ಕಲಬುರಗಿ: ಕಲಬುರಗಿ ಯೂಥ್ ಕಾಂಗ್ರೇಸ್ ಕಾರ್ಯಕರ್ತರಿಗಾಗಿ ನಾಳೆ ಇಲ್ಲಿನ ( ಬಿಗ್ ಬಜಾರ್) ಮಿರಜ್ ಚಿತ್ರಮಂದಿರದಲ್ಲಿ ಮಧ್ಯಾನ್ಹ 1 ಗಂಟೆಯ ಹಿಂದಿ ಸಿನೆಮಾ ” ಚಾಪಕ್ ” ( Chhapaak) ಚಿತ್ರದ ಎಲ್ಲಾ ಟಿಕೇಟ್ ಗಳನ್ನು ಬುಕ್ ಮಾಡಲಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
” ಕಾಂಗ್ರೆಸ್ ನ ಈ ಪ್ರಯತ್ನ ಆ್ಯಸಿಡ್ ಸಂತ್ರಸ್ತೆಯ ಜೊತೆಗೆ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ಕೊಡುವುದರ ಜೊತೆಗೆ ಫ್ಯಾಸಿಸ್ಟ್ ಶಕ್ತಿಗಳ ವಿರುದ್ದದ ಪ್ರದರ್ಶನವಾಗಿದೆ” ಎಂದು ಶಾಸಕರು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಬಣ್ಣಿಸಿದ್ದಾರೆ.
Kalaburagi Youth Congress have blocked an entire show tomorrow for #Chhapaak
A small way of expressing solidarity with acid victims & also combat fascists who think they can dictate terms in a democracy.@deepikapadukone @meghnagulzar#Jnu
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 10, 2020
ನಾಳೆ 12.30 ರ ಸುಮಾರಿಗೆ ಮಾನ್ಯ ಶಾಸಕರು 1 ಗಂಟೆಯ ಷೋ ಮುನ್ನ ಅಲ್ಲಿ ಉಪಸ್ಥಿತರಿರುವುದರ ಜೊತೆಗೆ ಜೆ.ಎನ್.ಯು ಗಾಯಾಳು ವಿದ್ಯಾರ್ಥಿಗಳನ್ನು ಭೇಟಿಯಾಗಿರುದಕ್ಕೆ ತೀವ್ರ ಟೀಕೆಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರಿಗೆ ಶುಭಹಾರೈಸಲಿಸಿ, ಶಾಸಕ ಖರ್ಗೆ ಕೂಡಾ ಸಿನೆಮಾ ವೀಕ್ಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.