ಸುರಪುರ: ಇಂದು ತಾಲೂಕಿನಲ್ಲಿ ನಮ್ಮ ಕುರುಬ ಸಮುದಾಯ ದೊಡ್ಡ ಮಟ್ಟದಲ್ಲಿದ್ದರು ನಾವುಗಳು ಸಂಘಟಿತರಾಗುವಲ್ಲಿ ಹಿಂದುಳಿದಿದ್ದೆವೆ.ಆದ್ದರಿಂದ ಎಲ್ಲರೂ ಸಂಘಟಿತರಾಗಿ ನಮ್ಮ ಸಮುದಾಯದ ಯಾವುದೇ ವ್ಯಕ್ತಿಗೆ ಅನ್ಯಾಯವಾದರೆ ತಕ್ಷಣಕ್ಕೆ ನಾವುಗಳು ಅವರ ಬೆನ್ನಿಗೆ ನಿಂತು ನ್ಯಾಯ ವದಗಿಸಲು ಮುಂದಾಗೋಣ ಎಂದು ಕುರುಬರ ಸಂಘದ ಯುವ ಘಟಕದ ಜಿಲ್ಲಾಧ್ಯಕ್ಷ ಮಲ್ಲು ದಂಡಿನ್ ಮಾತನಾಡಿದರು.
ನಗರದ ಟೈಲರ್ ಮಂಜಿಲ್‌ನಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಯುವ ಘಟಕ ರಚನೆಗಾಗಿ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ನಮ್ಮ ಸಮುದಾಯದ ಮೇಲೆ ಯಾರೆ ದಬ್ಬಾಳಿಕೆ ಮಾಡಿದರೆ ಅದನ್ನು ಸಹಿಸುವುದಿಲ್ಲ,ಎಲ್ಲ ಸಮುದಾಯಗಳೊಂದಿಗೆ ನಾವು ಸಹೋದರತೆಯಿಂದ ನಡೆಯೋಣ ಹಾಗು ನಮ್ಮ ಸಮುದಾಯದ ಜನತೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನ ಹರಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಯುವ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ಚಂದ್ರು ಎಲಿಗಾರ ಗೌರವಾಧ್ಯಕ್ಷ, ನಿಂಗು ಐಕೂರ ಅಧ್ಯಕ್ಷ,ವೆಂಕಿ ಕೊಳ್ಳಿ,ಮಹಾರಾಜ ಬಬಲಾದಿ ಉಪಾಧ್ಯಕ್ಷರು,ಸಂತೋಷ ಪೂಜಾರಿ ಪ್ರಧಾನ ಕಾರ್ಯದರ್ಶಿ,ಅನಿಲ್ ಹಸನಾಪುರ ಕಾರ್ಯದರ್ಶಿ,ಮಾರ್ಥಂಡ ಬಾದ್ಯಾಪುರ ಸಂ ಕಾರ್ಯದರ್ಶಿ, ಬೀರಪ್ಪ ಪೂಜಾರಿ ಖಜಾಂಚಿ ಹಾಗು ಭರತಗೌಡ ಆಲ್ದಾಳ,ಸಂದೀಪ ರತ್ತಾಳ,ಚನ್ನು ನಾಗರಾಳ,ಕೃಷ್ಣಾ ವೆಂಕಟಾಪುರ, ಭೀಮು ನಾಗರಾಳ,ಪರಶುರಾಮ ಶಾಂತಪುರ ಹಾಗು ಮಂಜು ತಿಂಥಣಿ ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.
ಸಭೆಯಲ್ಲಿ ಸಮಾಝದ ಮುಖಂಡ ನಿಂಗರಾಜ ಬಾಚಿಮಟ್ಟಿ,ಜಿಲ್ಲಾ ಯುವ ಘಟಕದ ಮುಖಂಡರಾದ ನಾಗರಾಜ ಕೊಂಡಾಪುರ,ಮಹೇಶ ರಸ್ತಾಪುರ,ಭೀಮಾಶಂಕರ ವಿಭೂತಿಹಳ್ಳಿ,ಮಲ್ಲಿಕಾರ್ಜುನ ಬಾದ್ಯಾಪುರ,ಕೃಷ್ಣಾ ಬಾದ್ಯಾಪುರ,ಯಲ್ಲಾಲಿಂಗ ಕರ್ನಾಳ,ರಮೇಶ ಹಸನಾಪುರ,ಶಿವು ಕವಡಿಮಟ್ಟಿ,ರಾಮು ಯಳಮೇಲಿ,ಭೀಮು ಜಂಬಲದಿನ್ನಿ ಸೇರಿದಂತೆ ಅನೇಕರಿದ್ದರು.