ಚಿತ್ತಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದ ರೈತರ ಖಾತೆಗೆ 2000 ರೂಪಾಯಿ ಬೇಡ, ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಬೇಕೆಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ಪಾಟೀಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನವ ಕರ್ನಾಟಕ ರೈತ ಸಂಘ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡುತ್ತಾ ರೈತ ದೇಶದ ಬೆನ್ನೆಲುಬು. ರೈತರು ದುಡಿದರೆ ಮಾತ್ರ ಪಟ್ಟಣದಲ್ಲಿರುವವರು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ರೈತ ಶಾರೀರಿಕ ಆರೋಗ್ಯದ ಜತೆಗೆ ಮನಸ್ಸು ಸಶಕ್ತವಾಗಿರಬೇಕು. ದುಶ್ಚಟಗಳಿಗೆ ಒಳಗಾಗದೆ ಬಂದ ಆದಾಯದಲ್ಲಿ ಕುಟುಂಬವನ್ನು ಸುಖಮಯವಾಗಿ ನೋಡಿಕೊಳ್ಳಬೇಕು ಎಂದರು.
ರೈತ ಸಂಘದ ಅಧ್ಯಕ್ಷರಾಗಿ ಯಲ್ಲಾಲಿಂಗ ತಂದೆ ಮಲ್ಲಿಕಾರ್ಜುನ ಪೂಜಾರಿ ಹಣ್ಣಿಕೇರಾ ಮತ್ತು ನಾಲವಾರ ಹೋಬಳಿ ಅಧ್ಯಕ್ಷರಾಗಿ ಭೀಮಣ್ಣ ತಂದೆ ಕಾಶಣ್ಣ ಗಂಟೇಲಿ ಅವರನ್ನು ಆಯ್ಕೆ ಮಾಡಿ, ನೇಮಕಾತಿ ಪತ್ರವನ್ನು ರಾಜ್ಯಾಧ್ಯಕ್ಷರು ನೀಡಿದರು.
ಈ ಸಂದರ್ಭದಲ್ಲಿ ನವ ಕರ್ನಾಟಕ ರೈತ ಸಂಘದ ರಾಜ್ಯ ಖಜಾಂಚಿ ಸಿದ್ದರಾಮ್ ಪಾಟೀಲ್, ಕಲಬುರ್ಗಿ ಜಿಲ್ಲಾಧ್ಯಕ್ಷ ಸುರೇಶ್ ಗುತ್ತೇದಾರ,ರೈತ ಮುಖಂಡರಾದ ಶಿವದರ್ಶಿನಿ ಪಡಶೆಟ್ಟಿ, ಮೌಲಾಸಾಬ್ ಕೊಳ್ಳಿ, ಜಗದೀಶ್ ಪಾಟೀಲ್, ದೇವಿಂದ್ರಪ್ಪ, ನರಸಪ್ಪ, ಸಾಬಣ್ಣ, ಹಾಜಿಸಾಬ, ಇಸ್ಮಾಯಿಲ್ ಮುಲ್ಲಾ, ಬಸವರಾಜ ಪಾಟೀಲ್, ಸೇರಿದಂತೆ ಇತರರಿದ್ದರು.