ಸುರಪುರ ಇತಿಹಾಸ ಮಕ್ಕಳ ನೆನಪಲ್ಲಿ ಶಾಸ್ವತವಾಗಿ ಉಳಿಯಲಿ: ರಾಜಾ ಕೃಷ್ಣಪ್ಪ ನಾಯಕ

0
133

ಸುರಪುರ: ಇಲ್ಲಿಯ ಇತಿಹಾಸ ಭವ್ಯವಾದುದಾಗಿದ್ದು ಇದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ನಗರದ ಎಲ್ಲಾ ಪ್ರೌಢ ಶಾಲಾ ಮಕ್ಕಳಿಗೆ ಪರೀಕ್ಷೆಯ ರೂಪದಲ್ಲಿ ಪರಿಚಯಿಸಲಾಗುತ್ತಿದೆ ಎಂದು ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ತಿಳಿಸಿದರು.

ನಗರದ ದರಬಾರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ,ಇಂದು ಸುಮಾರು ಐದುನೂರು ಜನ ವಿದ್ಯಾರ್ಥಿಗಳು ಸುರಪುರ ಸಂಸ್ಥಾನದ ಅರಸರ ಬಗ್ಗೆ ಪರೀಕ್ಷೆ ಬರೆಯುತ್ತಿದ್ದು ಉತ್ತಮ ಅಂಕಗಳಿಸಿದ ಪ್ರತಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಮೂರು ಬಹುಮಾನಗಳನ್ನು ನೀಡಲಾಗುತ್ತದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿ,ಕಿತ್ತೂರ ಇತಿಹಾಸಕ್ಕಿಂತಲು ಸುರಪುರ ಇತಿಹಾಸ ಭವ್ಯವಾದುದಾಗಿದೆ.ಆದರೆ ಸರಕಾರಗಳ ನಿರ್ಲಕ್ಷ್ಯದಿಂದ ಇತಿಹಾಸವನ್ನು ಬೆಳಕಿಗೆ ತರುವ ಕೆಲಸವಾಗುತ್ತಿಲ್ಲ.ಕೊಲೂರು ಮಲ್ಲಪ್ಪನವರ ನಂತರ ಇದುವರೆಗೆ ನಾಯಕ ಮನೆತನದವರೆ ಆಡಳಿತ ನಡೆಸಿದ್ದರು ಸುರಪುರ ಇತಿಹಾಸವನ್ನು ಶಾಲಾ ಪಠ್ಯದಲ್ಲಿ ಸೇರಿಸುವ ಕೆಲಸವಾಗಿಲ್ಲ.ಈಗ ಶಾಸಕರು ಸಂಸದರಿದ್ದಾರೆ ಎಲ್ಲರೂ ಸೇರಿ ಸರಕಾರಕ್ಕೆ ಮನವರಿಕೆ ಮಾಡುವ ಮೂಲಕ ಇತಿಹಾಸ ಪಠ್ಯದಲ್ಲಿ ಸೇರಿಸುವಂತೆ ಮಾಡುವ ಜವಬ್ದಾರಿಯಿದೆ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಎಲ್ಲಾ ಗಣ್ಯರು ೨೦೨೦ರ ದಿನದರ್ಶಿಕೆ ಬಿಡುಗಡೆಗೊಳಿಸಿದರು.ನಂತರ ನಗರದ ಹನ್ನೆರಡು ಪ್ರೌಢ ಶಾಲೆಗಳ ಸುಮಾರು ಐದು ನೂರು ಜನ ವಿದ್ಯಾರ್ಥಿಗಳು ಸುರಪುರ ಸಂಸ್ಥಾನ ಮತ್ತು ಅರಸರ ಕುರಿತಾದ ಪರೀಕ್ಷೆ ಬರೆದರು.ಈ ಸಂದರ್ಭದಲ್ಲಿ ರಾಜಾ ಸೀತಾರಾಮ ನಾಯಕ,ಎಸ್.ಗೋಪಾಲ ನಾಯಕ,ಎಸ್.ರಂಗಪ್ಪ ನಾಯಕ,ರಾಜಾ ಲಕ್ಷ್ಮೀನಾರಾಯಣ ನಾಯಕ,ಎಸ್.ಶ್ರೀನಿವಾಸ ನಾಯಕ,ರಾಜಾ ಪಿಡ್ಡ ನಾಯಕ,ಎಸ್.ಚಿರಂಜೀವಿ ನಾಯಕ,ಡಾ: ಉಪೇಂದ್ರ ನಾಯಕ ಸುಬೇದಾರ,ಯಲ್ಲಪ್ಪ ಕಾಡ್ಲೂರು,ಹಣಮಂತ್ರಾಯ ದೊರೆ,ಅಪ್ಪಣ್ಣಾ ಕುಲಕರ್ಣಿ,ಮಲ್ಲಾರಿ,ಲಂಕೆಪ್ಪ ಸೇರಿದಂತೆ ಅನೇಕರಿದ್ದರು.ಶ್ರೀಹರಿರಾವ್ ಆದವಾನಿ ಸ್ವಾಗತಗೀತೆ ಆಡಿದರು,ಶಿವಕುಮಾರ ಮಸ್ಕಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here