‘ವಚನ ವರ್ಷ’ ಒಂದು ದಿನದ ವಿಶೇಷ ಕಾರ್ಯಕ್ರಮ ನಾಳೆ

0
85

ಕಲಬುರಗಿ: ೧೨ನೇ ಶತಮಾನದ ಬಸವಾದಿ ಶರಣರ ನಿತ್ಯ ನೂತನದಂತಿರುವ ವಚನಗಳಲ್ಲಿನ ತಿರುಳನ್ನು ಇಂದಿನ ಯುವ ಸಮೂಹಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ನಾಳೆ (ಜ.೧) ಬೆಳಗ್ಗೆ ೧೦.೩೦ ಕ್ಕೆ ಅನುದಿನದ ಹರ್ಷ… ವಚನ ವರ್ಷ ಎಂಬ ಒಂದು ದಿನದ ವೈಚಾರಿಕ ಚಿಂತನ ಕಾರ್ಯಕ್ರಮವೊಂದನ್ನು ನಗರದ ದರ್ಗಾ ರಸ್ತೆಯಲ್ಲಿರುವ ಸರಕಾರಿ ಶಿಕ್ಷಕೀಯರ ತರಬೇತಿ ಸಂಸ್ಥೆಯ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.

ಇಂದಿನ ಎಲ್ಲ ಸಾಮಾಜಿಕ ರೋಗಗಳಿಗೆ ವಚನ ಸಾಹಿತ್ಯವೇ ಮದ್ದಾಗಿದೆ. ವಚನಗಳನ್ನು ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತರುವ ಸಂಕಲ್ಪ ಮಾಡಬೇಕಾಗಿದೆ. ದ್ವೇಷ, ಅಸೂಯೆ, ಸ್ವಾರ್ಥ, ಅಹಂಕಾರಗಳಿಂದಲೇ ನಾವಿಂದು ಮೆರೆಯುತ್ತಿದ್ದೇವೆ. ಪ್ರತಿಯೊಬ್ಬರೂ ಸತ್ಯ, ನಿಷ್ಠೆ, ಕಾಯಕದಲ್ಲಿ ತೊಡಗಿ ಸದಾಚಾರದಲ್ಲಿ ಸಾಗಿದರೆ ಶರಣರು ಕಂಡ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಅದಕ್ಕೆ ಪೂರಕವಾಗಿ ಯುವ ಸಮುದಾಯದ ಪ್ರೇರಣೆಗಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.

Contact Your\'s Advertisement; 9902492681

ಅಂದು ಬೆಳಗ್ಗೆ ೧೦.೩೦ ಜರುಗಲಿರುವ ಸಮಾರಂಭವನ್ನು ಕಮಲಾಪುರ ತಹಾಸೀಲ್ದಾರರಾದ ಅಂಜುಮ್ ತಬಸ್ಸುಮ್ ಉದ್ಘಾಟಿಸಲಿದ್ದು, ವಚನ ನಿತ್ಯ ನೂತನ ವಿಷಯದ ಕುರಿತು ಸಂಗಮೇಶ್ವರ ಆಸ್ಪತ್ರೆಯ ಅಧೀಕ್ಷಕಿ ಡಾ.ಅರುಂಧತಿ ಪಾಟೀಲ ಅನುಭಾವ ನೀಡಲಿದ್ದಾರೆ. ಸಂಸ್ಥೆಯ ಪ್ರಾಂಶುಪಾಲರಾದ ಬಸಂತಬಾಯಿ ಡಿ.ಅಕ್ಕಿ ಅಧ್ಯಕ್ಷತೆ ವಹಿಸಲಿದ್ದು, ಶರಣ ಚಿಂತಕಿ ಸಂಗೀತಾ ಉಳ್ಳಾಗಡ್ಡಿ ಸೇರಿ ಇತರರು ಉಪಸ್ಥಿತರಿರುವರು.

ಬೆಳಗ್ಗೆ ೧೧.೩೦ ಕ್ಕೆ ನಡೆಯುವ ಹೊಸ ಬೆಳಗಿನ ಸಿರಿ ಎಂಬ ವಿಶೇಷ ಗೋಷ್ಠಿಯಲ್ಲಿ ವಚನ ವೈಚಾರಿಕ ದರ್ಶನ ಕುರಿತು ಗುಲಬರ್ಗ ವಿವಿ ಯ ವಿಶ್ರಾಂತ ಕುಲಪತಿ ಪ್ರೊ.ಎಸ್.ಪಿ.ಮೇಲ್ಕೇರಿ ಮಾತನಾಡಲಿದ್ದು, ವಚನ ಸತ್ಯ ದರ್ಶನ ಕುರಿತು ಪತ್ರಕರ್ತ-ಶರಣ ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಲಿದ್ದಾರೆ. ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಅನೇಕ ವೈಚಾರಿಕ ಚಿಂತಕರು ಉಪಸ್ಥಿತರಿರುವರು ಎಂದು ಅಕಾಡೆಮಿಯ ಎಸ್.ಎಂ.ಪಟ್ಟಣಕರ್, ಶಿವರಾಜ ಅಂಡಗಿ, ಡಾ.ಕೆ.ಗಿರಿಮಲ್ಲ, ಪರಮೇಶ್ವರ ಶಟಕಾರ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here