ಸುರಪುರ: ಇಂದಿನ ಅನೇಕ ಯುವಕ ಮಿತ್ರರು ಹೊಸ ವರ್ಷದ ಹೆಸರಲ್ಲಿ ಎಲ್ಲೆಂದರಲ್ಲಿ ಕುಡಿದು ಕುಣಿಯುತ್ತಾ ಹಾಡು ಮತ್ತು ಸಂಗೀತಕ್ಕೆ ಕುಣಿದು ಮೋಜು ಮಸ್ತಿ ಮಾಡುವ ಮೂಲಕ ಹೊಸ ವರ್ಷಾಚರಣೆಯನ್ನು ಆಚರಿಸುವುದನ್ನು ನಾವು ಕಾಣುತ್ತೇವೆ.ಆದರೆ ನಿಜವಾದ ಆಚರಣೆ ಎಂದರೆ ಹೊಸ ವರ್ಷ ಉತ್ತಮ ಸಂಸ್ಕಾರಕ್ಕೆ ನಾಂದಿಯಾಗಬೇಕು ಎಂದು ಶ್ರೀಗುರು ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ ಮಾತನಾಡಿದರು.
ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೊಸ ವರ್ಷಾಚರಣೆಯಲ್ಲಿ ಉತ್ತಮ ಸಂಸ್ಕಾರದ ಸಂಕಲ್ಪ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಮೋಜು ಮಸ್ತಿ ಎಂಬುದು ಮನುಷ್ಯನಿಗೆ ಕ್ಷಣಿಕ ಸಂತೋಷವನ್ನು ನೀಡುತ್ತದೆ.ಆದರೆ ಇದರಿಂದ ಸಮಯ ಹಣ ಮತ್ತು ಪರಿಸರ ನಾಶವು ಸಂಭವಿಸುತ್ತದೆ.ಆದ್ದರಿಂದ ನಾವೆಲ್ಲ ಈ ಮುಂದೆ ಹೊಸ ವರ್ಷಾಚರಣೆ ಎಂದರೆ ನಮ್ಮಿಂದ ಸಮಾಜಕ್ಕೆ ಏನಾದರು ಕೊಡುಗೆ ನೀಡುವ ಸಂಕಲ್ಪ ಮಾಡುವ ಮೂಲಕ ಆಚರಣೆ ಮಾಡೋಣ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸ್ಥಳಿಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಧರ್ಮರಾಜ ಬಡಿಗೇರ ಮಾತನಾಡಿ,ಇಂದು ಉತ್ತಮ ಸಂಸ್ಕಾರ ಎಂಬುದು ಕೇವಲ ಹಿರಿಯರ ಹೇಳಿಕೆಗೆ ಮಾತ್ರ ಸೀಮಿತವಾಗುತ್ತಿದೆ.ಯುವಕ ಮಿತ್ರರಲ್ಲಿ ಭಕ್ತಿ ಗುರು ಹಿರಿಯರ ಬಗ್ಗೆ ಗೌರವ ಭಾವನೆ ಎಂಬುದು ಕಡಿಮೆಯಾಗುತ್ತಿದೆ.ಇಂತಹ ಸಂದರ್ಭದಲ್ಲಿ ಶ್ರೀಗುರು ಸೇವಾ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ನೀಡುವ ಸಂಕಲ್ಪದ ಕಾಂiiಕ್ರಮ ಮಾಡುವ ಮೂಲಕ ಮಾದರಿಯಾಗಿದೆ ಎಂದರು.
ಯುವ ಪೀಳಿಗೆ ಹೊಸ ವರ್ಷಾಚರಣೆ ಎಂದರೆ ಕುಡಿದು ಕುಣಿಯುವ ಬದಲು ಹೊಸ ವರ್ಷದ ಆರಂಭದಲ್ಲಿ ಒಂದಿಷ್ಟು ಸಮಾಜಮುಖಿಯಾದ ಕೆಲಸಗಳ ಮಾಡುವ ಬಗ್ಗೆ ಸಂಕಲ್ಪ ತೊಟ್ಟು ತಮ್ಮ ಬದುಕಿನ ಜೊತೆಗೆ ವರ್ಷವಿಡೀ ಆ ಸಂಕಲ್ಪಗಳ ಕೆಲಸ ಮಾಡುತ್ತ ಸಮಾಜಕ್ಕೆ ಏನಾದರು ಒಳ್ಳೆಯದನ್ನು ಮಾಡಿದರೆ ಅದಕ್ಕಿಂತ ಮಿಗಿಲಾಸ ಆಚರಣೆ ಮತ್ತೊಂದಿರಲಾರದು.ಆ ನಿಟ್ಟಿನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಸಂಕಲ್ಪ ಮಾಡುವ ಮೂಲಕ ಪರಿಸರ ಕಾಳಜಿಗೆ ಮುಂದಾಗುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಕೃಷ್ಣಾ ಹಾವಿನ್,ಚೌಡಪ್ಪ ಕೊಳೂರ,ಬಸಮ್ಮ,ಕಸ್ತೂರಿ.ಅಯ್ಯಮ್ಮ ಸೇರಿದಂತೆ ಅನೇಕರಿದ್ದರು.