ವಿದ್ಯಾರ್ಥಿಗಳು ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ವೇಣುಗೋಪಾಲ ಜೇವರ್ಗಿ ಕರೆ.

0
65

ಸುರಪುರ: ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಈ ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಚುನಾವಣೆಗಳಲ್ಲಿ ಮತದಾನ ಮಾಡುವುದು ಮುಖ್ಯವಾಗಿದೆ ಆದ್ದರಿಂದ ಹದಿನೆಂಟು ವರ್ಷದ ಎಲ್ಲಾ ವಿದ್ಯಾರ್ಥಿಗಳು ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಿ ಎಂದು ಶ್ರೀಪ್ರಭು ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ವೇಣುಗೋಪಾಲ ಜೇವರ್ಗಿ ತಿಳಿಸಿದರು.

ಶ್ರೀ ಪ್ರಭು ಕಲಾ, ವಿಜ್ಞಾನ ಹಾಗೂ ಜೆ. ಎಮ್. ಬೊಹ್ರಾ ವಾಣಿಜ್ಯ ಪದವಿ ಹಾಗು ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಮತದಾನ ಎಂಬುದು ದೇಶವನ್ನು ಮುನ್ನಡೆಸುವ ಸರಕಾರ ರಚನೆಯ ಬಹುಮುಖ್ಯವಾದ ಅಂಗವಾಗಿದ್ದು ಇದನ್ನು ಎಲ್ಲರು ಅರಿತು ಮತದಾನ ಮಾಡಲು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಕೊಂಡು ಮತ ಚಲಾಯಿಸಿದಲ್ಲಿ ಉತ್ತಮ ಸರಕಾರ ರಚನೆ ಸಾಧ್ಯ ಮತ್ತು ಸಂವಿಧಾನದ ಆಶಯವನ್ನು ಎತ್ತಿಹಿಡಿದಂತಾಗಲಿದೆ ಎಂದರು.

Contact Your\'s Advertisement; 9902492681

ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಮತ್ತು ಎನ್.ಎಸ್.ಎಸ್. ಘಟಕದ ಮುಖ್ಯಸ್ಥರಾದ ಡಾ. ಸಾಯಿಬಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಮತದಾನನೊಂದಣಿ ಪ್ರಕ್ರೀಯೆ ಬಹುಮುಖ್ಯವಾದ ಹಂತವಾಗಿದ್ದು ಮತದಾನದಿಂದ ವಂಚಿತರಾಗುವ ಯುವ ಸಮುದಾಯವನ್ನು ಮತದಾನದ ವ್ಯಾಪ್ತಿಗೆ ತಂದು ಪ್ರಜಾಪ್ರಭುತ್ವದ ಆಶಯಗಳನ್ನು ಪ್ರಚುರಪಡಿಸುವಲ್ಲಿ ಅತ್ಯಂತ ಮಹತ್ವದ ಕಾರ್ಯ ಇದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಎಂ.ಡಿ.ವಾರೀಸ್,ಗ್ರಂಥಪಾಲ ಎಸ್.ಎಮ್.ಸಜ್ಜನ್, ಡಾ. ಸುರೇಶ ಮಾಮಡಿ ಡಾ. ಉಪೇಂದ್ರ ನಾಯಕ ಇದ್ದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಚಂದ್ರಶೇಖರ ಗುಡಗುಂಟಾ ಹಾಗೂ ಕಾಲೇಜಿನ ಸಿಬ್ಬಂದಿಗಳಾದ ಡಾ. ಬಸವರಾಜ ಹಿರೇಮಠ,ಅಮ್ರೀನ ಫಾತಿಮಾ,ಧರ್ಮರಾಜ ಪಿ.,ಮಲ್ಹಾರಾವ,ವೀರಣ್ಣ ಜಾಕಾ,ಯಲ್ಲಪ್ಪ , ಧರ್ಮರಾವ ಕೆ.,ರಮೇಶ ವಿ. ಸಿಂಗ್,ಸಂತೋಷ, ಕಾಳಪ್ಪ ಶಹಬಾದಿ, ಬಿ.ಗಿ. ಗಣಾಚಾರಿ, ರೇವಣಸಿದ್ದಪ್ಪ,ಸಿದ್ದಣ್ಣ,ಮೌನೇಶ, ಅನಿತಾ ಹುಗ್ಗಿ ಉಪಸ್ಥಿತರಿದ್ದರು. ವೀರಣ್ಣ ಜಾಕಾ ನಿರೂಪಿಸಿದರು, ಸಂತೋಷ ಬಿ. ಸ್ವಾಗತಿಸದರು,ಯಲ್ಲಪ್ಪ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here