ಉದ್ಯೋಗ ಖಾತರಿ ಯೋಜನೆ ಅಡಿ ನಿರ್ಮಿಸಿದ ಗೋಕಟ್ಟೆ ಆಯುಕ್ತ ಅನಿರುದ್ಧ ಶ್ರವಣ್ ಭೆಟಿ ವೀಕ್ಷಣೆ

0
233

ಕಲಬುರಗಿ: ತಾಲ್ಲೂಕಿನ ಕವಲಗಾ ಬಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸನಾಳ ಗ್ರಾಮಕ್ಕೆ ಕರ್ನಾಟಕ ರಾಜ್ಯದ ಉದ್ಯೋಗ ಖಾತರಿ ಯೋಜನೆಯ ಆಯುಕ್ತ ಅನಿರುದ್ಧ ಶ್ರವಣ್ ಭೆಟಿ ನೀಡಿ ಖಾತರಿ ಅಡಿ ಗ್ರಾಮದಲ್ಲಿ ಕೈಗೊಂಡ ಗೋಕಟ್ಟೆ ವೀಕ್ಷಿಸಿದರು.

ನಂತರ ಮಾತನಾಡುತ್ತಾ ಬರದ ಗ್ರಾಮವಾದ ಬಸನಾಳ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಗೋಕಟ್ಟೆ ನಿರ್ಮಿಸಲಾಗಿದ್ದು. ಗ್ರಾಮದ ಜನ ಜಾನುವಾರುಗಳಿಗೆ ಮತ್ತು ಗ್ರಾಮದಲ್ಲಿರುವ ಬೋರವೆಲ್ ಗಳಿಗೆ ನೀರಿನ ಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ.ಉತ್ತಮವಾಗಿ ಕವಲಗಾ ಬಿ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಲಾಗಿದೆ ಎಂದು ಆಯುಕ್ತರು ಹೇಳಿದರು.

Contact Your\'s Advertisement; 9902492681

ಅದರಂತೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಕೆಲಸಗಳು ಮಾಡಿ ರಾಜ್ಯದಲ್ಲಿ ಮಾದರಿ ಗ್ರಾಮ ಪಂಚಾಯತಿ ಯನ್ನಾಗಿಸಲು ಇನ್ನೂ ಪ್ರಯತ್ನಿಸಲು ತಿಳಿಸಿದರು. ಮತ್ತು ಕವಲಗಾ ಬಿ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಗೆ ಮತ್ತು ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮತ್ತು ಇನ್ನೂ ಹೆಚ್ಚಿನ ನೆರವು ಕೊಡುವ ಭರವಸೆ ನೀಡಿದರು.

ಕಲಬುರಗಿ ಜಿಲ್ಲಾ ಪಂಚಾಯತ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಪಿ.ರಾಜಾ, ಜಿ.ಪಂ.ಸಹಾಯಕ ಕಾರ್ಯದರ್ಶಿ ಮಹಾದೇವ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಕವಲಗಾ ಬಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಯ್ಯಮ್ಮ ಸುಬೇದಾರ, ಮಾಳಪ್ಪ ಪೂಜಾರಿ, ಸಿದ್ದರಾಮ ಹಾವನೂರ, ಚಂದ್ರಕಾಂತ ಶಕಾಪೂರ, ರಾಜಕುಮಾರ ರೆಡ್ಡಿ, ಕು.ಮಾಲಾಶ್ರೀ, ಮೌಷೀನಖಾ, ಕವಲಗಾ ಬಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಶಿವಾನಂದ ಮತ್ತು ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here