ಸುರಪುರ: ಸ್ವಾಮಿ ವಿವೇಕಾನಂದರು ವೀರಸನ್ಯಾನಿ ಸಿಡಿಲ ಮರಿಯಿದ್ದಂತೆ ನಮ್ಮ ದೇಶದ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿ ಕೊಟ್ಟವರು ಎಂದು ಡಾ: ಉಪೇಂದ್ರ ನಾಯಕ ಸುಬೇದಾರ ಮಾತನಾಡಿದರು.
ನಗರದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿವಿವೇಕಾನಂದ ಹಾಗು ನೇತಾಜಿ ಸುಭಾಶ್ಚಂದರ ಭೋಸ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ದೇಶದ ಬಗ್ಗೆ ಅರಿಯಬೇಕಾದರೆ ದೇಶ ಸುತ್ತಬೇಕಿಲ್ಲ ಬದಲಾಗಿ ಸ್ವಾಮಿವಿವೇಕಾನಂದರಂತಹ ಮಹಾನ್ ಚೇತನರ ಜೀವನ ಚರಿತ್ರೆ ಓದಿದರೆ ಸಾಕು ಸರಳವಾಗಿ ತಿಳಿಯಬಹುದು ಎಂದರು.
ನೇತಾಜಿ ಸುಭಾಶ್ಚಂದ್ರ ಭೋಸವರು ಅಗರ್ಭ ಶ್ರೀಮಂತ ಕುಟುಂಬದಲ್ಲಿ ಜನಸಿದರು ದೇಶಪ್ರೇಮವನ್ನು ಬೆಳಸಿಕೊಂಡು ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನು ತೊರೆದು ಬಂದವರು.ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದವರು.ಅವರ ನಿಲುವು ನಮಗೆಲ್ಲ ಮಾದರಿಯಾಗಬೇಕೆಂದರು.ನೇತಾಜಿಯವರು ಉನ್ನತ ವಿದ್ಯಾಭಾಸ ಮಾಡಿದರು ಆಜಾದ್ ಹಿಂದ್ ಫೌಜ್ ಸೇನೆಯನ್ನು ಕಟ್ಟಿ ದೇಶದ ಸ್ವಾತಂತ್ರ್ಯಕ್ಕೆ ನಿರಂತರ ಹೋರಾಡಿದ್ದಾರೆ.೧೯೪೭ರ ಪೂರ್ವದಲ್ಲಿಯೇ ಬ್ರಿಟೀಷರು ದೇಶಬಿಟ್ಟು ಹೋಗಲು ಸಿದ್ದರಾದಂತ ಸಂದರ್ಭದಲ್ಲಿಯೇ ಅವರು ಅಸುನೀಗಿದ್ದು ದೇಶಕ್ಕೆ ದೊಡ್ಡ ನಷ್ಟವಾಗಿತ್ತು.ಆದರೂ ಅವರು ಇಂದಿಗೂ ತೀವ್ರಗಾಮಿ ಕೆಚ್ಚೆದಯ ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಕ್ಷರ ದಸೋಹದ ತಾಲೂಕು ನಿರ್ದೇಶಕ ಮೌನೇಶ ಕಂಬಾರ ಮಾತನಾಡಿ,ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗದೆ ಹೆತ್ತವರು ಕಟ್ಟಿರುವ ಕನಸನ್ನು ನನಸು ಮಾಡಲು ಓದಿಗೆ ಸಮಯವನ್ನು ನಿಡೋಣ.ಇದರಿಂದ ನಮ್ಮ ಬದುಕು ಮಾತ್ರ ಸುಧಾರಣೆಯಲ್ಲದೆ ದೇಶಕ್ಕೆ ಉತ್ತಮ ಪ್ರಜೆ ನಾಯಕರಾಗಲು ಓದು ಮುಖ್ಯ ಎಂಬುದನ್ನು ಗಮನದಲ್ಲಿರಿಸಿಕೊಳ್ಳೋಣ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಸ್ವಾಮಿವಿವೇಕಾನಂದ ಹಾಗು ನೇತಾಜಿ ಸುಭಾಶ್ಚಂದ್ರ ಭೋಸರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ಎಬಿವಿಪಿ ವಿಭಾಗಿಯ ಸಂಚಾಲಕ ನಾಗರಾಜ ಮಕಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಜಿಲ್ಲಾ ಸಂಚಾಲಕ ಕ್ಯಾತಪ್ಪ ಮೇದಾ ಸ್ವಾಗತಿಸಿದರು,ನಗರ ಕಾರ್ಯದರ್ಶಿ ಪರಶುರಾಮ ಬೈಲಕುಂಟಿ ನಿರೂಪಿಸಿದರು,ಹಾಸ್ಟೆಲ್ ಪ್ರಮುಖ ಹಣಮಂತ್ರಾಯ ಮಂಜಲಾಪುರ ವಂದಿಸಿದರು.ನಿಂಗಪ್ಪ ಅಮ್ಮಾಪುರ,ಜಗದೀಶ,ಮೌನೇಶ,ರಾಯಣ್ಣ ಸೇರಿದಂತೆ ಅನೇಕರಿದ್ದರು.