ಶರಣಬಸವ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಅಪಘಾತ ತಡೆ ಜಾಗೃತಿ

0
27

ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ನಗರದ ಸಂಚಾರಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆ ಜಾಗೃತಿ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಅಪಘಾತ ತಡೆ ಹಾಗೂ ರಸ್ತೆ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

ರಸ್ತೆ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ದಿನನಿತ್ಯ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇದರಿಂದ ಸಾವಿರಾರು ಕುಟುಂಬಗಳು ಕಣ್ಣೀರಿನಲ್ಲೇ ಕೈತೊಳೆಯುವಂತಾಗಿದೆ. ಪರಿಣಾಮ ರಸ್ತೆ ನಿಯಮಗಳ, ರಸ್ತೆ ಸುರಕ್ಷತಾ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಎಂದು ನಗರದ ಸಂಚಾರಿ ಪೊಲೀಸ್ ಸಿಬ್ಬಂದಿ ರಾಜು ಕೋಬಾಳ ತಿಳಿಸಿದರು.

Contact Your\'s Advertisement; 9902492681

ರಸ್ತೆ ಸುರಕ್ಷತೆ ನಿಯಮಗಳು ಪಾಲನೆ ಮಾಡದ ಪರಿಣಾಮ ಭಾರತದಲ್ಲಿ ರಸ್ತೆ ಅಪಘಾತದಿಂದ ೧.೫೦ಲಕ್ಷ ಜನರು ಸಾವುನ್ನಪ್ಪುತ್ತಿದ್ದಾರೆ. ಇದರಿಂದ ವಾಹನ ಸವಾರರು ವಾಹನಕ್ಕೆ ಸಂಬಂಧಿಸಿದ ಪರವಾನಿಗೆ ಸೇರಿದಂತೆ ಇತರ ದಾಖಲೆಗಳ ಸಮೇತ ವಾಹನ ಚಲಾಯಿಸುವುದು ಉತ್ತಮ ಎಂದು ತಿಳಿಸಿದರು.

ರಸ್ತೆ ಸುರಕ್ಷತೆಯ ಪ್ರಾಮುಖ್ಯತೆ, ರಸ್ತೆ ಸಂಕೇತಗಳು, ಸಂಚಾರಿ ದೀಪಗಳು ಮತ್ತು ಅವುಗಳ ಪಾತ್ರದ ಬಗ್ಗೆ ಹಾಗೂ ಸಂಚಾರ ಸುರಕ್ಷತೆಯ ನಿಯಮಗಳ ಪಾಲನೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಸಂಚಾರಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸೂರ್ಯಕಾಂತ, ಪ್ರಾಧ್ಯಾಪಕರಾದ ಡಾ.ಎಸ್.ಎಚ್ ಹೊನ್ನಳ್ಳಿ, ಪ್ರೋ.ಎಸ್.ಎಸ್ ಕರಡ್ಡಿ, ಪ್ರೋ.ಗೀತಾ, ಪ್ರೋ.ಸುನೀತಾ, ಪ್ರೋ.ರೂಪತಾರಾ, ಪ್ರೋ.ಪ್ರೇಮಾವತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here