ಕಲಬುರಗಿ: ವಿವಾದಸ್ಪದ ಭಾರತ ಪೌರತ್ವ ತಿದ್ದುಪಡಿ ಮಸೂದೆ” ಜಾರಿ ಮಾಡುತ್ತಿರುವುದನ್ನು ವಿರೋಧಿಸಿ ಪೀಪಲ್ಸ್ ಫೋರಂ ವತಿಯಿಂದ 19ರಂದು ಎಡಪಕ್ಷಗಳ ನೇತೃತ್ವದಲ್ಲಿ ಹಮ್ಮಿಕೊಂಡ ಕಲಬುರಗಿ ಬಂದ್ ಪ್ರತಿಭಟನಾ ಹೋರಾಟವನ್ನು ಇಲ್ಲಿನ ಪೊಲೀಸ್ ಆಯುಕ್ತರು ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಹಿನ್ನೆಲ್ಲೆಯಲ್ಲಿ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಪ್ರಕಟಣೆಯಲ್ಲಿ 16 ರಿಂದ 19ರ ವರೆಗೆ ಅಲ್ಪಸಂಖ್ಯಾತರ ಇಲಾಖೆಯ ಮೌಲಾನಾ ಆಜಾದ ಮಾದರಿ ಶಾಲೆಗಳಲ್ಲಿ ಮುಖ್ಯೋಪಧ್ಯಾಯರು ಹಾಗೂ ವಿವಿಧ ವಿಷಯಗಳ ಶಿಕ್ಷಕರುಗಳ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ಲಿಖಿತ ಪರೀಕ್ಷೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕಲಬುರಗಿ ಬಂದ್ ಕರೆ ನೀಡಿದಕ್ಕೆ ಅನುಮಾತಿ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟನೆ ನೀಡಿ, 16 ರಿಂದ 19 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಮ. 12 ಗಂಟೆಯವರೆಗೆ ಮತ್ತು ಮದ್ಯಾಹ್ನ 2 ಗಂಟೆಯಿಂದ ಸಾ, 4 ಗಂಟೆಯವರೆಗೆ ಕಲಬುರಗಿ ನಗರದ 23 ಶಾಲಾ, ಕಾಲೇಜುಗಳಲ್ಲಿ ನಿಗದಿಪಡಿಸಲಾಗಿರುತ್ತದೆ.
“ಪೀಪಲ್ಪ ಫೋರಂ ಕಲಬುರಗಿ” ವತಿಯಿಂದ ದಿನಾಂಕ 19 ರಂದು ಬಂದ್’ ನೀಡಿರುವ ಕರೆಗೆ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲಾ ಎಂದು ಪ್ರಕಟನೆ ಹೊರಡಿಸಿದ್ದಾರೆ.
ಈ ಹಿಂದೆ 13 ನಗರದಲ್ಲಿ 144 ಜಾರಿ ಇರುವುದರಿಂದ ಪ್ರತಿಭಟನೆ ನಡೆಸಲು ನಿರಾಕರಿಸಿ, ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅಲ್ಲಿಸಲು ಅವಕಾಶ ನೀಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.