ದಲಿತ ಸೇನೆಯಿಂದ ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ

0
74

ಸುರಪುರ: ಡಿಸೆಂಬರ್ ೬ ರಂದು ಅಂಬೇಡ್ಕರರ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ದಲಿತ ಸೇನೆಯಿಂದ ನಗರದ ಟೈಲರ್ ಮಂಜಿಲ್‌ನಲ್ಲಿ ಪೂರ್ವಬಾವಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಸೇನೆ ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ ಮಾತನಾಡಿ,ರಾಜ್ಯಾದ್ಯಂತ ಅಂದು ದಲಿತ ಸೇನೆ ಹಾಗು ಮಾನವ ಬಂಧುತ್ವ ವೇದಿಕೆಯಿಂದ ಹಲವಾರು ಕಾರ್ಯಕ್ರಮಗಳ ಆಚರಿಸುತ್ತಿದ್ದು. ಅದರಂತೆ ಯಾದಗಿರಿ ಜಿಲ್ಲಾ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಕುಂಬಾರಪೇಟೆಯ ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮದ ಮೂಲಕ ಆಚರಿಸಲಾಗುವುದು.ಕಾರ್ಯಕ್ರಮದಲ್ಲಿ ಗುರುಮಿಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ,ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ,ದಲಿತ ಸೇನೆ ಕಲಬುರ್ಗಿ ಜಿಲ್ಲಾಧ್ಯಕ್ಷ ಹಣಮಂತ ಯಳಸಂಗಿ ಹಾಗು ಚಿಂತಕ ದೇವಿಂದ್ರಪ್ಪಗೌಡ ಗೌಡಗೇರಾ ಸೇರಿದಂತೆ ಅನೇಕ ಜನ ಚಿಂತಕರು ವಿಚಾರವಾದಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ತಾಲ್ಲೂಕಾಧ್ಯಕ್ಷ ನಿಂಗಣ್ಣ ಗೋನಾಲ ಮಾತನಾಡಿ, ಇಂದು ಎಲ್ಲೆಡೆ ಮೌಢ್ಯ ತಾಂಡವವಾಡುತ್ತಿದೆ ಇದನ್ನು ಹೋಗಲಾಡಿಸಲು ಮೊದಲು ನಾವೆಲ್ಲರು ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳುವುದು ಮುಖ್ಯವಾಗಿದೆ,ಆದ್ದರಿಂದ ಎಲ್ಲರು ಡಿಸೆಂಬರ್ ೬ರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪ್ರಜ್ಞಾವಂತರಾಗೋಣ ಎಂದರು.
ಸಭೆಯಲ್ಲಿ ತಾಲೂಕು ಉಪಾಧ್ಯಕ್ಷ ಮಾನಪ್ಪ ಝಂಡದಕೇರಾ,ತಾಯಪ್ಪ ಕನ್ನೆಳ್ಳಿ,ಪರಮಣ್ಣ ಹಂದ್ರಾಳ,ಹುಲಗಪ್ಪ ದೇವತ್ಕಲ್,ಹುಣಸಗಿ ತಾಲ್ಲೂಕಾಧ್ಯಕ್ಷ ಭೀಮಣ್ಣ ಬಲಶೆಟ್ಟಿಹಾಳ,ಭೀಮಣ್ಣ ನಾರಾಯಣಪೂರ,ಜಿಲ್ಲಾ ಉಪಾಧ್ಯಕ್ಷ ಹಣಮಂತ ಪೇಠ ಅಮ್ಮಾಪುರ,ಟಿ.ರಂಗನಾಥ,ಶಿವಣ್ಣ ನಾಗರಾಳ,ಬನ್ನಪ್ಪ ಕಲ್ಲದೇವನಳ್ಳಿ,ಮೌನೇಶ ಹುಣಸಿಹೋಳೆ,ನ್ಯಾಯವಾದಿ ಸುಭಾಷ ತೇಲ್ಕರ್,ನಾಗು ಗೋಗಿಕೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here