ಜಾಮೀಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸರ ದೌರ್ಜನ್ಯ ಖಂಡಿಸಿ ಎಐಡಿಎಸ್‌ಓ ಸಂಘಟನೆಯಿಂದ ಪ್ರತಿಭಟನೆ

0
90

ಕಲಬುರಗಿ: ಜಾಮೀಯಾ ಮಿಲಿಯಾ ವಿ.ವಿ ಹಾಗೂ ಅಲಿಘರ್ ಮುಸ್ಲಿಮ್ ವಿವಿಯ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ಗುಂಡಿನ ದಾಳಿಯನ್ನು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯು ಉಗ್ರವಾಗಿ ಕಟುಶಬ್ಧಗಳ ಮೂಲಕ ಟಿಕಿಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಹಣಮಂತ ಎಸ್.ಹೆಚ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಜಾಮೀಯಾ ಮಿಲಿಯಾ ವಿ.ವಿಯ ವಿದ್ಯಾರ್ಥಿಗಳು ಮುಂಚಿತವಾಗಿ ತಿಳಿಸಿಯೇ, ಯಾವುದೇ ಹಿಂಸೆಗೆ ಆಸ್ವದವಿಲ್ಲದಂತೆ, ತಮ್ಮ ಬೇಡಿಕೆಗಳಿಗಾಗಿ  ಪ್ರತಿಭಟನೆಯನ್ನು ಶಾಂತಿಯುತವಾಗಿ ಮುಂದುವರೆಸುತ್ತಿದ್ದರು. ಆ ಸಂದರ್ಭದಲ್ಲಿ ಕೆಲವು ಸಮಾಜ ಘಾತುಕ ಶಕ್ತಿಗಳು ಹಿಂಸಾಚಾರಕ್ಕೀಳಿದರೆಂಬ ನೆಪದಲ್ಲಿ, ಇಂತಹ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಸಮಗ್ರವಾಗಿ ತನಿಖೆ ನಡೆಸುವ ಬದಲು, ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಹೇಡಿಗಳಂತೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಪ್ರತಿಭಟನಾಕಾರರಲ್ಲಿ ಹಲವರು ಗುಂಡಿನೇಟಿಗೆ ತುತ್ತಾಗಿ ಗಾಯಗೊಂಡು, ಆಸ್ವತ್ರೆಗಳಿಗೆ ದಾಖಲಾಗಿದ್ದಾರೆ. ಈ ದಿನ ದೇಶದ ವಿದ್ಯಾರ್ಥಿ ಚಳುವಳಿಯ ಇತಿಹಾಸದಲ್ಲಿ ಕರಾಳವಾದ ದಿನವಾಗಿದೆ ಎಂದು ದುರಿದರು.

Contact Your\'s Advertisement; 9902492681

ಇಡೀ ದೇಶವ್ಯಾಪಿ ವಿರೋಧಿಸಲ್ಪಡುತ್ತಿರುವ,  ಕೋಮು ಪಕ್ಷಪಾತದ ಆಧಾರಿತವಾದ ನಾಗರೀಕತ್ವ(ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ ಸಮುದಾಯದ ಪ್ರಜಾತಾಂತ್ರಿಕ ಹಕ್ಕನ್ನು ನಾವು ಎತ್ತಿಹಿಡಿಯುತ್ತೇವೆ. ಮತ್ತು ಹಾಗೆಯೇ  ಈ ಕೂಡಲೇ ಇಂತಹ ನಿರ್ದಾಕ್ಷಿಣ್ಯ ಹಾಗೂ ಮಾರಣಾಂತಿಕವಾದ ದಾಳಿಗಳಂತಹ ಪ್ರಯತ್ನಗಳನ್ನು ನಿಲ್ಲಿಸಬೇಕೆಂದು  ಪೊಲೀಸ್ ಆಡಳಿತ ಮತ್ತ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡತ್ತ್ತ್ತೇವೆ! ಇಂತಹ ಹಿಂಸಾಚಾರಗಳ ಹಿಂದಿರುವ ಘಾತುಕ ಶಕ್ತಿಗಳನ್ನು ಪತ್ತೆ ಹಚ್ಚಬೇಕೆಂದು ಒತ್ತಾಯಿಸಿದೆ.

ಹಾಗೆಯೇ ಇಂತಹ ಭಯಂಕರ ದಾಳಿಗಳಿಗೆ ಹೊಣೆಗಾರರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸಹ ನಾವು ಒತ್ತಾಯಿಸುತ್ತಿದ್ದೇವೆ. ಹಾಗೆಯೇ ರಾಜ್ಯಾಧಿಕಾರದ ದಬ್ಬಾಳಿಕೆ ಮತ್ತು ಅದರ  ಅಪ್ರಜಾತಾಂತ್ರಿಕ ಹಾಗೂ ಅನೈತಿಕ ಆಳ್ವಿಕೆಯ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಶಾಂತಿಯುತ ಪರಿಸ್ಥಿತಿಯನ್ನು ಕಾಯ್ದುಕೊಂಡು ಹೋರಾಟ ಮಂದುವರೆಸಬೇಕೆಂದು ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡಿದೆ.

ಪ್ರತಿಭಟನೆಯಲ್ಲಿ ಯುವಜನ ಸಂಘಟನೆಯ ಮಲ್ಲಿನಾಥ, ಲಿಂಗಣ್ಣ ಜಂಬಗಿ, ಮಹಿಳಾ ಜಿಲ್ಲಾ ಅಧ್ಯಕ್ಷರಾದ ಗುಂಡಮ್ಮ ಮಡಿವಾಳ ವಿದ್ಯಾರ್ಥಿ ಸಂಘಟನಾಕಾರರಾದ ಸ್ನೇಹಾ, ಶಿಲ್ಪಾ, ಗೋದಾವರಿ, ಗೌತಮ, ತುಳಜಾರಾಮ, ವೆಂಕಟೇಶ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here