ಕಲಬುರಗಿ: ತಾಲೂಕಿನ ಸುಕ್ಷೇತ್ರ ಕೆಸರಟಗಿ ಗ್ರಾಮದ ಶ್ರೀ ಭಾಗ್ಯವಂತಿ ದೇವಿಯ ವರಪುತ್ರಿಯಾದ ಶ್ರೀ ಮಾತಾ ಲತಾದೇವಿಯವರ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬಂಜಾರ ಧರ್ಮಗುರುಗಳ ೨ನೇ ಮಹಾಸಭೆಯನ್ನು ಪೂಜ್ಯರ ಹಾಗೂ ಪೂಜ್ಯನೀಯರ ಸಮ್ಮುಖದಲ್ಲಿ ಅತಿ ವಿಜೃಂಭಣೆಯಿಂದ ಜರುಗಿತು. ಈ ಸಭೆಯಲ್ಲಿ ಬಂಜಾರ ಸಮುದಾಯದ ಎಲ್ಲಾ ಧರ್ಮಗುರುಗಳು ಭಾಗವಹಿಸಿದ್ದರು.