ಸರಕಾರದಿಂದ ಅಂಬೇಡ್ಕರರಿಗೆ ಅವಮಾನ ವಿರೋಧಿಸಿ ದಲಿತ ಸಂಘಟನೆಗಳ ಪ್ರತಿಭಟನೆ

0
53

ಸುರಪುರ: ರಾಜ್ಯ ಸರಕಾರ ನವೆಂಬರ್ 26 ರಂದು ಆಚರಿಸಲು ಉದ್ದೇಶಿಸಿರುವ ಸಂವಿಧಾನ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಮಾಹಿತಿ ನೀಡಲು ಹೊರ ತಂದಿರುವ ಹೊರತಂದಿರುವ ಪುಸ್ತಕದಲ್ಲಿ ಅಂಬೇಡ್ಕರರು ಸಂವಿಧಾನ ಬರೆದಿಲ್ಲವೆಂದು ಮುದ್ರಿಸುವ ಮೂಲಕ ಅಂಬೇಡ್ಕರರಿಗೆ ಅವಮಾನಿಸಲಾಗಿದೆ.ಆದ್ದರಿಂದ ಇದನ್ನು ಖಂಡಿಸಿ ಸರಕಾರದ ವಿರುಧ್ಧ ಗುರುವಾರ 14ನೇ ತಾರೀಖಿನಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘಟನೆಗಳ ವಿವಿಧ ಮುಖಂಡರು ಮಾತನಾಡಿದರು.

ನಗರದ ಡಾ: ಬಿ.ಆರ್.ಅಂಬೇಡ್ಕರ ವೃತ್ತದ ಬಳಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಸರಕಾರ ನಿರಂತರವಾಗಿ ದಲಿತರ ಮೇಲೆ ದಮನಕಾರಿ ನೀತಿ ಅನುಸರಿಸುತ್ತಾ ಬರುತ್ತಿದೆ.ಅಲ್ಲದೆ ಈಗ ಅಂಬೇಡ್ಕರರು ಸಂವಿಧಾನವನ್ನೆ ಬರೆದಿಲ್ಲ ಎನ್ನುವ ವಿಷಯ ಸೇರಿಸಿ ಪುಸ್ತಕ ಪ್ರಕಟಿಸುವ ಮೂಲಕ ಅಂಬೇಡ್ಕರರಿಗೆ ಮತ್ತು ಅವರ ಇಡೀ ಸಮುದಾಯಕ್ಕೆ ಘೋರ ಅಪಮಾನ ಮಾಡಲಾಗಿದೆ.ಇದನ್ನು ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಈ ಕೃತಿ ತಯಾರಿಸಿದ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಬೇಕು,ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗು ಆಯುಕ್ತರನ್ನು ಕೆಲಸದಿಂದ ತೆಗೆದು ಹಾಕಬೇಕು ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.

Contact Your\'s Advertisement; 9902492681

ಸಭೆಯಲ್ಲಿ ವಿವಿಧ ದಲಿತ,ಪ್ರಗತಿಪರ ಹಾಗು ರೈತ ಸಂಘಟನೆಗಳ ಮುಖಂಡರಾದ ಮಾನಪ್ಪ ಕಟ್ಟಿಮನಿ,ವೆಂಕಟೇಶ ಹೊಸ್ಮನಿ,ದೇವಿಂದ್ರಪ್ಪ ಪತ್ತಾರ,ಮಾಳಪ್ಪ ಕಿರದಳ್ಳಿ,ರಾಹುಲ್ ಹುಲಿಮನಿ,ರಮೇಶ ಬಡಿಗೇರ,ಆಕಾಶ ಕಟ್ಟಿಮನಿ,ದಾಬೂದ್ ಪಠಾಣ, ಯಲ್ಲಪ್ಪ ಚಿನ್ನಾಕಾರ,ಸಿದ್ದಯ್ಯ ಸ್ಥಾವರಮಠ,ಚಂದಪ್ಪ ಪಂಚಮ್,ರಾಜು ಕಟ್ಟಿಮನಿ,ವೀರಭದ್ರ ತಳವಾರಗೇರಾ,ರಾಮಚಂದ್ರ ವಾಗಣಗೇರಾ,ಶಂಕರ ಹೊಸ್ಮನಿ,ನಿಂಗಣ್ಣ ಗೋನಾಲ,ಮಾನಪ್ಪ ಝಂಡದಕೇರಾ,ರಮೇಶ ಅರಕೇರಿ,ಮಲ್ಲಿಕಾರ್ಜುನ ವಾಗಣಗೇರಾ,ರಫೀಕ್ ಸುರಪುರ,ಎಂ.ಪಟೇಲ್,ವಿಶ್ವನಾಥ ಹೊಸ್ಮನಿ,ಅಮರೇಶ ದೊಡ್ಮನಿ,ಜಟ್ಟೆಪ್ಪ ನಾಗರಾಳ,ಶೇಖರ ಮಂಗಳೂರ, ಮಾನಪ್ಪ ಗೋನಾಲ,ಬಸವರಾಜ ಪೂಜಾರಿ,ಸಂಗಣ್ಣ ಬೋನಾಳ,ಹುಸೇನಿ ಜೀವಣಗಿ,ಮಹಿಬೂಬ ಪಟೇಲ,ಮಾನಪ್ಪ ಶೆಳ್ಳಿಗಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here