಿರದಹಳ್ಳಿ, ಶ್ರವಣಕುಮಾರ ನಾಯಕ,ಹಣಮಂತ್ರಾಯ ಹಾಲಗೇರಾ,ಕೃಷ್ಣಾ ಮಂಗಿಹಾಳ,ಆನಂದ ಮಾಚಗುಂಡಾಳ ಸೇರಿದಂತೆ ಅನೇಕರಿದ್ದರು.