ಕಲಬುರಗಿ: ಭಾರತ ಸಂವಿಧಾನವು ಸರ್ವ ಜನರ ಏಳಿಗೆಗಾಗಿ ಸಮಬಾಳು ಸಮಪಾಲು ಧೋರಣೆಯ ತತ್ವದಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಒದಗಿಸಿರುವುದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ವಕೀಲರಾದ ರಾಜು ಮುದ್ದಡಗಿ ಹೇಳಿದರು.
ಆಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ಇತ್ತೀಚಿಗೆ ಸಮಾಜ ಕಲ್ಯಾಣ ಇಲಾಖೆ, ತಹಸೀಲ್ದಾರ್ ಕಾರ್ಯಲಯ, ಗ್ರಾಮ ಪಂಚಾಯತ್ ಭೂಸನೂರ್ ಹಾಗೂ ಲುಂಬಿನಿ ಯುವ ಸಮಾಜ ಕಲ್ಯಾಣ ಸಂಘ ಜೇವರ್ಗಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ನಿವಾರಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ಸಂವಿಧಾನವು ವಿಶ್ವದಲ್ಲಿ ಸರ್ವಶ್ರೇಷ್ಠ ಸಂವಿಧಾನವಾಗಿದೆ ಅದರಲ್ಲಿನ ಕಾನೂನುಗಳು ಹಾಗೂ ನಿಯಮಗಳು ಮನುಷ್ಯರನ್ನು ಸೇರಿದಂತೆ ಸರ್ವರನ್ನು ರಕ್ಷಿಸುವ ಗುಣಲಕ್ಷಣಗಳನ್ನು ಹೊಂದಿವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಕಲಾತಂಡದ ಗಂಗೂಬಾಯಿ, ಮಲ್ಲಿಕಾರ್ಜುನ ಜಾನಿ ತಂಡದವರಿಂದ ಬೀದಿನಾಟಕ ಜರುಗಿತು. ಅತಿಥಿಗಳಾಗಿ ಜಂಬಯ್ಯ ಸ್ವಾಮಿ ವಿಜಯಕುಮಾರ್ ಪಾಟೀಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಉಷಾ ಪಾಟೀಲ್, ಶಿವರುದ್ರಯ್ಯ ಸ್ವಾಮಿ ರುದ್ರಸ್ವಾಮಿ, ರೇವಣಸಿದ್ದಪ್ಪ ಪಟ್ಟಣ, ಬಸವಂತರಾಯ ಆಳಂದ, ಮಹೇಶ ಎಂ. ಅಣ್ಣರಾಯ ಸೇರಿದಂತೆ ಗ್ರಾಮದ ನಾಗರಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ದಸ್ತಗೀರ್ ಸಾಬ್ ಅಧ್ಯಕ್ಷತೆ ವಹಿಸಿದ್ದರು.