ಯಾದಗಿರಿ: ಶತಶತಮಾನಗಳಿಂದ ನಿರಂತರ ಶೋಷಣೆಗೆ ಒಳಗಾದ ಮಹಿಳೆಯರಲ್ಲಿ ಸ್ವಾಭಿಮಾನದ ಬದುಕನ್ನು ಕಲಿಸಿಕೊಟ್ಟ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದು ಶಿಕ್ಷಕಿ ವಿಜಯಲಕ್ಷ್ಮಿ ಹೆರಕಲ್ ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬಿರನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಾವಿತ್ರಿಬಾಯಿ ಪುಲೆ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ತ್ರೀ ಅಬಲೆ. ಅವಳು ಕಲಿಯುವುದಕ್ಕೆ ಅರ್ಹಳಲ್ಲಾ. ಸ್ತ್ರೀಗೆ ಸ್ವಾತಂತ್ರ್ಯ ಇಲ್ಲ ಎಂದು ಮನು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಧಿಕ್ಕರಿಸಿ, ಪುರುಷರಿಂದ ನಿರಂತರ ಶೋಷಣೆಗೆ ಒಳಗಾದ ಹಾಗೂ ಮೇಲ್ವರ್ಗದ ಬ್ರಾಹ್ಮಣ ಮಹಿಳೆಯರಿಗೂ ಶಿಕ್ಷಣವನ್ನು ಕೊಡಿಸುವುದರ ಜೊತೆಗೆ ಅಲ್ಪಸಂಖ್ಯಾತ ಹಿಂದುಳಿದ ಶೋಷಣೆಗೆ ಒಳಗಾದ ದಲಿತರಿಗೆ ಶಿಕ್ಷಣವನ್ನು ಕೊಡುವುದರಲ್ಲಿ ಪ್ರಮುಖ ಪಾತ್ರವನ್ನು ಸಾವಿತ್ರಿಬಾಯಿ ವಹಿಸಿದ್ದರು.
ನಿರಂತರ ಗಂಡಿನ ದರ್ಪದಿಂದ ಹೊರಗಡೆ ಬರಲು ಶಿಕ್ಷಣ ಅವಶ್ಯಕ ಎಂಬುದನ್ನು ಅರಿತ ಸಾವಿತ್ರಿ ಬಾಯಿ ಫುಲೆ, ಮಹಿಳೆಯರು ಮೊದಲ ಶಿಕ್ಷಣ ಕಲಿಯಬೇಕು. ಮಗುವಿಗೆ ಉತ್ತಮ ಸಂಸ್ಕಾರವನ್ನು ನೀಡುವುದರಲ್ಲಿ ತಾಯಿ ಪ್ರಮುಖ ಪಾತ್ರವಹಿಸುತ್ತಾ ಮೊದಲ ಆಗುತ್ತಾಳೆ. ಹೀಗೆ ನಾನಾ ಉದ್ದೇಶಗಳನ್ನು ಇಟ್ಟುಕೊಂಡು ಶಿಕ್ಷಣ ಮಹಿಳೆಯರಿಗೆ ಶಿಕ್ಷಣ ಕೊಡಿಸಲು ಮುಂದಾದಳು. ಶೋಷಿತ ಸಮುದಾಯದ ಮಹಿಳೆಯರ ನಾಲಿಗೆಯ ಮೇಲೆ ಅಕ್ಷರ ಬರೆದ ಧೀಮಂತ ಮಹಿಳೆ ನಮ್ಮ ಸಾವಿತ್ರಿಬಾಯಿಪುಲೆ ಹಾಗೂ ಉಚ್ಚವರ್ಗದ ಜನರಿಂದ ಸೆಗಣಿಯಿಂದ ಹೊಡೆಸಿಕೊಂಡು ಅವಮಾನ ಅನುಭವಿಸಿದ್ದಾಳೆ.
ಆ ತಾಯಿಯ ನಿರಂತರ ಹೋರಾಟದಿಂದ ಇವತ್ತು ಪ್ರತಿಯೊಂದು ಸ್ಪರ್ಧೆಯಲ್ಲಿ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಇಂದಿರಾಗಾಂಧಿ, ಕಲ್ಪನಾ ಚಾವ್ಲಾ, ಪ್ರತಿಭಾ ದೇವಿಸಿಂಗ್ ಪಾಟೀಲ್, ಸುಚೇತಾ ಕೃಪಲಾನಿ, ವಿ ಎಸ್ ರಮಾದೇವಿ ಸಾಲು-ಸಾಲು ಮಹಿಳಾ ಚೇತನಗಳು ಇವತ್ತು ಅನಿಕೇತನ ವಾಗುವುದಕ್ಕೆ ಮೂಲ ಪ್ರೇರಣೆ ಸಾವಿತ್ರಿಬಾಯಿ ಪುಲೆ ಎಂದರು.
ಅವರು ಹಾಕಿಕೊಟ್ಟ ಮಾರ್ಗದಿಂದ ನಾನು ಇವತ್ತು ಬಾಗಲಕೋಟೆಯಿಂದ ಬೀರನೂರ ಬಂದು ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಹೆಮ್ಮೆ ತರುವಂತಹ ವಿಷಯ. ಆ ಮಹಾತಾಯಿಯ ಸೇವೆ ಪ್ರಸ್ತುತ ಜಗತ್ತಿಗೆ ಅತಿ ಅವಶ್ಯಕ. ಪ್ರಸ್ತುತ ಮಹಿಳಾ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿವೆ. ಹೆಣ್ಣು ಭ್ರೂಣಹತ್ಯೆ, ಪ್ರಾಥಮಿಕ ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಮದುವೆ ಮಾಡಿ ಕೊಡುವುದು ಹಾಗೂ ಮುಂದೆ ಗಂಡನ ಮನೆಗೆ ಹೋದಾಗ ಉದ್ಯೋಗ ಮಾಡಲು ಶಿಕ್ಷಣ ಕಲಿತರು ಸಹ ಮನೆಯಲ್ಲಿ ಅಡುಗೆ ಮಾಡಿಕೊಂಡು ಇರುವುದು ದುರಾದೃಷ್ಟಕರ ಇದು ಬದಲಾಗಬೇಕು ಎಂದರು .
ಹೆಣ್ಣು ಸಂಸಾರದ ಹುಣ್ಣು ಅಲ್ಲ, ಕಣ್ಣು ಎಂದು ತೋರಿಸಬೇಕು. ಹಾಗೂ ಮನೆ ಬೆಳಗುವ ಜ್ಯೋತಿ ಎಂದು ಈ ಪುರುಷ ಪ್ರಧಾನ ಕುಟುಂಬ ಅರ್ಥಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ವಿಜಯಲಕ್ಷ್ಮಿ ಡಿ, ಹೆರಕಲ್ ಹೇಳಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಅಪ್ಪಾಸಾಬ ದೇಸಾಯಿ ಪ್ರಭಾರಿ ಮುಖ್ಯ ಗುರುಗಳು ವಹಿಸಿದ್ದರು. ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಶರಣಪ್ಪಪ ಚಿಕ್ಕಮೇಟಿ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ಶಾಲಾ ಶಿಕ್ಷಕರಾದ ಚಂದ್ರಕಾಂತ ಅಂಟಿನ, ಅನಿತಾ ಪೂಜಾರಿ ಖಾಜಪ್ಪ ತಳಕೇರಿ, ಶೀಲಾ ಮಲ್ಲಿಕಾರ್ಜುನ ಮಡಿವಾಳ, ಭುವನೇಶ್ವರಿ, ಗಾಯತ್ರಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.