ಜನೆವರಿ 8 ರ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲಿಸಿ ಪೂರ್ವಭಾವಿ ಸಭೆ 28 ಕ್ಕೆ

0
66

ಸುರಪುರ: ಮುಂಬರುವ ೨೦೨೦ರ ಜನೆವರಿ ೮ ರಂದು ಎಲ್ಲಾ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಬೆಂಬಲಿಸಲು ಸಾಮೂಹಿಕ ಸಂಘಟನೆಗಳ ಸಭೆಯನ್ನು ಇದೇ ೨೮ ರ ಶನಿವಾರ ನಡೆಸಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ದೇಶದಲ್ಲಿ ರೈತ ಮತ್ತು ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ.ಬೆಲೆ ಏರಿಕೆ ಹೇಳತೀರದಾಗಿದೆ.ದಿನ ಬಳಕೆ ವಸ್ತುಗಳು ಕೈಗೆಟುಕದಂತಾಗಿ ಬಡವರು ಬದುಕುವುದೆ ದುಸ್ಥರವಾಗಿದೆ.ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಸರಕಾರದ ರೈತ ಮತ್ತು ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಜನೆವರಿ ೮ನೇ ತಾರೀಖಿನಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಆಚರಿಸುತ್ತಿದ್ದು ಇದಕ್ಕೆ ಬೆಂಬಲಿಸಿ ತಾಲೂಕಿನಲ್ಲಿಯ ಎಲ್ಲಾ ಸಾಮೂಹಿಕ ಸಂಘಟನೆಗಳು ಸೇರಿ ನಗರದ ಡಾ. ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಇದೇ ೨೮ರ ಶನಿವಾರ ಬೆಳಿಗ್ಗೆ ೧೦:೩೦ಕ್ಕೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.ಸಭೆಗೆ ತಾಲೂಕಿನ ಎಲ್ಲಾ ರೈತ ಕಾರ್ಮಿಕ ದಲಿತ ಮತ್ತು ಪ್ರಗತಿಪರ ಸಾಮೂಹಿಕ ಸಂಘಟನೆಗಳು ಸೇರಿ ಸಭೆ ನಡೆಸಲಿದ್ದು ಎಲ್ಲಾ ಸಂಘಟಕರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನಿಡುವಂತೆ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಬಾಕ್ಸಲ್ಲಿ ಹೇಳಿಕೆ ಹಾಕಿಕೊಳ್ಳಿ: ಮೊನ್ನೆ ೨೩ರಂದು ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಕೃಷಿ ಇಲಾಖೆಯಿಂದ ಆಚರಿಸಲಾದ ರೈತ ದಿನಾಚರಣೆಯಲ್ಲಿ ರೈತ ಹೋರಾಟಗಾರರನ್ನು ಅಪಮಾನಿಸಲಾಗಿದೆ.ಸರಕಾರದ ನಿಯಮದಂತೆ ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವೇದಿಕೆ ಮೇಲಿರಬೇಕು.ಆದರೆ ಖಾಸಗಿಯವರನ್ನು ವೇದಿಕೆ ಮೇಲೆ ಕೂಡಿಸುವ ಮೂಲಕ ನಿಯಮವನ್ನು ಉಲ್ಲಂಘಿಸಲಾಗಿದೆ.ಆದರೆ ಗೌರವಾರ್ಥವಾಗಿ ವೇದಿಕೆ ಮೇಲೆ ಮುಖಂಡರನ್ನು ಕೂಡಿಸಿದರು ನಮ್ಮ ಯಾವುದೇ ಆಕ್ಷೇಪವಿಲ್ಲ.ಆದರೆ ರೈತ ದಿನಾಚರಣೆಯಲ್ಲಿ ರೈತ ಹೋರಾಟಗಾರರನ್ನೆ ಕಡೆಗಣಿಸುವ ಮೂಲಕ ಕೃಷಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆ.ತಮ್ಮಿಷ್ಟದಂತೆ ಒಂದೇ ಸಂಘಟನೆಯ ಅನೇಕರನ್ನು ವೇದಿಕೆಗೆ ಕರೆದು ಇನ್ನುಳಿದ ಸಂಘಟನೆಯ ಅಧ್ಯಕ್ಷರು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅವರನ್ನು ಕರೆಯದೆ ಅಪಮಾನಿಸಲಾಗಿದೆ.ಇಂತಹ ತಾರತಮ್ಯ ಮಾಡಿದ ಅಧಿಕಾರಿಗಳ ನಡೆಯನ್ನು ಪ್ರಾಂತ ರೈತ ಸಂಘ ಖಂಡಿಸುತ್ತದೆ.ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಇಂತಹ ತಾರತಮ್ಯ ಮಾಡಿದಲ್ಲಿ ಕಾರ್ಯಕ್ರಮದಲ್ಲಿಯೇ ಅಂತಹ ಅಧಿಕಾರಿಗಳ ವಿರುಧ್ಧ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಹೋರಾಟ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆ ಮೂಲಕ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here