ಅತ್ಯಾಚಾರಿಗಳಿಗೆ ಕಠಿ ಶಿಕ್ಷೆಗೆ ಗುರಿಪಡಿಸಿ: ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

0
101

ಕಲಬುರಗಿ/ಶಹಾಬಾದ: ಪಟ್ಟಣದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಸೇರಿದಂತೆ ಮುಂತಾದ ಮಹಿಳಾ ಸಂಘಟನೆಗಳು ನೆಹರು ಚೌಕ್  ಹತ್ತಿರ ಡಾ. ಪ್ರಿಯಾಂಕ ರೆಡ್ಡಿ ಸೇರಿದಂತೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಇಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೆಶಿಸಿ AIMSS  ಮಹಿಳ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಗುಂಡಮ್ಮ ಮಡಿವಾಳ ರವರು ಮಾತನಾಡುತ್ತ ಈ ಘಟನೆಯು  ಇಡಿ ನಾಗರಿಕ ಸಮಾಜವೆ ತಲೆ ತಗ್ಗಿಸು ವಿಷಯವಾಗಿದೆ. ನಮ್ಮ ದೇಶ ಉನ್ನತ ಸಾಂಸ್ಕೃತಿಕ ನಾಡು ಸ್ತ್ರೀ ಯರಿಗೆ ಪೂಜ್ಯನೀಯ ಸ್ಥಾನಮಾನ ನೀಡಿದೆ ಎಂದು ಹೇಳುತ್ತಾರೆ. ಆದರೆ ಸರ್ಕಾರಗಳು  ಈ ದೇಶದಲ್ಲಿ ಸ್ತ್ರೀಯರಿಗೆ ಸೂಕ್ತ ಭದ್ರತೆ ಇಲ್ಲಾ 6 ತಿಂಗಳ ಹಸು ಮಗುವನಿಂದ ಹಿಡಿದು ವಯಸ್ಸಾದ ಮಹಿಳೆಯರ ಮೇಲೆ ಅತ್ಯಾಚಾರ ನಡಿತಾಯಿದೆ. ಅಶ್ಲೀಲ ಸಿನಿಮಾ ಸಾಹಿತ್ಯ, ಮಾದಕ ವಸ್ತುಗಳನ್ನು ಹರಿಬಿಟ್ಟು ಯುವಜನರನ್ನ ದಾರಿ ತಪ್ಪಿಸುತ್ತ ಮಹಿಳಯನ್ನು  ಬೊಗದ ವಸ್ತುವನ್ನಾಗಿ ರೂಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಇಂತಹ ವಿಕೃತಿಯನ್ನು  AIMSS, AIDSO, AIDYO  ಸಂಘಟನೆಗಳು ತಿವ್ರಾವಾಗಿ ಖಂಡಿಸಿ.  ಡಾ. ಪ್ರಿಯಾಂಕ ರೆಡ್ಡಿ ಹಾಗೂ ಇತರೆ ಅತ್ಯಾಚಾರ ಹಾಗೂ ಕೊಲೆಯನ್ನು ಮಾಡಿರು ಅಪಾರಾದಿಗಳನ್ನು ಈ ಕೂಡಲೆ ಕಠಿಣ ಶಿಕ್ಷೆ ವಿದಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಉದ್ದೆಶಿಸಿ AIMSS ಶಹಾಬಾದ ಉಪಾಧ್ಯಕ್ಷರಾದ ಕೀರ್ತಿ ಎಸ್.ಎಮ್. ,AIDSO ಶಹಾಬಾದ ಉಪಾಧ್ಯಕ್ಷರಾದ ರಮೇಶ ದೇವಕರ್, ರಾಜೆಂದ್ರ ಅತೂನುರ ಮಾತನಾಡಿದರು. ಶಹಾಬಾದ  AIDSO ಅಧ್ಯಕ್ಷರಾದ ತುಳಜರಾಮ ಎನ್.ಕೆ. ನಿರುಪಿಸಿದರು.

ಈ ಪ್ರತಿಭಟನೆಯಲ್ಲಿ AIDYO ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್. ಹೆಚ್ AIDYO ಶಹಾಬಾದ ಉಪಾಧ್ಯಕ್ಷರಾದ ತಿಮ್ಮಾಯ್ಯ ಮಾನೆ, AIDSO ಶಹಾಬಾದ ಕಾರ್ಯದರ್ಶಿ ರಘು ಜಿ ಮಾನೆ, ಮಾಹದೇವಿ ಅತೂನುರು, ಶಿಲ್ಪಾ.ಎನ್.ಹುಲಿ, ರಾಧಿಕ ಚೌದರಿ ಸೇರಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here