ಸುರಪುರದಲ್ಲಿ ರಂಗ ಮಂದಿರ ನಿರ್ಮಾಣದ ಅವಶ್ಯಕತೆಯಿದೆ: ಬಲಭೀಮನಾಯಕ

0
69

ಸುರಪುರ: ತಾಲ್ಲೂಕಿನಲ್ಲಿ ರಂಗ ಕಲಾವಿದರೂ, ರಂಗ ಸಾಹಿತಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ನಾಟಕವನ್ನು ಪ್ರೋತ್ಸಾಹಿಸುವ ಅಭಿಮಾನಿಗಳೂ ಇದ್ದಾರೆ. ಆದರೆ ನಾಟಕ ಪ್ರದರ್ಶಿಸಲು ರಂಗ ಮಂದಿರ ಇಲ್ಲ ಎಂದು ಹವ್ಯಾಸಿ ರಂಗ ಕಲಾವಿದ ಬಲಭೀಮನಾಯಕ ಭೈರಿಮಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಶನಿವಾರ ಮೂಕನಾಯಕ ಸಾಂಸ್ಕೃತಿಕ ಕಲಾ ನಾಟ್ಯ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ದಾರಿ ತಪ್ಪಿದ ನಾರಿ ಉಚಿತ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಉಪಪ್ರಾಚಾರ್ಯ ಯಲ್ಲಪ್ಪ ಕಾಡ್ಲೂರು ಮಾತನಾಡಿ, ತಾಲ್ಲೂಕಿನ ಮಲ್ಲೇಶಿ ಕೋನ್ಹಾಳ, ದೇವಿಂದ್ರಪ್ಪ ಬಾದ್ಯಾಪುರ, ಮೂರ್ತಿ ಬೊಮ್ಮನಳ್ಳಿ, ರವಿನಾಯಕ ಭೈರಿಮಡ್ಡಿ, ಭೀಮಣ್ಣ ಮಸರಕಲ್, ನಿಂಗಪ್ಪನಾಯಕ ಬಿಜಾಸಪುರ, ಮಾಳಪ್ಪ ಬನ್ನೆಟ್ಟಿ, ಮೌನೇಶ ದಳಪತಿ ಇತರ ಶ್ರೇಷ್ಠ ರಂಗ ಕಲಾವಿದರಿದ್ದಾರೆ. ಸಿನಿಮಾ ರಂಗಕ್ಕೆ ರಂಗಭೂಮಿಯೇ ಮಾತೃ ವೇದಿಕೆ. ರಂಗಭೂಮಿಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

Contact Your\'s Advertisement; 9902492681

ದಾರಿ ತಪ್ಪಿದ ನಾರಿ ನಾಟಕದ ಸಾಹಿತಿ ಮಲ್ಲೇಶಿ ಕೋನ್ಹಾಳ ಮಾತನಾಡಿ, ತಾಲ್ಲೂಕಿನಲ್ಲಿ ರಂಗ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯಬೇಕು. ಈ ಭಾಗದ ಕಲಾವಿದರನ್ನು ಗುರುತಿಸಿ ನಾಟಕ ಅಕಾಡೆಮಿ ಪ್ರಶಸ್ತಿ ನೀಡಬೇಕು. ಅರ್ಹ ಕಲಾವಿದರಿಗೆ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು. ದಾರಿ ತಪ್ಪಿದ ನಾರಿ ಪುಸ್ತಕವನ್ನು ಮುಖಂಡ ಶ್ರೀನಿವಾಸನಾಯಕ ದರಬಾರಿ ಬಿಡುಗಡೆಗೊಳಿಸಿದರು. ವಿರುಪಾಕ್ಷಿ ಕೋನ್ಹಾಳ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶನಾಯಕ ಭೈರಿಮಡ್ಡಿ ನಿರೂಪಿಸಿದರು.

ಖ್ಯಾತ ರಂಗಕರ್ಮಿಗಳಾದ ಶರಣಪ್ಪ ಹಾಲಭಾವಿ, ಬಸವರಾಜ ಪಂಚಗಲ್, ಮಲ್ಲು ಮಾಸ್ಟರ್ ಹಲಕರ್ಟಿ, ಪಲ್ಲವಿ ಬಳ್ಳಾರಿ, ನೀತಾ ಮಹಿಂದ್ರಗಿ, ಭವಾನಿ ಬೆಂಗಳೂರು, ಮೀನಾಕ್ಷಿ ದುಧನಿ, ಕೃಷ್ಣ ಹೀರಾಪುರ, ಸಿದ್ದಣ್ಣ ಶಾರದಳ್ಳಿ, ಶಿವುಮಾನಯ್ಯ ವಾಗಣಗೇರಾ, ಮೇಘಾ ಬೋನ್ಹಾಳ ಇತರ ೨೪ ಜನರಿಗೆ ಕಲಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೆಂಕಟೇಶನಾಯಕ ಅರಕೇರಿ, ಅಮರೇಶಗೌಡ ಸರ್ಜಾಪುರ, ಪರಣ್ಣಗೌಡ ಶಾಂತಪುರ, ಶಿವರಾಜನಾಯಕ ಜಾಗೀರದಾರ, ಬಸವರಾಜ ಕೊಡೇಕಲ್, ಯಲ್ಲಪ್ಪ ಹುಲಿಕಲ್, ಗುರುಪಾದಪ್ಪ ಬನ್ನಾಳ, ಶಾಂತಗೌಡ ದಾನರೆಡ್ಡಿ, ವಿರುಪಣ್ಣನಾಯಕ, ಹಣಮಗೌಡ ಶಖಾಪುರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here