ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಉಪನ್ಯಾಸಕನಿಗೆ ಧರ್ಮದೇಟು

0
113

ಕಲಬುರಗಿ: ಇಲ್ಲಿನ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಉಪನ್ಯಾಸಕನೋರ್ವ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನಡೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಖಾಸಗಿ ವಿವಿಯ ಎಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕನೋರ್ವ ಕಿರುಕುಳ ನೀಡಿದ್ದಾನೆ
ಎಂದು ಹೇಳಲಾಗಿದೆ.

Contact Your\'s Advertisement; 9902492681

ಮಾಹಿತಿ ತಿಳಿದು ವಿದ್ಯಾರ್ಥಿನಿ ಪರವಾಗಿ ಕೆಲ ಯುವಕರು ಕಾಲೇಜಿಗೆ ಆಗಮಿಸಿ ಉಪನ್ಯಾಸಕನಿಗ ಧರ್ಮದೇಟು ನೀಡಿದ್ದು, ನಂತರ ಉಪನ್ಯಾಸಕನನ್ನು ತರಗತಿ ಕೊಣೆಗೆ ತಂದು ವಿದ್ಯಾರ್ಥಿನಿಗಳ ಮುಂದೆ ಕ್ಷಮೆಯಾಚಿಸಿದ ಘಟನೆ ಹಾಗೂ ವಿದ್ಯಾರ್ಥಿಗಳ ಮುಂದೆ ಮತ್ತೆ ಥಳಿಸಿದ ವಿಡಿಯೋ ಇದೀಗ ಸಾರ್ವಜನಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ವಿವಿ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನನ್ನು ನೌಕರಿಯಿಂದ ಗೇಟ್ ಪಾಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಯಾವ ವಿದ್ಯಾರ್ಥಿನಿಗೆ ಉಪನ್ಯಾಸಕನಿಂದ ಕಿರುಕುಳ ಎಂಬುದು ಇನ್ನು ನಿಗೂಢವಾಗಿದೆ.

ನೈತಿಕ ಪೋಲಿಸ್‌ಗಿರಿ: ಉಪನ್ಯಾಸಕ ಕಾಮಪಾಠ ಮಾಡಿದ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯರ ಕಡೆಯವರು ವಿಶ್ವವಿದ್ಯಾಲಯದ ತರಗತಿಯ ಕೋಣೆಗೆ ನುಗ್ಗಿ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರ ಮುಂದೆಯೇ ಥಳಿಸಿದ್ದು ಅಮಾನವೀಯವಾಗಿದೆ.

ಒಂದು ವಿಶ್ವವಿದ್ಯಾಲಯ ಎಂದರೆ ಅಲ್ಲಿ ಶಿಷ್ಟಾಚಾರ, ಶಿಸ್ತು, ಭದ್ರತೆ ಇರಬೇಕು. ಯಾರೋ ಯಾವುದೋ ಆರೋಪ ಮಾಡಿಕೊಂಡು ಗೂಳಿಗಳಂತೆ ತರಗತಿಯ ಕೋಣೆಗೆ ನುಗ್ಗುವುದು, ಉಪನ್ಯಾಸಕನಿಗೆ ಹಿಡಿದೆಳೆಯುವುದು, ಆತ ಕಾಮಪಾಠ ಮಾಡಿದ ಕುರಿತು ತರಗತಿಯಲ್ಲಿಯೇ ಒಪ್ಪಿಸುವುದು ಹಾಗೂ ಆತನಿಗೆ ಸಿಕ್ಕಾ ಪಟ್ಟೆ ಹೊಡೆದು, ಬಹಿರಂಗವಾಗಿಯೇ ಕ್ಷಮೆ ಕೇಳಿಸುವುದು ಮಾಡಿದ್ದಲ್ಲದೇ ಇಡೀ ಎಲ್ಲ ಘಟನೆಯನ್ನು ಸಹ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿಸಿದ್ದು ಇಡೀ ವಿಶ್ವವಿದ್ಯಾಲಯದ ಗೌರವ ಹಾಗೂ ಘನತೆಯನ್ನು ಹಾಳು ಮಾಡಿದೆ.

ಕಾಮಪಾಠ ಮಾಡಿದ ಉಪನ್ಯಾಸಕನಿಗೆ ಕಾಲೇಜಿನಿಂದ ಹೊರ ಹಾಕಿದ್ದು ಆಡಳಿತ ಮಂಡಳಿಯ ಒಳ್ಳೆಯ ಕ್ರಮವಾದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗಮನಕ್ಕೂ ತರದೇ, ಒಪ್ಪಿಗೆ ಪಡೆಯದೇ ಕಾಲೇಜು ತರಗತಿಗೆ ಅಕ್ರಮವಾಗಿ ಪ್ರವೇಶಿಸುವುದು, ತನಿಖಾಧಿಕಾರಿಗಳ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿ, ಶಿಕ್ಷೆಗೆ ಒಳಪಡಿಸುವುದು ಸಹ ನೈತಿಕ ಪೋಲಿಸ್‌ಗಿರಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕುರಿತು ಅಕ್ರಮವಾಗಿ ಪ್ರವೇಶಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡುವ ಮೂಲಕ ವಿಶ್ವವಿದ್ಯಾಲಯದ ಗೌರವಕ್ಕೆ ಚ್ಯುತ ತಂದಿದ್ದು, ಇಂತಹ ಘಟನೆ ಇಡೀ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಅಷ್ಟೇ ಅಲ್ಲದೇ ಉಪನ್ಯಾಸಕ ವರ್ಗಕ್ಕೂ ಸಹ ತೀವ್ರ ಆತಂಕವನ್ನು ಹುಟ್ಟಿಸಿದೆ.

ಈ ಹಿಂದೆ ಶರಣಬಸವೇಶ್ವರ್ ಕಾಲೇಜಿನ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದು, ಆತನ ಕೊಲೆಯಾಗಿದೆ ಎಂದು ಆತನ ಪೋಷಕರು ಇಡೀ ಕಾಲೇಜಿನ ವಿರುದ್ಧ ಉಗ್ರ ಪ್ರತಿಭಟನೆ ಮಾಡಿದರು. ಆ ಘಟನೆ ಇನ್ನೂ ಹಸಿಹಸಿಯಾಗಿರುವಾಗಲೇ ವಿಶ್ವವಿದ್ಯಾಲಯ ಉಪನ್ಯಾಸಕರೊಬ್ಬರು ಲೈಂಗಿಕ ಪಾಠ ಮಾಡಿದ್ದು, ಹೊರಗಿನವರು ಆತನಿಗೆ ಕಾಲೇಜಿನ ತರಗತಿಯಲ್ಲಿಯೇ ಹೊಡೆಯುವುದು ಮುಂತಾದ ಘಟನೆಗಳು ನೋಡಿದರೆ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here