ಕಲಬುರಗಿ: ನಗರದ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ ಇಂದು ರಾತ್ರಿ 12:30 ಕ್ಕೆ ಜೆ.ಎನ್.ಯು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ, ಆರ್.ಎಸ್.ಎಸ್ , ಎ.ಬಿ.ವಿ.ಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅಖಿಲಾ ಭಾರತಿ ಮಹಿಳಾ ಸಂಘಟನೆಯ ಕೆ. ನೀಲಾ ಸಿ.ಪಿ.ಐ ಪಕ್ಷದ ಮೌಲಾ ಮುಲ್ಲಾ, ಎಸ್.ಡಿ.ಪಿ.ಐ ಪಕ್ಷದ ನಜೀರ್ ಅಲಿಂ ಇಲಾಹಿ ಸೇರಿದಂತೆ ವಿವಿಧ ಸಂಘಟನೆ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಕೇಂದ್ರದ ಮೋದಿ ಮತ್ತು ಅಮಿತ್ ಶಾ ಸರಕಾರದ ವಿರೋಧ ಆಕ್ರೋಶ ವ್ಯಕ್ತಪಡಿಸಿ, ಎ.ಬಿ.ವಿ ಹಾಗೂ ಆರ್.ಎಸ್.ಎಸ್ ಸಂಘಟನೆ ರದ್ದು ಪಡಿಸಿಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರ್ತಿ ಮಾತನಾಡಿ, ಗೃಹ ಮಂತ್ರಿ ಅಮಿತ್ ಶಾ ತುಕಡೆ ತುಕಡೆ ಗ್ಯಾಂಗ್ ಗೆ ಬುದ್ದಿ ಕಲಿಸ್ತೇವೆ ಎಂದು ಹೇಳಿದಿರಿ, ಇಂದು ಈ ರೀತಿ ಹಲ್ಲೆ ಮಾಡ್ಸಿ ದ್ವೇಷ ಸಾಧಿಸುತಿದ್ದಿರಿ, ದೇಶದ ತುಕಡೆ ತುಕಡೆ ಸಿಎಎ ಮತ್ತು ಎನ್.ಆರ್.ಸಿ ಮೂಲಕ ಮಾಡುತಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ನಮ್ನ ಮೇಲೆ ಗುಂಡು ಹಾರಿಸಬಹುದು, ಲಾಠಿ ಚಾರ್ಚಜ್ ಮಾಡ್ಸಿಬಹುದು ಆದರೆ ದೇಶದ ದ್ವನಿ ಹತ್ಯಿಕಲು ನಿಮ್ಮಗೆ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿ ಮುಖಂಡರಾದ ಗಂಗಾಧರ ಮಾಡಬೂಳ್ ಮಾತನಾಡಿ, ಜೆ.ಎನ್.ಯು ವಿದ್ಯಾರ್ಥಿಗಳ ಮೇಲೆ ಹಲ್ಕೆ ನಡೆಸುವ ಮೂಲಕ ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕುವ ಕೆಲಸ ಸರಕಾರ ಮಾಡುತಿದ್ದು, ಕುಡಲ್ಲೆ ಎ.ಬಿ.ವಿ.ಪಿ ಸಂಘಟನೆಯನ್ನು ನಿಶೇದ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರೊ. ಖಾನಾಪುರೆ ಮಾತನಾಡಿ ಮಾತೆ ದೇವೂ ಭವ ಎಂದು ಹೇಳುವ ಬಿಜೆಪಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತಾರೆ, ಹಲ್ಲೆ ನಡೆಸುತಿರುವುದು ಇಡಿ ದೇಶಕ್ಕೆ ಜಗಜಾಹಿರಾತ್ ಆಗಿದೆ. ಅನಕ್ಷರಸ್ಥ ಹೊಂದಿದ ಜನರಿಗೆ ಜನ್ಮದಿನಂಕವೇ ಗೊತ್ತಿಲ್ಲದವರು ತಮ್ಮ ಪೌರತ್ವ ಹೇಗೆ ಸಾಬಿತ ಮಾಡಬೇಕು ಎಂದು ಪೌರತ್ವ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.