ಕಲಬುರಗಿ: ಇಂದು ನಗರದ ದರ್ಗಾ ಪ್ರದೇಶದ ಸೈಯದ್ ಅಕ್ಬರ್ ಹುಸೇನಿ ಟರ್ಫ್ ಮೈದಾನದಲ್ಲಿ ಕೆ.ಬಿ.ಎನ್ ಪ್ರೀಮಿಯರ್ ಲಿಗ್ ಸೆಷನ್ 3 ಕ್ರಿಕೆಟ್ ಪಂದ್ಯ 10 ದಿನದ ಪಂದ್ಯವು ಎಂ.ಎಸ್.ಕೆ. ಮಿಲ್ ಟೈಟಾನ್ ವಿ/ಸ ರೋಜಾ ಸ್ಟಾರ್ ನಡುವ ನಡೆದಿದ್ದು, 16.5 ಎಸೆತದಲ್ಲಿ 88 ರನ್ ಗಳು ಪಡೆದು 17 ರನ್ ಪಡೆದು ರೋಜಾ ಸ್ಟಾರ್ ಜಯಗಳಿಸಿತು.
ಮೊದಲದ ಪಂದ್ಯದ ರೋಜಾಸ್ಟಾರ್‌ನ ಕ್ಯಾಪ್ಟನ್, ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಹಾಗೂ ಎರಡನೇ ಪಂದ್ಯದ ಗಂಜ್ ಗ್ಲಾಡಿಯೇಟರ್ ಕ್ಯಾಪ್ಟನ್ ಸಂತೋಷ್ ಮಟ್ಟಿ ಮ್ಯಾನ್ ಮ್ಯಾಚ್ ಪ್ರಶಸ್ತಿಯನ್ನು ಕ್ರಿಕೆಟ್ ಪಂದ್ಯದ ಮುಖ್ಯ ಅತಿಥಿಗಳಾದ ಸೈಯದ್ ಷಾ ಆರಿಫ್ ಹುಸೇನಿ ಮತ್ತು ಸೈಯದ್ ಜಾಕಿ ಹುಸೇನಿ ಅವರಿಂದ ಎರಡು ಟೀಮ್ ಗಳ ಆಟಗಾರರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪಂದ್ಯದಲ್ಲಿ ಆಡಿದ ಆಟಗಾರರು ಮತ್ತು ವಿಕ್ಷಕರು ಇದ್ದರು.
10 ನೇ ದಿನದ 1 ನೇ ಪಂದ್ಯ ರೊಜಾ ಸ್ಟಾರ್ ವಿ / ಸೆ. ಎಂ.ಎಸ್.ಕೆ. ಮಿಲ್ ಟೈಟಾನ್ ನಡುವೆ ಪ್ರಥಮ ಪಂದ್ಯ ಆರಂಭವಾಗಿದ್ದು, ರೋಜಾಸ್ಟಾರ್ ಟಾಸ್ ಗೆದ್ದು,ಬ್ಯಾಟಿಂಗ್ ಆಯ್ಕೆ ಪಡೆದರು. ರೋಜಾಸ್ಟಾರ್ 105 ರ ಒಟ್ಟು ಸ್ಕೋರ್ 9 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ರನ್ ಗಳಿಸಿತು. ನೇ ಪಂದ್ಯ ಎಂ.ಎಸ್.ಕೆ. ಮಿಲ್ ಟೈಟಾನ್ 88 ರನ್ಗಳು 16.5 ಓವರ್ಸ್ 5 ಬಾಲ್, 10 ವಿಕೆಟ್ ನಷ್ಟದಿಂದ , 17 ರನ್ಗಳಿಂದ ರೋಜಾಸ್ಟಾರ್ ಪಂದ್ಯ ವಶಪಡಿಸಿಕೊಂಡಿದೆ.
ಮಧ್ಯಾಹ್ನ 1 ನೇ ಪಂದ್ಯ ಗಂಜ್ ಗ್ಲಾಡಿಯೇಟರ್ ವಿ / ಸೆ. ಸ್ಟೇಷನ್ ಈಗಲ್ ನಡುವೆ ನಡೆದಿದ್ದು, ಸ್ಟೇಷನ್ ಈಗಲ್ ಟಾಸ್ ಗೆಲುವ ಮೂಲಕ ಬ್ಯಾಟಿಂಗ್‌ಗೆ ಆಯ್ಕೆ ಮಾಡಿಕೊಂಡರು. ಸ್ಟೇಷನ್ ಈಗಲ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 152 ರನ್ ಗಳಸಿದರೆ, 2 ನೇ ಪಂದ್ಯ ಗಂಜ್ ಗ್ಲಾಡಿಯೇಟರ್ ಪಂದ್ಯವನ್ನು 17 ಓವರ್ 1 ಬಾಲ್ ಆಡುವ ಮೂಲಕ ಜಯಗಳಿಸಿತು.