ಅನೇಕರಿಗೆ ಶಿಕ್ಷಣ ಕಲ್ಪಿಸಿದ ಶಿಕ್ಷಣ ಪ್ರೇಮಿ ಬಾಗಪ್ಪ ಬಿಲ್ಲವ್: ಶರಣಗೌಡ ಪಾಟೀಲ

0
99

ಸುರಪುರ: ತಾಲೂಕಿನಲ್ಲಿ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳಿರುವಾಗ ಇಲ್ಲಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಎಂಬುದು ಮರೀಚಿಕೆಯಾಗಿದ್ದ ಸಂದರ್ಭದಲ್ಲಿ ಅನೇಕ ಶಾಲಾ ಕಾಲೇಜುಗಳನ್ನು ತೆರೆಯುವ ಮೂಲಕ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದ ಶಿಕ್ಷಣ ಪ್ರೇಮಿ ಎಂದರೆ ಅದು ದಿ:ಬಾಗಪ್ಪ ಬಿಲ್ಲವರು ಎಂದು ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿದರು.

ನಗರದ ರಂಗಂಪೇಟೆಯ ಡಾ. ಬಿ.ಆರ್.ಅಂಬೇಡ್ಕರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಪ್ರೇಮಿ ದಿ. ಬಾಗಪ್ಪ ಬಿಲ್ಲವರ ೬೦ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಎರಡು ದಶಕಗಳ ಹಿಂದೆಯೆ ಇಲ್ಲಿ ಡಾ. ಬಿ.ಆರ್.ಅಂಬೇಡ್ಕರ ವಿದ್ಯಾವರ್ಧಕ ಸಂಸ್ಥೆಯನ್ನು ಕಟ್ಟಿ ಅದರ ಮೂಲಕ ಸುರಪುರ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ.ಇಂದು ಅವರು ನಮ್ಮೊಂದಿಗಿಲ್ಲ ಎಂಬುದು ದುಖದ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಗಂಗಾಧರ ರುಮಾಲ ಮಾತನಾಡಿ,ದಿ: ಬಾಗಪ್ಪ ಬಿಲ್ಲವರು ಅಂದು ಈ ಸಂಸ್ಥೆಯನ್ನು ಹುಟ್ಟುಹಾಕದೆ ಇದ್ದರೆ ಇಂದು ಅದೆಷ್ಟೋ ಪ್ರತಿಭೆಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು.ಈ ಸಂಸ್ಥೆಯಲ್ಲಿ ಓದಿದ ಅದೆಷ್ಟೋ ಜನರು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ.ಬರಹಗಾರರು ವಕೀಲರು ಹೀಗೆ ಅನೇಕ ರಂಗಗಳಿಗೆ ಅದ್ಭುತವಾದ ಪ್ರತಿಭೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದರ ಹಿಂದೆ ದಿ: ಬಾಗಪ್ಪ ಬಿಲ್ಲವರ್ ಸೇವೆಯಿದೆ ಎಂದರು.ಇವರನ್ನು ನಾವೆಲ್ಲ ನಿತ್ಯವು ಸ್ಮರಿಸಬೇಕಿದೆ.ಅವರ ಅಕಾಲಿಕವಾದ ಅಗಲಿಕೆ ನಮಗೆ ಇಂದಿಗು ಬಾಧಿಸುತ್ತಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಬಾಗಪ್ಪ ಬಿಲ್ಲವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪಿಡ್ಡಪ್ಪ ಕಾಮತ್,ಮಲ್ಲಿಕಾರ್ಜುನ ಹೊಸ್ಮನಿ,ಬಸವರಾಜ ಮಾಲಿಪಾಟೀಲ,ಅಯ್ಯಣ್ಣಗೌಡ ಬಳಬಟ್ಟಿ,ಅನಿಲಕುಮಾರ, ಗುಲಾಬಖಾನ,ಖಲೀಲ ಅಹ್ಮದ,ಹೊನ್ನಪ್ಪ ತೇಲ್ಕರ್,ಆನಂದ,ಹಣಮಂತ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here