ಕಡ್ಡಾಯವಾಗಿ ಮತದಾನ ಮಾಡುವುದು ಪ್ರತಿ ಪ್ರಜೆಯ ಹಕ್ಕು: ಚಾಮನಾಳ

0
175

ಸುರಪುರ: ಭಾರತೀಯನಾಗಿ ೧೮ ವರ್ಷ ತುಂಬಿದ ಪ್ರತಿಯೊಬ್ಬನು ಚುನಾವಣೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದು ದೇಶದ ಪ್ರಜೆಯ ಹಕ್ಕಾಗಿದೆ ಎಂದು ಪ್ರಾಂಶುಪಾಲ ಪರಶುರಾಮ ಚಾಮನಾಳ ಮಾತನಾಡಿದರು.

ಡಾ: ಬಾಬಾ ಸಾಹೇಬ ಅಂಬೇಡ್ಕರ ವಿದ್ಯಾವರ್ಧಕ ಸಂಘದ ಪ್ರಿಯದರ್ಶಿನಿ ಪದವಿ ಹಾಗು ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ,ನಮ್ಮ ದೇಶ ಹೇಗಿರಬೇಕೆಂಬ ಕಲ್ಪನೆಯನ್ನು ಸಾಕಾರಗೊಳಿಸಲು ಒಂದು ಉತ್ತಮ ಸರಕಾರ ಅವಶ್ಯವಾಗಿರಲಿದೆ.ಅಂತಹ ಉತ್ತಮ ಸರಕಾರ ಜಾರಿಗೆ ಬರಲು ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು.ಮತದಾನದ ಮಹತ್ವವನ್ನು ಕುರಿತು ಜಾಗೃತಿ ಮೂಡಿಸಲೆಂದೇ ಪ್ರತಿ ವರ್ಷ ಜನೆವರಿ ೨೫ ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

Contact Your\'s Advertisement; 9902492681

ನಂತರ ಎಲ್ಲಾ ಉಪನ್ಯಾಸಕರಿಗು ಹಾಗು ವಿದ್ಯಾರ್ಥಿಗಳಿಗು ಪ್ರಜಾಪ್ರುಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತಿಯಿಂದ ಮತ್ತು ಧರ್ಮ,ಜನಾಂಗ,ಜಾತಿ,ಮತ,ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞಾ ಸ್ವೀಕರಿಸುತ್ತೆವೆಂದು ವಿಧಿಯನ್ನು ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮಲ್ಲು ಬಾದ್ಯಾಪುರ,ಶರಣು ನಾಯಕ, ಭೀಮರಾಯ, ಮೌನೇಶ, ರಮೇಶ, ಫಿರೋಜ್ ಖಾನ್,ಶ್ರೀದೇವಿ ಬೋಡಾ,ಸನಾ ಮುರಾದ್,ಹಿನಾ ಚೌದರಿ,ಸಭಾ ಸೇರಿದಂತೆ ಎಲ್ಲಾ ಸಿಬ್ಬಂದಿ ಹಾಗು ವಿದ್ಯಾರ್ಥಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here